ಪುಟ:ನಾಸ್ತಿಕ ಕೊಟ್ಟ ದೇವರು.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೪

ನಾಸ್ತಿಕ ಕೊಟ್ಟ ದೇವರು

ಲಾಗದಿದ್ದರೂ ಎಷ್ಟನ್ನೋ ಅರ್ಥಮಾಡಿಕೊಳ್ಳುತ್ತಿದ್ದ. ಹಿಂದಿ ಬರುತ್ತಿತ್ತು,
ಹರುಕು ಮುರುಕು ಹಿಂದಿ. ಮದರಾಸಿನ ಬೀದಿಗಳಲ್ಲಿ ತಿಪ್ಪೆತೊಟ್ಟಿಯ
ಶಿಶುವಾಗಿ ಬೆಳೆದಾಗ ತಮಿಳೂ ಅಂಟಿಕೊಂಡಿತ್ತು. ಹಿಂದೆ ಬಹು ಭಾಷಾ
ರಾಜಧಾನಿಯಾಗಿತ್ತು ಆ ಊರು . ಹೀಗಾಗಿ ಕನ್ನಡವೂ ಬರುತ್ತಿತ್ತು,
ಅಲ್ಪ ಸ್ವಲ್ಪ. ಇಷ್ಟು ಸಾಲದೆಂದು ಬಟ್ಲರ್ ಇಂಗ್ಲಿಷ್ ಬೇರೆ. ಆರ್ಡರಿತ್ತವರು
"Understand?" ಎಂದರೆ, ಈತ ಅನ್ನುತ್ತಿದ್ದ: " Yes " ...
ಇಲ್ಲಿ ಮೇಜುಗಳನ್ನು ಮೂವರು ಹಂಚಿಕೊಂಡಿದ್ದರು. ಮುಕ್ಕಾಲಂಶ
ಸೀಟುಗಳು ಖಾಲಿಯಾಗಿಯೇ ಹೋಗುತ್ತಿದ್ದ ಗಾಡಿ. ಹೆಚ್ಚಿನ ಕೆಲಸವಿರಲಿಲ್ಲ.
. . . ಹುಡುಗಿಯನ್ನು ಕರೆದುಕೊಂಡು ಆ ಮಹಿಳೆ ಬಂದಳು. ರಾಮನ್
ಮೇಜಿನ ಬಳಿ ಸಾರಿದ.
ಹತ್ತಿರ ನಿಂತ 'ಬೇರರ್' ನನ್ನ ದಿಟ್ಟಿಸಿ ಆಕೆ ತಮಿಳಿನಲ್ಲಿ ಅಂದಳು:
"ಗಾಡಿ ಕುಲುಕ್ತದೆ. ನರ್ತನ ಮಾಡ್ಕೊಂಡೇ ಬರಬೇಕಾಗ್ತದೆ ಇಲ್ಲಿಗೆ!"
ರಾಮನ್ ನಗಲಿಲ್ಲ.
ಗಾಂಭೀರ್ಯ ತಳೆದು ಅವಳು ಕೇಳಿದಳು:
"ಏನೇನಿದೆ ?"
ಆಗ ಅಷ್ಟು. ರಾತ್ರೆಗೆ ಏನಿತ್ತು? ಮಾರನೆಯ ಬೆಳಗ್ಗೆ?
"ಆರು ಘಂಟೆಗೆ ಕಾಫಿ ಬೇಕೇ ಬೇಕು."
ಅದು ಬೆಡ್ ಕಾಫಿ. [ಮಲಗಲಾಗದೆ ಕುಳಿತೇ ಇದ್ದರೂ ಕೂಡಾ !]
ಆಮೇಲೆ break-fast. ಮಧ್ಯಾಹ್ನ ಎಷ್ಟು ಹೊತ್ತಿಗೆ ಸಿಗಬಹುದು ಊಟ?
ಮಾತು, ಮಾತು, ಮಾತು.
"ಅಬ್ಬ !"ಎಂದುಕೊಂಡ ರಾಮನ್.
ಕಿವಿ, ಕತ್ತು, ಕೈಗಳ ತುಂಬ ಬಂಗಾರ. ಮಾತಿಗಷ್ಟೇ ಬೆಲೆ ಇರಲಿಲ್ಲ .
"ಬಿಲ್ ಮದರಾಸಿನಲ್ಲೇ ಒಟ್ಟಾಗಿ ಕೊಡ್ತೀಯೋ, ಅಲ್ಲ"
ಉತ್ತರ ಥಟ್ಟನೆ ಬಂತು:
"ಇಲ್ಲ. ಲೆಕ್ಕ ಇಡೋದು ತೊಂದರೆ..."
"ಸರಿ, ಸರಿ..."
ಒಂದು ರೂಪಾಯಿ ಚಿಲ್ಲರೆಯ ಅಲ್ಪೋಪಹಾರ ಮುಗಿಸಿ ಆಕೆ
ಹೊರಟಳು. ಎರಡು ದಿನಗಳ ಪ್ರಯಾಣ ಮುಗಿದಾಗ ಬಿಲ್ ಕೊಟ್ಟರೆ,