ಪುಟ:ನಾಸ್ತಿಕ ಕೊಟ್ಟ ದೇವರು.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೦

ಮೇಲ್ನುಡಿ

ಕನ್ನಡದ ಇಂದಿನ ಲೇಖಕರಲ್ಲಿ ನಿರಂಜನರ ಹೆಸರು ಎಲ್ಲರಿಗೂ
ಪರಿಚಿತವಾದುದೇ. 'ನಿರಂಜನ' ಎಂಬುದನ್ನು ಮೊದಲು ಕಾವ್ಯನಾಮ
ವಾಗಿ ಕುಳುಕುಂದ ಶಿವರಾಯರು ಬಳಸಿದರೂ, ಈಗ ಅದು ಆವರಣ
ಗುರುತುಗಳನ್ನು ಕಳೆದುಕೊಂಡು ಅವರ ನಾಮಧೇಯವಾಗಿದೆ. ಪತ್ರಿಕಾ
ವೃತ್ತಿಯಲ್ಲಿ ಪಳಗಿದ ಇವರ ಲೇಖನಿ ಕಥೆ ಕಾದಂಬರಿಗಳಲ್ಲಿ ಅನುರಕ್ತ
ವಾಗಿದೆ. ಸುಮಾರು ಇಪ್ಪತ್ತೈದು ಕಾದಂಬರಿಗಳನ್ನೂ ಹತ್ತಾರು ಕಥಾ
ಸಂಕಲನಗಳನ್ನೂ ಅನೇಕ ಅನುವಾದ ಗ್ರಂಥಗಳನ್ನೂ ರಚಿಸಿರುವ ನಿರಂಜನ,
ಇತರ ಸಾಹಿತ್ಯ ಪ್ರಕಾರಗಳಲ್ಲಿಯೂ ಗ್ರಂಥಗಳನ್ನು ಹೊರತಂದಿದ್ದಾರೆ.
ಅವುಗಳಲ್ಲಿ ನಾಟಕಗಳು ಪತ್ರಸಂಕಲನಗಳು ಮುಖ್ಯವಾದುವು. ಈ ವರೆಗೆ
ಅವರ ಒಟ್ಟು ಕೃತಿಗಳ ಸಂಖ್ಯೆ ಐವತ್ತನ್ನು ಮಿಕ್ಕಿದೆ.
'ಬನಶಂಕರಿ', 'ಚಿರಸ್ಮರಣೆ', 'ರಂಗಮ್ಮನ ವಠಾರ', 'ಕಲ್ಯಾಣ
ಸ್ವಾಮಿ', 'ಸ್ವಾಮಿ ಅಪರಂಪಾರ' ಮುಂತಾದುವು ಅವರ ಉತ್ತಮ
ಕಾದಂಬರಿಗಳು. ಅವರ ಸಣ್ಣಕಥೆಗಳಲ್ಲಿ ಸ್ವಾರಸ್ಯವಾದ ಕೆಲವನ್ನು ಈ
ಸಂಕಲನದಲ್ಲಿ ನಾವು ನೋಡಬಹುದು.ಈ ಮೇಲ್ನುಡಿಯಲ್ಲಿ ನಿರಂಜನರ ಈ
ಕಥೆಗಳ ಪರಿಚಯಮಾಡಿಕೊಡಲು ಪ್ರಯತ್ನ ಮಾಡಿದೆ. ವಾಸ್ತವತೆಯನ್ನು
ಚಿತ್ರಿಸುವುದರಲ್ಲಿಯೂ, ವಿಡಂಬನೆಯನ್ನು ಸರಿಯಾಗಿ ಮಾಡುವುದ
ರಲ್ಲಿಯೂ, ಭಾವಕ್ಕೆ ಸರಿಯಾದ ಶೈಲಿಯನ್ನಳವಡಿಸುವುದರಲ್ಲಿಯೂ
ಸಾಮರ್ಥ್ಯವನ್ನು ಪಡೆದಿರುವ ನಿರಂಜನರ ಕಥೆಗಳ ಮುಂದಿನ ವಿಶ್ಲೇಷಣೆ
ಯಿಂದ ಓದುಗರಿಗೆ ಸಹಾಯವಾಗಬಹುದೆಂದು ಲೇಖಕನ ಆಸೆ.

ನಾಸ್ತಿಕ ಕೊಟ್ಟ ದೇವರು
ಕಲೆಗಾರ ಸೀತಾಪತಿ ಘಟ್ಟದ ಸೀಮೆಗೆ ಅಲ್ಲಿನ ರಮ್ಯ ವಾತಾವರಣದ
ಸುಖಾಸ್ವಾದನೆಗಾಗಿ ಬಂದರೆ ಅಲ್ಲಿ ಅವನಿಗೆ ದೊರಕಿದುದು ಅದಕ್ಕೆ ವಿರುದ್ಧ
ವಾದುದೇ. ಬಯಲುನಾಡಿನ ಬಡವರ ಸೇನೆ ಅಲ್ಲಿ ಬಂದು ದುಡಿಮೆಗಾಗಿ