ಪುಟ:ನಾಸ್ತಿಕ ಕೊಟ್ಟ ದೇವರು.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಸ್ತಿಕ ಕೊಟ್ಟ ದೇವರು

ಸೀತಾಪತಿ, ಮುರಿದು ಬಿದ್ದಿದ್ದ ಮರದ ಒಂದು ಕೊಂಬೆಯಮೇಲೆ ಕುಳಿತು ಪೈಪ್ ಹೊರತೆಗೆದು, ತಂಬಾಕು ತುಂಬಿ, ಕಡ್ಡಿ ಕೊರೆದು ಸೇದತೊಡಗಿದ ...

ಎಂಥ ನಾಟಕ! ಇಷ್ಟು ಹೊತ್ತಿಗೆ ಅಲ್ಲಿ ವಾದ್ಯಗಳು ಮೊಳಗುತ್ತಿರಬಹುದು ... ದೇವರ ಮೆರವಣಿಗೆ ... ಧರ್ಮಶಾಸ್ತ್ರದ ಪಠನ ... ಕೂಲಿಕಾರರ ಸಮುದಾಯ ಭಯಭಕ್ತಿಯಿಂದ ಕೈಜೋಡಿಸಿ ನಿಂತಿರುವ ದೃಶ್ಯ ... ಆ ಸಮಾರಂಭದ ಸರ್ವ ವೆಚ್ಚವನ್ನೂ ವಹಿಸಿದ ತೋಟದಮಾಲಿಕರ ಉಪಸಂಹಾರ ಭಾಷಣ ...

ನಗಬೇಕೆನ್ನಿಸಿತು ಸೀತಾಪತಿಗೆ ...

ಆತ ಎದ್ದು ನಿಂತು ಮುಂದೆ ಸಾಗಿದ.

ಕಾಲುಗಳಿಗೆ ಸಂಕೋಲೆ, ನೀಡಿದ ಕೈ, ದೂರನೋಡುತ್ತ ಹಂಬಲಿಸುವ ದೃಷ್ಟಿ-ಅಂಥ ಆ ಬಡಪಾಯಿ ಹೆಣ್ಣು ಕಣ್ಣೆದುರಿಗೆ ಬಂದಳು. ಸ್ಮರಣೆಯಲ್ಲಿ ఆ ಸ್ಥಿರಚಿತ್ರವನ್ನು ಹೊತ್ತು ಅವನು ದಾರಿ ನಡೆದ.