ಪುಟ:ನಾಸ್ತಿಕ ಕೊಟ್ಟ ದೇವರು.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮೇಲ್ನುಡಿ

೧೬೩

ಬೀರಣ್ಣ ಆ ' ಬಿರುದ ' ನ್ನು ನಿಜವಾದ ಬಿರುದೆಂಬಂತೆಯೇ ಉಪಯೋಗಿಸು
ತ್ತಿದ್ದು. " ನಾನು ಯಾರು ಗೊತ್ತೇನ್ರೋ ? ಗುಲ್ಡು. ಹುಷಾರ್!"
ಮನೆಯಲ್ಲಿಯೂ ಎಲ್ಲರೂ ಗುಲ್ಡುವನ್ನು ನಿಷ್ಪ್ರಯೋಜಕನೆಂದೇ ತಿಳಿದರು.
ತಾಯಿ " ಎಂಥ ಮಗ ಹುಟ್ಟಿದನಪ್ಪ! " ಎಂದು ಆಡಿದ ಕಹಿಮಾತು
ಬೀರಣ್ಣನ ಮನಸ್ಸನ್ನು ಸಂಪೂರ್ಣವಾಗಿ ಕಲಕಿರಬೇಕು. ಬೀರಣ್ಣ
ಬೆಂಗಳೂರಿಗೆ ಬಂದು ಸೈನ್ಯಕ್ಕೆ ಸೇರಿಬಿಟ್ಟನು.
ಹೊಸ ಆವರಣಕ್ಕೆ ಬೀರಣ್ಣ ಬೇಗ ಹೊಂದಿಕೊಂಡ. ಸೈನಿಕರ
ಒರಟು ಜೀವನ, ನಗೆಮಾತು, ಶಿಸ್ತು ಇವು ಅವನಿಗೆ ಬೇಕಾದುವು.
ಅವನಿಗೆ ಯಾವುದೋ ಹೊಸ ಸ್ವಾತಂತ್ರ್ಯ ಸಿಕ್ಕಂತಾಗಿತ್ತು. ವಿವಿಧ
ವೇಷ, ಭಾಷೆಗಳ ಜನರೊಡನೆ ಅವನು ಬೇಗ ಬೆರೆತುಬಿಟ್ಟ.
ವೆಲಾಂಗ್ ರಣರಂಗದಲ್ಲಿ ಬೀರಣ್ಣ ತನ್ನ ಅಸಮ ಸಾಹಸವನ್ನು
ವ್ಯಕ್ತಪಡಿಸಿದ್ದನು. ಚೀಣಿಯರ ಅನಿರೀಕ್ಷಿತ ಧಾಳಿಯನ್ನು ಅವನೂ
ಅವನ ಸ್ನೇಹಿತರೂ ಎದುರಿಸಬೇಕಾಯ್ತು. ಎಲ್ಲರೂ ಸಿಕ್ಕಾಬಟ್ಟೆ ಓಡಿ
ಹೋದಾಗ ಒಬ್ಬನೇ ತನ್ನ ಮೇಲೆ ಬರುತ್ತಿದ್ದ ಮೂವರಲ್ಲಿ ಇಬ್ಬರನ್ನು
ಬಂದೂಕಿನಿಂದ ಹೊಡೆದಾಯಿತು. ಮುಂದೆ ಮದ್ದಿಲ್ಲದ ಅಸಹಾಯ
ಪರಿಸ್ಥಿತಿ. ಮೂರನೆಯವನು ಹತ್ತಿರಕ್ಕೆ ಬಂದಾಗ ಅವನನ್ನು ಕೆಳಗೆ
ಬೀಳಿಸಿ ಅವನ ಬಂದೂಕಿನಿಂದಲೇ ಅವನನ್ನು ಕೊಂದು ಗುಂಡುಗಳ ಮಧ್ಯೆ
ಓಡಿ ಎಲ್ಲೋ ಆಳಕ್ಕೆ ಧುಮುಕಿ ತಪ್ಪಿಸಿಕೊಂಡಿದ್ದ ಬೀರಣ್ಣ, ಹಿಂದೆಯೇ
ಓಡಿಬಂದಿದ್ದ ಮೃತ್ಯುವಿನ ಹಿಡಿಯನ್ನು.
ಮುಂದೆ ಆಸ್ಪತ್ರೆ - ರಜ - ಊರು. ಎಲ್ಲವೂ ಅನಿರೀಕ್ಷಿತ, ಅಷ್ಟೇ
ಆಶ್ಚರ್ಯ ಸಂತೋಷದಾಯಕ. ಯಾರಿಗೂ ಹೇಳದೆ ಊರಿಗೆ ಬಂದರೆ
ಅಲ್ಲೂ ಅನಿರೀಕ್ಷಿತವಾದ ಸ್ವಾಗತ. 'ಗುಲ್ಡು' ಎಂಬ ಬಿರುದು ಕೊಟ್ಟಿದ್ದ
ಉಪಾಧ್ಯಾಯರೇ ಆತನ ಪರಾಕ್ರಮವನ್ನು ಹೊಗಳಿದರು. ಎಲ್ಲರೂ
'ಗುಲ್ಡು' ಬೀರಣ್ಣನಿಗೆ ಜಯಕಾರಮಾಡಿದರು.
ಮುಂದೆ ಬೀರನ ತಂಗಿ ಸೀತಮ್ಮನ ಮದುವೆ ಸುಲಭ. ತಾಯಿಗೆ
ಜೀವನಕ್ಕೆ ಸ್ವಲ್ಪ ಭೂಮಿಯನ್ನು ಬೇರೆ ಕೊಡುತ್ತಾರಂತೆ. ಹೀಗೆ ಬೀರಣ್ಣ
ನಿಷ್ಪ್ರಯೋಜಕ ಸಂಸಾರಕ್ಕೆ ರಕ್ಷಕನಾಗಿಬಿಟ್ಟ.