ಪುಟ:ನನ್ನ ಸಂಸಾರ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮಧುಸೂದನ 11

ಐಶ್ವರವನ್ನೆಲ್ಲಾ ಇಟ್ಟಿದ್ದರು, ಕಳ್ಳರಾಗಲೀ ಅಥವಾ ಲೂಟಿಹೊಡೆಯುವ ಸೈನ್ಯವಾಗಲಿ ಬರುತ್ತೆಂದು ತಿಳಿದಕೂಡಲೇ ಅವರು ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಈ ಗುಪ್ತ ಮಾರ್ಗದೊಳಕ್ಕೆಹೋಗಿ ಹತ್ತಿಪ್ಪತ್ತು ದಿವಸಗಳು ವಾಸಮಾಡುತ್ತಿದ್ದರು. ಅದು ಕತ್ತಲೆಯೂ ಮತ್ತು ಅಸಹ್ಯಕರವೂ ಆದ ಪ್ರದೇಶವಾಗಿದ್ದರೂ ಪ್ರಾಣಭಯ ದಿಂದಲೂ ಧನದಾಶೆಯಿಂದಲೂ ಅವರು ಎಲ್ಲವನ್ನೂ ಸಹನೆಯಿಂದ ಅನುಭವಿಸುತ್ತಿ ದ್ದರು. ಆದ್ದರಿಂದಲೇ ವಾಸವಪುರದ ಜಹಗೀರ್‌ದಾರರು ಪುರಾತನ ಕಾಲದಿಂದಲೂ ಅಶುಲೈಶ್ವರಸಂಪನ್ನರಾಗಿರುತ್ತಾರೆ. ಇದರವಿಷಯವು ಈಗಲೂ ಯಾರಿಗೂ ತಿಳಿಯದು. ನನಗೆ ಮಾತ್ರ ಇದು ಮೊದಲಿಂದ ತಿಳಿದಿತ್ತು. ನಮ್ಮಯಮಾನರಾದ ಸೋಮಸುಂದರ ರಾಯರಿಗೂ ಈ ವಿಷಯ ತಿಳಿದಿಲ್ಲ.

  ಭಾಸ್ಕರ:--ಈಗಲೀಗನೀವ, ನನಗೆ ಬಳಸತಾಯ ಮಾಡಿದಿರಿ, ಮಧುಸೂದ ನನು ಹೋದ ಮಾರ್ಗವ ನನಗೆ ತಿಳಿಯಿತು.

ಕೃಷ್ಣ...ಏನು ? ಮಧುಸೂದನನೂ ಆ ಮಾಗ-ದಲ್ಲಿ ಹೋದನೇ ? ಎಲ್ಲಿಗೆ ಹೋದನು ? ಅಯ್ಯೋ ! ಅದರ ವಿಷಯವನ್ನು ಅವನಿಗೇಕೆ ನಾನು ತಿಳಿಸಿದೆನು ಎಂದು ಪೇಚಾಡಿದನು. - ಭಾಸ್ಕರ-ಅಯ್ಯಾ ಸಮಾಧಾನವನ್ನು ತಂದುಕೊಳ್ಳಿ, ನಿವ್ರಹೇಳಿದ್ದರಿಂದ ಅಷ್ಟೇನೂ ಕೆಡಕಾಗಲಿಲ್ಲ. ಈಗ ದಯವಿಟ್ಟು ಮಧುಸೂದನನು ಇಟ್ಟಿರುವ ಕಾಗದ ಗಳನ್ನು ತಂದು ಕೊಡಿರಿ. ಮುದುಕನು ಏನೇನೋ ಗೊಣಗುತ್ತಾ ಹೊರಟುಹೋದನು. ಭಾಸ್ಕರನು ಅವನು ಹೇಳಿದ ಎಲ್ಲಾ ವಿಷಯಗಳನ್ನೂ ಯೋಚಿಸುತ್ತಾ ಕುಳಿತಿದ್ದನು. ಅವನ ಮನ ಸ್ಸಿಗೆ ನಾನಾಬಗೆಯ ಯೋಜನೆಗಳು ಹೊಳೆದವು, ಒಂದು ವೇಳೆ ಮಧುಸೂದನನ ಕಲ್ಕತ್ತಾ ಸ್ನೇಹಿತರೇನಾದರೂ ಕೆಡಕನ್ನು ಮಾಡಿರಬಹುದೋ ಎಂದು ಯೋಚಿಸಿದನು. ಇಲ್ಲಿ ಮಧುಸೂದನನೇ ಮದುವೆಯಮೇಲೆ ಅಪೇಕ್ಷೆಯಿಲ್ಲದೆ ಆಗುಸ್ತ ಮಾರ್ಗದಲ್ಲೇ ನಾದರೂ ಅಡಗಿರಬಹುದೋ ಎಂದೂ ಯೋಚಿಸಿದನು, ಆದರೆ ಆಗಲೇ ಯಾವುದೂ ಸುಯಾಗಿ ತೋರಿಬರಲಿಲ್ಲ. ಅಷ್ಟು ಹೊತ್ತಿಗೆ ಕೃಷ್ಣನು ಒಂದು ಕಂತೆ ಕಾಗದಗಳನ್ನು ತೆಗೆದುಕೊಂಡು ಬಂದು ಮೇಜಿನಮೇಲೆಹಾಕಿ ಬಿಟ್ಟು ಹೊರಟುಹೋದನು. ಭಾಸ್ಕರನು ಎಲ್ಲಾ ಕಾಗದಗಳನ್ನೂ ಒಂದೊಂದಾಗಿ ಓದುತ್ತಾ ಬಂದನು. ಯಾವಕಾಗದದಿಂದಲೂ ಉಪಯೋಗವಾಗಲಿಲ್ಲ, ಕೊನೆಗೆ ನೆಲದಮೇಲೆ ಒಂದು ಚೂರುಕಾಗದವು ಬಿದ್ದಿರುವುದನ್ನು ನೋಡಿ ಅದನ್ನು ತೆಗೆದು ಓದಿದನು. ತಕ್ಷಣವೇ