ಪುಟ:ನಾಸ್ತಿಕ ಕೊಟ್ಟ ದೇವರು.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೨

ಮೇಲ್ನುಡಿ

ಆಸಕ್ತಿಯಿಲ್ಲ. ಧರ್ಮಗುರುಗಳಿಗೆ ವಿಗ್ರಹ ಬೇಕೆ ಹೊರತು ವಿಗ್ರಹ ಏನು
ಹೇಳುತ್ತಿದೆ ಎಂಬ ಕಡೆ ಗಮನವಿಲ್ಲ.
ಈ ಕಥೆಯಲ್ಲಿ ಬಹು ಭಾಗವನ್ನು ಓದುಗ ಊಹಿಸಿಕೊಳ್ಳಬೇಕು.
ಇಲ್ಲದಿದ್ದರೆ ನಡುನಡುವೆ ಏನೋ ಸಂದು ಬಿದ್ದಂತೆ ಕಂಡುಬರುತ್ತದೆ.
ಧರ್ಮಗುರುಗಳು ಸೀತಾಪತಿಯ ಪರಿಚಯ ಪಡೆದುದು ಆತನ ಮೊದಲ
ವಿಗ್ರಹ ನಿರ್ಮಾಣದ ಮೂಲಕವೇ ಇರಬೇಕು. ಅದು ನಡೆದುದು ಹೇಗೆ,
ಎಲ್ಲಿ ಎಂಬುದೆಲ್ಲ ಇಲ್ಲಿ ಸ್ಪಷ್ಟವಿಲ್ಲ. ಊಹಿಸಲು ಸೂಚನೆಯೂ ಇಲ್ಲ.
ಕಲಾವಿದನ ಸ್ನೇಹಿತ ಯಾವಾಗ ಊರಿಗೆ ಹೋದ, ಏಕೆ, ಅವನಿಗೂ ಈ
ಧರ್ಮಗುರುಗಳಿಗೂ ವಿಶ್ವಾಸ ಹೇಗಿತ್ತು? ಈ ಪ್ರಶ್ನೆಗಳಿಗೆ ತಲೆಯೆತ್ತಿದರೆ
ಇಲ್ಲಿ ಉತ್ತರವಿಲ್ಲ. ಕಥೆಯಲ್ಲಿ ಇದೊಂದು ಶೈಥಿಲ್ಯವಾಗಿರಬಹುದು.
ಆದರೂ ಆ ಎರಡು ವಿಗ್ರಹಗಳ ಸಂಬಂಧ - ವಿರೋಧ ಇವುಗಳ ಮೂಲಕ
ಕಥೆ ಮನಸ್ಸಿಗೆ ಕಚಕ್ಕನೆ ಹಿಡಿಯುತ್ತದೆ. ಕಥೆಯ ಹೆಸರು ಕುತೂಹಲ
ಕಾರಿಯಾಗಿದೆ.

ಮಣ್ಣಿನ ಮಗ ಗನ್ನು ತಂದ

ನಮ್ಮ ದೇಶದ ಇತ್ತೀಚಿನ ರಾಜಕೀಯ ಆವರಣದಿಂದ ಪ್ರೇರಣೆ
ಗೊಂಡ ಈ ಕಥೆಯಲ್ಲಿ ನಮ್ಮ ದೇಶಭಕ್ತಿಯ ಆಚಾರ ವಿಚಾರಗಳನ್ನು
ಕುರಿತ ಒಂದು ವಿಶ್ಲೇಷಣೆಯಿದೆ. ದೇಶಭಕ್ತಿ ನಮ್ಮ ಜನರೆಲ್ಲರ ನಾಡಿ
ನಾಡಿಯಲ್ಲಿ ಮಿಡಿಯುತ್ತಿದೆ. ಒಬ್ಬ ವ್ಯಕ್ತಿ ನಿಷ್ಪ್ರಯೋಜಕನಾಗಿರಬಹುದು.
ಅನೇಕ ದೃಷ್ಟಿಗಳಲ್ಲಿ ಅಂಥವನೂ ಅವಕಾಶ ಉಂಟಾದಾಗ ತನ್ನ ಸತ್ವವನ್ನು
ವ್ಯಕ್ತಪಡಿಸದೆ ಬಿಡುವುದಿಲ್ಲ. ಇದಕ್ಕೆ ಬೇಕಾಗಿರುವುದೊಂದೆ - ಸರಿಯಾದ
ಆವರಣ ನಿರ್ಮಾಣ. ಇದು ಕೆಲವು ವೇಳೆ ಮಾನವನ ಅಧೀನ ಮತ್ತೆ
ಕೆಲವು ವೇಳೆ ದೈವದ ಅಧೀನ. ಸಮಾಜವೂ ಅಷ್ಟೆ, ಗೆದ್ದ ಎತ್ತಿನ ಬಾಲ
ಹಿಡಿಯುವ ಸ್ವಭಾವದ್ದು. ಎಲ್ಲವೂ ಎಂದು ತಾನೇ ಸರಿಹೋದೀತು !
ವಾಸ್ತವ ಚಿತ್ರ ಹೇಗಿದೆಯೆಂಬುದು ಇಲ್ಲಿ ಸ್ಪಷ್ಟವಾಗಿದೆ.
'ಗುಲ್ಡು' ಎಂಬುದು ಬೀರಣ್ಣನಿಗೆ ಅವರ ಉಪಾಧ್ಯಾಯರು
ಕೊಟ್ಟ ಬಿರುದು. ಅವನಿಗೆ ಅವರು ಹೇಳಿಕೊಟ್ಟದ್ದು ತಿಳಿಯದೆ ಇದ್ದುದ
ರಿಂದ ಅವನು ಎಮ್ಮೆ ಕಾಯುವುದಕ್ಕೆ ಹೋಗಬೇಕಾಯ್ತು. ಆದರೂ