ಪುಟ:ನಾಸ್ತಿಕ ಕೊಟ್ಟ ದೇವರು.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೦

ನಾಸ್ತಿಕ ಕೊಟ್ಟ ದೇವರು

ಬೆಂಕಿಯಿಂದ ಪಾರಾಗಲು ದೆಹಲಿ ಬಿಟ್ಟು ಮದರಾಸಿಗೆ ಓಡುತ್ತಿರಬೇಕು
ಈ ಜನ. ']
ಪ್ಲಾಟ್ ಫಾರ್ಮಿನ ಮೇಲೆ ವಿಶೇಷ ಗದ್ದಲವೇನೂ ಇರಲಿಲ್ಲ. ಹೊಸ
ದಾಗಿ ಆರಂಭವಾಗಿದ್ದ ಡಿ ಲಕ್ಸ್ ಎಕ್ಸ್ ಪ್ರೆಸ್ ಜನಕ್ಕಿನ್ನೂ ರೂಢಿಯಾಗಿರ
ಲಿಲ್ಲ. ಆದರೂ ಗಾಡಿಯೇರುವ ಅವಸರ. [' ಅಗೋ, ಸಮಯವೂ
ಆಯಿತು. ಇನ್ನಿರುವುದು ಐದೇ ನಿಮಿಷ.']
ಆ ಮಹಿಳೆಯ ಅಟಾಟೋಪ ನಡದೇ ಇತ್ತು:
"ನೋಡ್ತಾ ನಿಂತಿದೀಯಲ್ಲೊ, ಬೇಕೂಫ! ಎತ್ತು ಅವನೆಲ್ಲ!
ಬಿಗಿದು ಕಟ್ಟು!"
ಕೆಲಸವಿಲ್ಲದ ಜನ ಸುತ್ತುವರಿದು ನಿಂತರು, ಕಣ್ಣಗಲಿಸಿ ಆಕೆಯನ್ನೇ
ನೋಡುತ್ತ. ಸಮಾಧಾನದ ವಿಷಯ ಅವಳ ಪಾಲಿಗೆ. ['ತನ್ನ ಒದರಾಟದ
ನಡುವೆಯೂ ತೇಲುಗಣ್ಣುಗಳಿಂದ ಸುತ್ತೆಲ್ಲ ನೋಟ ಬೀರಿ, ಕೆಂಪು ಮೆತ್ತಿದ್ದ
ತುಟಿಗಳನ್ನು ಮಿಸುಕಾಡಿಸಿದಳಲ್ಲ!' ]
ಚೇತರಿಸಿಕೊಂಡೆದ್ದ ಹಮಾಲನೆಂದ:
"ಎಲ್ಲಾ ಮಾಡತೇನ್ರಿ ; ಮೊದಲು ತಲೆ ಮ್ಯಾಗಿಂದೀಟು ಬ್ರೆಕ್
ವಾನ್ ದಾಗ ಇಡಸ್ರಿ."
ಹೆಂಡತಿಯ ಹುಬ್ಬುಗಳ ಕುಣಿತ ಆರಂಭವಾದುದಕ್ಕೂ ಮುಂಚೆ,
ಗಂಡನೆಂದ:
"ಯಾಕೆ?"
"ಏರ್ಕಂಡೀಸನ್ ಗಾಡಿ ಐತ್ರಿ ಇದು !"
ಅವಮಾನಿತಳಾದ ಲಲನೆ ಅಂದಳು:
"ಏರ್-ಕಂಡೀಶನ್ಡ್ ಗಾಡಿ ಅಂತಲೇ ಇದರಾಗ ಹೊಂಟೇವಿ! ಒಳ
ಗಿಡು ಸಾಮಾನು!"
ಈ ತಾಯಿಗೆ ತಿಳಿಯ ಹೇಳುವುದರಲ್ಲಿ ಅರ್ಥವಿಲ್ಲವೆಂದು, ತಲೆಯ
ಮೇಲಿದ್ದ ಹೇರಿನೊಡನೆ ಹಮಾಲ ಡಬ್ಬಿಯನ್ನೇರಿದ.
ಗಂಡನ ಕಡೆ ನೋಡಿದ ಮೆಮ್ ಸಾಹೇಬರಿಂದ ಇಂಗ್ಲಿಷಿನಲ್ಲಿ ಮಾತು
ಬಂತು: