ಪುಟ:ನಾಸ್ತಿಕ ಕೊಟ್ಟ ದೇವರು.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮೇಲ್ನುಡಿ

೧೬೧

ಬೀಡುಬಿಟ್ಟಿತ್ತು. ಇಲ್ಲಿಗೆ ಒಂದು ಸಲ ಬಂದರಾಯಿತು ಮುಂದಿನ ಸಲವೂ
ಬರುವುದಕ್ಕೆ ಬೇಕಾದಷ್ಟು ಸಾಲದ ಭಾರವನ್ನು ಹೊತ್ತೇ ಊರಿಗೆ ಹಿಂದಿರುಗು
ವುದು. ಮತ್ತೆ ಈ ಚಕ್ರಕ್ಕೆ ನಿಲುಗಡೆಯೇ ಇಲ್ಲ. ಇಂಥ ಬಿಕ್ಕಟ್ಟಿನಲ್ಲಿ
ಸಿಕ್ಕಿದ್ದ ಒಂದು ಕುಟುಂಬದ ಹೆಣ್ಣು ಬಯಲುಸೀಮೆಯ ಅರ್ಧ ಊಟವಾ
ದರೂ ಸಾಕೆಂದು ಹಿಂದಿನ ಆವರಣವನ್ನೆ ಬಯಸುವುದರಲ್ಲಿ ತುಂಬ ಅರ್ಥ
ವಿದೆ. ಇದನ್ನು ಸೀತಾಪತಿಗೆ ತಿಳಿಸಿದ್ದು ಯಾವ ವ್ಯಕ್ತಿಯೂ ಅಲ್ಲ; ಅವನ
ಕಿವಿಯಮೇಲೆ ಅಯಾಚಿತವಾಗಿ ಬಿದ್ದ "ತಿಗಳರ ಏಕಾಂತ".
ಕಲಾವಿದನ ಮನಸ್ಸಿನ ಮೇಲಾದ ಗಾಢ ಪರಿಣಾಮದ ಪ್ರತಿಫಲವಾಗಿ
ಒಂದು ಕಲಾಕೃತಿ ಜೇಡಿಯ ಮಣ್ಣಿನಿಂದ ನಿರ್ಮಾಣವಾಯಿತು—
ಹುಟ್ಟೂರಿನತ್ತ ಕೈಚಾಚಿ ಹಂಬಲದ ದೃಷ್ಟಿ ಬೀರಿದ ಬಡಪಾಯಿಗಳ ಪ್ರತಿನಿಧಿ.
ಇದರಿಂದ ಕಲಾವಿದನಿಗೆ ತೃಪ್ತಿಯಾಯ್ತು.
ಅಲ್ಲಿನ ಧರ್ಮಗುರುಗಳು ಬಂದು ಒಂದು ದೇವರ ವಿಗ್ರಹ ನಿರ್ಮಾ
ಣಕ್ಕೆ ಒತ್ತಾಯಹಾಕಿದರು. ಇದು ಸೀತಾಪತಿಗೆ ಇಷ್ಟವಿಲ್ಲದ ಕೆಲಸ.
ತೋಟದಿಂದ ಯಾರೂ ವಾಪಸು ಓಡಿಹೋಗದಂತೆ ಮಾಡಲು ತೋಟದ
ಯಜಮಾನ ಧರ್ಮಗುರುಗಳ ಮರೆಹೊಕ್ಕು ಈ ದೇವ ವಿಗ್ರಹವನ್ನು
ತಯಾರುಮಾಡಿಸಲು ಹವಣಿಸಿದ್ದ. ಇಲ್ಲೂ ಎರಡು ಪಕ್ಷ. ಒಂದು ಓಡಿ
ಹೋಗಲು ಬಯಸುವ ಪಕ್ಷ—ಆ ಹೆಣ್ಣಿನಂತೆ. ಇನ್ನೊಂದು—ಅವರನ್ನು
ಅಲ್ಲೆ ನೆಲೆನಿಲ್ಲುವಂತೆ ಮಾಡುವ ಮತ್ತು ಅದರಿಂದ ತನ್ನ ಬೊಕ್ಕಸತುಂಬಲು
ಹವಣಿಸುವ ತೋಟದ ಯಜಮಾನ , ಅವನ ಅನುಯಾಯಿ ಧರ್ಮಗುರು.
ಕಲಾವಿದನಿಗೆ ಎರಡೂ ಒಂದೆ—ಎರಡೂ ಒಂದೊಂದು ಸತ್ಯದ ಪ್ರತಿ
ನಿಧಿಗಳು.
ಸೀತಾಪತಿ ದೇವರ ವಿಗ್ರಹವನ್ನು ನಿರ್ಮಾಣ ಮಾಡಿದ. " ಉದ್ದಕ್ಕೂ
ಮುಗುಳ್ನಗುತ್ತಿದ್ದ ಸೀತಾಪತಿಯ ಕೈಯಲ್ಲಿ ಆ ಮಣ್ಣು ರೂಪುತಳೆದು
ಮೆಲ್ಲಮೆಲ್ಲನೆ ದೇವರಾಗಿ ಮಾರ್ಪಾಟಾಯಿತು." ಅದರ ಪ್ರತಿಷ್ಠಾಪನೆಯ
ದಿನ ಅವನು ತನ್ನೂರಿಗೆ ಹಿಂದಿರುಗಿದ್ದ. ಕಲಾವಿದನ ವ್ಯವಹಾರ, ರೀತಿ
ಗಳನ್ನು ಕಂಡ ಧರ್ಮಗುರು ಅವನನ್ನು ನಾಸ್ತಿಕನೆಂದು ಹಿಂದೆಯೇ
ತೀರ್ಮಾನಿಸಿದ್ದರು. ಈಗ ಅವನ ಪ್ರತಿಭೆಯಿಂದ ನಿರ್ಮಿತವಾದ
ವಿಗ್ರಹಕ್ಕೆ ಪೂಜೆಗೈಯಲು ಸಿದ್ಧರಾಗಿದ್ದರು. ಇದರಲ್ಲಿ ಸೀತಾಪತಿಗೆ
೧೧