ಪುಟ:ನಾಸ್ತಿಕ ಕೊಟ್ಟ ದೇವರು.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ಕಾಳ ರಾತ್ರಿ

೧೨೫

ತಾಯಿ, ಮಗಳು, ಆ ಹುಡುಗ ಗಂಡಾತರ ಕಳೀತು, ಕಾಳರಾತ್ರಿ ಕಳೆದು ಬೆಳಗಾಯಿತು.
ನಿಧಾನವಾಗಿ ಉಸಿರಾಡುವುದು ಕಡಮೆಯಾಗುತ್ತಾ ಬಂತು. ಆಕ್ಸಿಜನ್ ಕೊಟ್ಟೆವು . . . ಲಾಸ್ಟ್ ಛಾನ್ಸ್ . . . ಅಲ್ಲಿಗಾಯಿತು.
ತುಂಬ ದುಃಖವಾಗುತ್ತೆ ಮಿಸ್ಟರ್ ಇವರೇ. ನಿಮ್ಮ ಸ್ನೇಹಿತರು . . .

ಕತೆಗಾರ

ಹೌದು; ನನ್ನ ಸ್ನೇಹಿತರು: ಬಾಲೂ ಮೈಸೂರಿನಿಂದ ಬಂದಿದ್ದಾನೆ. ಯಾರೂ ಯಾರನ್ನೊ ಕೂಡಿಸಿದ್ದಾನೆ.
'ಮಾರ್ಗ್'ನಲ್ಲಿ ಶವವನ್ನಿರಿಸಿದ್ದಾರೆ. ಇನ್ನು ಬಾಡಿಗೆ ಕೊಡದೆ ಇವರು ತಮ್ಮ ಮನೆಗೆ ಒಯ್ಯಬೇಕು. ಅಲ್ಲಿಂದ ಮಸಣಕ್ಕೆ.
ನಾನು ಅವರ ಜನವಲ್ಲ; ನನಗೆ 'ಜಾತಿ' ಇಲ್ಲ. ಆದರೆ ನಾನು ಅವರ ಸ್ನೇಹಿತ. ಮಸಣಕ್ಕೆ ಅವರ ಜೊತೆಯಲ್ಲಿ ನಾನೂ ನಡೆಯುವೆ.
ಆ ತಾಯಿಯೋ, ಅತ್ತು ಅತ್ತು ಆ ಕೊಡ ಬರಿದಾಗಿದೆ ; ಆ ಮಗಳು—ತಂಗಿ, ನಿನ್ನ ಮುಖವನ್ನು ಏನೆಂದು ಹೇಗೆಂದು ನೋಡಲಿ ?
ಇಂಜಿನಿಯರಾಗಲಿದ್ದ ಆ ಮಗು ?
ಇದಕ್ಕೆಲ್ಲಕ್ಕೂ ನಾನೇ ಹೊಣೆಯೆಂಬ ಮಹಾಪರಾಧದ ಭಾವನೆ ನನ್ನನ್ನು ಬಾಧಿಸುತ್ತಿದೆ.
ಆ ಕುಟುಂಬದ ಪಾಲಿಗೆ ಕಳೆದ ಒಂದು ರಾತ್ರಿ ಕಾಳರಾತ್ರಿಯಾಯಿತು. ಆದರೆ ಆ ರಾತ್ರಿ ಬರೇ ಹನ್ನೆರಡು ಗಂಟೆಗಳ ಕಾಲಾವಧಿಯ ರಾತ್ರಿ ಖಂಡಿತವಾಗಿಯೂ ಅಲ್ಲ.
ಈ ದಿನ ಒಂದು ಕುಟುಂಬದ ಮೇಲೆ ಈ ಪ್ರೇತವಸ್ತ್ರ; ಒಂದು ಬೆಡ್ ಖಾಲಿ. ನಾಳೆ ಇನ್ನೊಂದು ಕುಟುಂಬದ ಮೇಲೆ ಈ ಪ್ರೇತವಸ್ತ್ರ; ಇನ್ನೊಂದು ಬೆಡ್ ಖಾಲಿ.
ಎಂದ ವಿಷಚಕ್ರ ! ಕಾಳರಾತ್ರಿಯ, ಉರಿ ಹಗಲಿನ, ಮತ್ತೆ ಕಾಳರಾತ್ರಿಯ ಎಂಥ ವಿಷಚಕ್ರ!
. . . ಯುಗಾದಿಯ ಮರುದಿನ ಇದು. ನಾನು ದಿಙ್ಮೂಢನಾಗಿದ್ದೇನೆ. ಚಂದ್ರನದೊಂದು ಅರ್ಧವರ್ತುಲರೇಖೆ ಮುಚ್ಚಂಜೆಯಾದಾಗ ಕಾಣಿಸುತ್ತಿದೆ.