ಪುಟ:ನಾಸ್ತಿಕ ಕೊಟ್ಟ ದೇವರು.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೪

ನಾಸ್ತಿಕ ಕೊಟ್ಟ ದೇವರು

ಗೊತ್ತೆ ? ಆ ಉನ್ಮಾದವೊ ! ಹಾ-ಹ ಎನ್ನುತ್ತ ಆ ಕೈ ಎಲುಬು, ಭೀಮ ಬಲ ಬಂದಂತೆ ಎತ್ತಿ ಎತ್ತಿ ಬೀಸುತಿತ್ತು ; ಹತ್ತಿರ ಬರುತ್ತಿದ್ದ ಸಾವನ್ನು ದೂರಕ್ಕೆ ಓಡಿಸೋಹಾಗೆ.
ಏನಂದಿರಿ? ಏನು ಕಾರಣವೆಂದೆ ?
ಏನು ಕಾರಣ ! ಆ ರೋಗ ಎನೀಮಿಯಾ . . . ಮೊದಲೇ ನಿಶ್ಯಕ್ತಿ . . . ಮೂರು ನಾಲ್ಕು ವಾರಕ್ಕೆ ಹಿಂದೆ ಜ್ವರ ಬಂದಾಗಲೇ ಆಸ್ಪತ್ರೆ ಸೇರಿಸಬೇಕಾಗಿತ್ತು . . . ಗೊತ್ತು, ಖರ್ಚು-ಎನ್ನುತ್ತೀರಿ ನೀವು . . . ಎಲ್ಲ ಕೇಸುಗಳೂ ಹಾಗೇನೇ . . . ಕೊನೆ ಸ್ಥಿತೀಲೇ ಇಲ್ಲಿಗೆ ಬರೋದು... ಆದರೂ ನಾವು ವಿಶ್ವಯತ್ನ ಮಾಡಿದ್ದಾಯ್ತು.
ಹತ್ತು ವರ್ಷಗಳಿಂದ ಅಂಟಿಕೊಂಡಿದ್ದು, ಬಲಗೊಂಡದ್ದು. ಹತ್ತು ವರ್ಷ! ಯುದ್ಧದ ವರ್ಷಗಳು ಮಿಸ್ಟರ್ ಇವರೇ. ಮ್ಯಾಲ್ ನುಟ್ರಿಶನ್ . . . ಪೌಷ್ಟಿಕದ ಅಭಾವ . . . ಚಿಂತೆ, ಭೀತಿ, ಸಂಕಷ್ಟ . . .ನಾನೂ ನೋಡಿ ನೋಡಿ ಸಾಕಾಯ್ತು . . . ಎಷ್ಟೊಂದು ಕೇಸುಗಳು ! ಎಲ್ಲಾ ಒಂದೇ ಥರ . . . ಎಲ್ಲಾ ಈ ಯುದ್ಧ ವರ್ಷಗಳ ಹುತಾತ್ಮರು . . .ಇನ್ನು ಈ ತಲೆ ಮಾರಿನ ಮಕ್ಕಳೋ . . . ಮೈ ಗಾಡ್ !
ಸಾರಿ ಮಿಸ್ಟರ್ ಇವರೇ . . . ನಿಮ್ಮ ಸ್ನೇಹಿತರ ವಿಷಯ ಶುರು ಮಾಡಿ ಇನ್ನೆಲ್ಲಿಗೋ ಬಂದೆ. ಒಮ್ಮೊಮ್ಮೆ ಮನಸ್ಸು ರೋಸಿಹೋಗುತ್ತೆ. ಸಹಿಸೊಕ್ಕಾಗೋದಿಲ್ಲ. ಪಾಪ ! ಆ ಹೆಂಗಸು, ಆ ಮದುವೆಯಾಗದ ಮಗಳು, ಆ ಮಗು ! ಆತ ಒಬ್ಬನೇನಂತೆ ಸಂಪಾದನೆ ಮಾಡ್ತಿದ್ದಾತ.
ಆ ತಾಯಿ ಮತ್ತು ಮಕ್ಕಳು ಬೆಳಗ್ಗಿನವರೆಗೂ ಎಚ್ಚತ್ತೇ ಇದ್ರು. ಎಂಥ ಭಯ-ಎಂಥ ಆಸೆ ಅವರಿಗೆ ! ಆತನೂ ಅಷ್ಟೆ. ಖಂಡಿತ ಸಾಯೋಕೆ ಇಷ್ಟವಿರಲಿಲ್ಲ. ಆ ಕಣ್ಣುಗಳು ಹೊರಳಾಡುತ್ತಿದ್ದ ರೀತೀನೋ. ಈ ಜೀವನದಲ್ಲಿ ಎಷ್ಟೋ ಸಾವು ನೋವು ನೋಡಿದ್ದೇನೆ. ಆದರೆ ಸೋರೇಕಾಯಿ ಆಗಿದ್ದ ಆ ಹುಡುಗಿ ಮುಖ ನೋಡಿ ನನ್ನ ಕರುಳು ಕಿವಿಚಿಕೊಳ್ತಿತ್ತು.
ಈ ದಿನ ಬೆಳಗ್ಗೆ ರೋಗಿ ಕೊಂಚ ಶಾಂತವಾಗಿದ್ದ ಹಾಗೆ ಕಂಡಿತು. ಬಿರುಗಾಳಿಗೆ ಮೊದಲು ಬರುವ ಶಾಂತಿ ಗೊತ್ತೇ ಇದೆಯಲ್ಲ! ಆದರೆ