ಪುಟ:ನಾಸ್ತಿಕ ಕೊಟ್ಟ ದೇವರು.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೬೪

ಮೇಲ್ನುಡಿ

ಈ ಕಥೆಯಲ್ಲಿ ಹಳ್ಳಿಯ ಮನೆ, ಗ್ರಾಮಶಾಲೆ, ಯುದ್ಧರಂಗ , ಆಸ್ಪತ್ರೆ,
ಬಸ್ಸು, ಇವುಗಳೆಲ್ಲದರೊಳಗಿನ ಆವರಣದ ಸ್ಥೂಲ ಚಿತ್ರದ ಮೂಲಕ
ಬೀರಣ್ಣನ ಸೂಕ್ಷ್ಮಚಿತ್ರ ಕಾಣಿಸಿಕೊಳ್ಳುತ್ತದೆ. ಬೀರ ನಿಜವಾಗಿ
ವೀರನಾದುದು ಇಲ್ಲಿಯ ಸ್ವಾರಸ್ಯ. ' ಮಣ್ಣು,' 'ಗನ್ನು' ಇವೆರಡು
ಪದಗಳು ಕವನದಲ್ಲಿ ಪ್ರಾಸವಾಗುತ್ತವೆಯೋ ಇಲ್ಲವೋ ಅವೆರಡರ ಸಂಬಂಧ
ಮಾತ್ರ ದೂರವಲ್ಲವೆನ್ನುವುದು ಈ ಕಥೆಯಲ್ಲಿ ಚೆನ್ನಾಗಿ ವ್ಯಕ್ತವಾಗಿದೆ.

ಹಮಾಲ ಇಮಾಮ್ ಸಾಬಿ

' ಹಮಾಲ' ಎಂದರೆ ಮೂಟೆ ಹೊರುವವನು, ಕೂಲಿ. ಇಮಾಮ್
ಒಬ್ಬ ಹಮಾಲ, ರೈಲ್ವೆ ನಿಲ್ದಾಣದ ಕೂಲಿ. ಅವನ ಕಥೆಯಲ್ಲಿ ಎರಡು
' ಪ್ಲಾಟ್ ಫಾರಂ' ಗಳ ಕಥೆಗಳು ಒಂದಕ್ಕೊಂದು ಬೆಸೆದುಕೊಂಡಿವೆ.
ಒಂದು ಅವನು ಕೂಲಿಗೆ ಹೋಗುತ್ತಿದ್ದುದು. ಎರಡು ಅವನ ಮನೆ, ಸಂಸಾರ.
ಜೀವನ ಯಾವಾಗಲೂ ಒಂದು ಪ್ರಯಾಣವೇ. ಕಾಲವೆನ್ನುವ ರೈಲುಬಂಡಿ
ಯಲ್ಲಿ ಕುಳಿತು ಕೆಲವು ಮೈಲಿಗಳು ಪ್ರಯಾಣಮಾಡಿ ಇಳಿದುಬಿಡುವುದು;
ಇತರರಿಗೆ ಸ್ಥಳ ಬಿಡುವು ಮಾಡಿಕೊಡುವುದು.

ಬಾಲ್ಯದಿಂದಲೂ ಇಮಾಮ್ ಹಮಾಲನೇ. ತನ್ನ ಅರುವತ್ತು ವರ್ಷ
ಗಳನ್ನೂ ಅಲ್ಲೇ ಆ 'ಪ್ಲಾಟ್ ಫಾರಂ' ಮೇಲೆಯೇ ಕಳೆದವನು ಅವನು.
ಇಲ್ಲಿ ಮೊದಮೊದಲು ಬಂದವರೆಲ್ಲ ಪರಿಚಯ ಇದ್ದವರು. ಆಮೇಲೆ
ಯಾರು ಯಾರೋ, ಅವರ ಪರಿಚಯವಿಲ್ಲ. ಬಂದ ಸಂಪಾದನೆ ಸಾಕಾ
ಗಿತ್ತು ಅವನ ಸಂಸಾರಕ್ಕೆ. ಮೊದಲನೆಯ ಹೆಂಡತಿಯನ್ನು ಕಳೆದುಕೊಂಡು
ಎರಡನೆಯ ಮದುವೆ ಮಾಡಿಕೊಳ್ಳುವ ಹೊತ್ತಿಗೆ ಮೂವತ್ತು ವರುಷ
ವಯಸ್ಸಾಗಿತ್ತು ಅವನಿಗೆ. ಎರಡನೆಯ ಆಕೆಯಲ್ಲಿ ಪಡೆದ ಐದು ಜನ
ಗಂಡುಮಕ್ಕಳಲ್ಲಿ ಹತ್ತಿರ ನಿಂತವನೊಬ್ಬನೆ ಕೊನೆಯವನು. ಮಿಕ್ಕವರೆಲ್ಲ
ಪ್ರಯಾಣ ಹೊರಟು ಎಲ್ಲೋ ನೆಲಸಿದರು. ಅವನ ಸೊಸೆ ಗರ್ಭಿಣಿ
ಯಾಗಿದ್ದು ಈಗ ಪ್ರಸವವಾಗಬೇಕಿತ್ತು. ಇಮಾಮನು ಮನಸ್ಸಿನಲ್ಲಿ ತನ್ನ
ಮಕ್ಕಳಲ್ಲಿ ನಾಲ್ಕು ಜನ ದೂರ ಹೋಗಿರುವುದು, ಅವರ ಮಕ್ಕಳು ಮರಿ
ಗಳನ್ನು ಕಾಣದಾಗಿರುವುದು, ಈಗ ಈ ಹೊಸ ಜೀವದ ಆಗಮನದ
ನಿರೀಕ್ಷೆ ಇವುಗಳ ವಿವಿಧ ಪರಿಣಾಮಗಳನ್ನು ತನ್ನಲ್ಲಿಯೇ ವಿಮರ್ಶಿಸು