ಪುಟ:ನಾಸ್ತಿಕ ಕೊಟ್ಟ ದೇವರು.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೯

ಕಥೆ : ಹನ್ನೆರಡು
ಡಿ ಲಕ್ಸ್



ನೋ ಧೊಪ್ಪನೆ ಕುಸಿದು ಬಿದ್ದು ಟಣ್ ಟಣಾರೆಂದು ಸಪ್ಪಳವಾಯಿತು.
ರಾಮನ್ ತಿರುಗಿ ನೋಡಿದ. ಆತ ನಿಂತಿದ್ದ ಭೋಜನದ ಡಬ್ಬಿಯ
ಬಾಗಿಲ ಮಗ್ಗುಲಲ್ಲೆ, ನಿಲ್ದಾಣದ ಪ್ಲಾಟ್ ಫಾರ್ಮಿನ ಮೇಲೆ, ಅರಿವೆಯ
ಗಂಟು ಹರಿದು, ಚೆಲ್ಲಾಪಿಲ್ಲಿಯಾಗಿ ಅಡ್ಡಾದಿಡ್ಡಿಯಾಗಿ ನಾಲ್ಕಾರು ಡಬ್ಬ
ಗಳು ಹೊರಳಾಡುತ್ತಿದ್ದುವು. ಸಾಕಷ್ಟು ಹಳೆಯದಾಗಿದ್ದ ಉಕ್ಕಿನ
ಟ್ರಂಕನ್ನೂ ಹರಿದ ಹೋಲ್ಡಾಲನ್ನೂ ತಲೆಯ ಮೇಲೆ ಹೊತ್ತಿದ್ದ ಹಮಾಲ,
ಕಕ್ಕಾವಿಕ್ಕಿಯಾಗಿ ಆ ಡಬ್ಬಿಗಳ ಮಧ್ಯೆ ನಿಂತಿದ್ದ. ಎತ್ತರದ ಗಾತ್ರದೇಹದ
ಹೆಣ್ಣು ಮಗಳೊಬ್ಬಳು, ಕೆರಳಿ, ಕೀರಲು ದನಿಯಲ್ಲಿ ಗದರುತ್ತಿದ್ದಳು:
"ಕಣ್ಣಿಲ್ಲ ನಿನಗೆ ? ಬುದ್ಧಿ ಇಲ್ಲ? ಕತ್ತೆ ! ಕತ್ತೆ ! "
ಹಿಂದೀ ಭಾಷೆ. ದಕ್ಷಿಣ ಭಾರತದ ಪದೋಚ್ಚಾರ. ['ಮದರಾಸಿ
ನವರೇ ಇರಬೇಕು.'] ನುಸುಳಿ ಹೋಗುತ್ತಿದ್ದ ಯೌವನವನ್ನು ಶರೀರದ
ಆಯಕಟ್ಟುಗಳಲ್ಲಿ ಬಿಗಿದು ಕಟ್ಟಿದ್ದಳು ಆಕೆ. ಅವಳ ಅಬ್ಬರಕ್ಕೆ ಆ ಕಟ್ಟು
ಗಳಿಗೂ ಅರಿವೆಯ ಗಂಟುಗಳಿಗೆ ಒದಗಿದ ಗತಿಯೇ ಆಗುವುದೇನೋ
ಎನಿಸುತ್ತಿತ್ತು.
ಅವಳಿಗಿಂತ ತುಸು ದೂರದಲ್ಲಿ ಗಂಡಸೊಬ್ಬ ನಿಂತಿದ್ದ—ತೆಳ್ಳಗಿನ
ವ್ಯಕ್ತಿ. ಒಂದು ಕೈಯಲ್ಲಿ ಟಿಫಿನ್ ಕ್ಯಾರಿಯರ್ ಮತ್ತು ಚೀಲಗಳು
ಮೂರು. ಎರಡು ದಿಂಬುಗಳು ಕಂಕುಳಲ್ಲಿ. ಸೊರಗಿದ ಮುಖ ಸಾರು
ತ್ತಿತ್ತು, ಬದುಕಿನ ಅಕಾಲ ಬೇಸಗೆಯಲ್ಲಿ ಆತ ಹಣ್ಣಾದವನೆಂಬುದನ್ನು.
ಅವನ ಇನ್ನೊಂದು ಕೈಯ ತೋರುಬೆರಳನ್ನು ಹಿಡಿದು, ಯಾವುದರ ಪರಿ
ವೆಯೂ ಇಲ್ಲದೆ, ಗಾಡಿಯೊಂದನ್ನೆ ದಿಟ್ಟಿಸುತ್ತ ನಿಂತಿದ್ದಳು, ಹತ್ತು ವರ್ಷದ
ಒಬ್ಬಳು ಹುಡುಗಿ. ['ಸಂಸಾರವೇ. ಸಂದೇಹವಿಲ್ಲ. ಸೆಕೆಗಾಲದ