ಪುಟ:ನಾಸ್ತಿಕ ಕೊಟ್ಟ ದೇವರು.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಲ್ನುಡಿ

೧೬೫

ತ್ತಿದ್ದನು. ಅವುಗಳ ಜೊತೆಯಲ್ಲಿ ತನ್ನ ಹಿರಿಯ ಹೆಂಡತಿ ಚೊಚ್ಚಲು
ಹೆರಿಗೆಯಲ್ಲಿಯೇ ತೀರಿಕೊಂಡ ಅನುಭವ ತಲೆಯೆತ್ತಿ ಅವನ ಹೃದಯವನ್ನು
ಹಿಂಡಿರಬೇಕು. ಇದೊಂದು ಕಡೆ.
ಇನ್ನೊಂದು ಕಡೆ ಹೋಗಿಬರುವ ಗಾಡಿಗಳ ಮೇಲೆ ಗಮನವಿಟ್ಟಿರ
ಬೇಕು. ಆದರೆ ಹಿಂದಿನಂತೆಯೇ ತಾನೇ ಗಾಡಿಗಳನ್ನು ಹುಡುಕಿ ಸ್ಥಳಗಳನ್ನು
ಮೀಸಲುಮಾಡಿಟ್ಟು, ಪ್ರಯಾಣಿಕರಿಗೆ ಸುಖಮಾಡಿಕೊಡುವ ಶಕ್ತಿ ಸಾಲ
ದಾಗಿದೆ. ಒಬ್ಬ ಯುವಕ ಇಮಾಮನಿಂದ ಒದಗಿದ ಸಹಾಯ ಸಾಲ
ದೆಂದೋ, ಅವನಿಗೆ ಚಟುವಟಿಕೆ ಸಾಲದೆಂದೋ ಅವನ ಕೈಗೆ ನಾಲ್ಕಾಣೆ
ಹಾಕಿ ' ಮುದುಕನಾದೆ ನೀನು, ಹೋಗು" ಎಂದ ಮಾತಿನ ಯಾವ ಪರಿ
ಣಾಮ ಅವನ ಮೇಲಾಯಿತೋ, ಯಾರು ಬಲ್ಲರು! ಕಣ್ಣೀರು ಬರುವುದ
ರಲ್ಲಿತ್ತು; ಮುದುಕ ತೆಡೆದು ಮನೆಯ ಕಡೆಗೆ ನಡೆದ.
ಈ ಎಲ್ಲ ಗೋಜುಗಳನ್ನು ಬಿಡಿಸಿ ಸುಖದ ನೇರದಾರವನ್ನು ತೋರು
ವಂತೆ ಮನೆಯ ಬಳಿ ಬಂದ ವರ್ತಮಾನ_ಮೊಮ್ಮಗನ ಸುಖಾಗಮನ.
ಆನಂದಾತಿರೇಕದಲ್ಲಿ ಕಣ್ಣೀರುಸುರಿಸಿ ನಿಲ್ಲಲಾರದೆ ಕುಳಿತವನು, ಈ ಲೋಕ
ದಲ್ಲಿ ನಿಲ್ಲಲಾರದೆ ಹೊರಟೀಹೋದನು.
ಕಥೆಯ ಸ್ವಾರಸ್ಯವಿರುವುದು ಹಮಾಲನ ಮನಸ್ಸಿನ ಆಲೋಚನೆ
ಗಳ ಪದರಪದರಗಳನ್ನು ಬಿಡಿಸಿರುವುದರಲ್ಲಿ; ನಿರೀಕ್ಷಿಸಿದ್ದ ಫಲ ಕೈಗೆಟುಕಿ
ತೆನ್ನುವಷ್ಟರಲ್ಲಿ ಉಂಟಾದ ಇಮಾಮನ ಅನಿರೀಕ್ಷಿತ ಪ್ರಯಾಣದಲ್ಲಿ. ಅವಿ
ಭಕ್ತ ಕುಟುಂಬದ ನಿರ್ನಾಮವಾಗಿ ನಮ್ಮ ದೇಶದ ಸ್ವಾಸ್ಥ್ಯ ಹೇಗೆ ಚೆಲ್ಲಾಪಿಲ್ಲಿ
ಯಾಗಿದೆಯೆಂಬುದೂ, ಹಳೆಯ ನಂಬಿಕೆ ಹೇಗೆ ಇಂಥ ಕಡೆಗಳಲ್ಲಿ ನಾಶ
ಹೊಂದುತ್ತವೆ ಎಂಬುದೂ ಈ ಕಥೆಯಲ್ಲಿ ಧ್ವನಿತವಾಗಿದೆ. ಇದು ಕೇವಲ
ಹಮಾಲ ಇಮಾಮನ ಕಥೆ ಮಾತ್ರವಲ್ಲ. ಇಂಥ ಎಲ್ಲ ಸಂಸಾರಗಳ ಕಥೆ.

ತಪ್ಪು ಎಣಿಕೆ

ಜವಾನ ನಾಗಪ್ಪನ ಅನೇಕ ದಿನಗಳ ಅಭ್ಯಾಸ , ಪುಢಾರಿತನ ಎಡವಿ
ಬಿದ್ದ ಪ್ರಸಂಗ ಈ ಕಥೆಯ ಜೀವಾಳ. ಇಂಥವರನ್ನು ಈಗ ಲೋಕದಲ್ಲಿ
ಹುಡುಕಬೇಕಾಗಿಲ್ಲ. ಎಲ್ಲ ಕಛೇರಿಗಳಲ್ಲಿ, ಅಂಗಡಿಗಳಲ್ಲಿ, ಸಂಸ್ಥೆಗಳಲ್ಲಿ,
ಕೊನೆಗೆ ಬಾಲಕರಲ್ಲಿ, ನಾಗಪ್ಪನ ಪ್ರತಿನಿಧಿಗಳು ಅಸಂಖ್ಯಾತರಾಗಿದ್ದಾರೆ.