ಪುಟ:ನಾಸ್ತಿಕ ಕೊಟ್ಟ ದೇವರು.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೬

ಮೇಲ್ನುಡಿ

ಎದುರಾಳಿಯ ಭಯವೇ ಅವರ ಆಯುಧ. ಅದನ್ನೇ ಉಪಯೋಗಿಸಿ
ಎದುರಾಳಿಯನ್ನು ಗೆಲ್ಲುವುದು ಅವರ ಅನೇಕ ವರ್ಷಗಳ ಸಾಧನೆ.
ಇಂಥವನೊಬ್ಬ, ದಕ್ಷ ಅಧಿಕಾರಿಯ ಹಿಡಿತಕ್ಕೆ ಸಿಕ್ಕಿ ನಾಶವಾದ
ಸನ್ನಿವೇಶ ಬಹು ಸ್ವಾರಸ್ಯವಾಗಿದೆ. ರೆವಿನ್ಯೂ ಇಲಾಖೆಯ ಅಧಿಕಾರಿಗಳಿಗೆ
'ಸರ್ಕ್ಯೂಟ್‌' ಇದ್ದೇ ಇರುತ್ತದೆ. ಅವರ ಮನೆಯವರು ಭಯಗ್ರಸ್ತರಾದರೆ
ಆಳುಕಾಳಗಳಿಗೆ ಒಳ್ಳೆಯ ಸುಗ್ಗಿ. ಅಂಥ ಸಂಸಾರ ಉಮಾಪತಿಯದು.
ಅವನ ಹೆಂಡತಿ ವೀಣಾ ಸ್ವಲ್ಪ ಪುಕ್ಕಲು ಸ್ವಭಾವದವಳು. ಹಳಬನಾದ
ನಾಗಪ್ಪ ಕಛೇರಿಯಲ್ಲಿ, ಸಾಹೇಬರ ಮನೆಯಲ್ಲಿ, ಎಲ್ಲರನ್ನೂ ತನ್ನ ಹತೋಟ
ಯಲ್ಲಿಟ್ಟುಕೊಂಡಿದ್ದ. ಮನೆಯ ಹೆಣ್ಣಾಳಿನೊಡನೆ ಅಕ್ರಮ ಸಂಬಂಧವನ್ನೂ
ಹೊಂದಿದ್ದ. ಒಳಗಿನ ಸಮಾಚಾರವನ್ನೆಲ್ಲ ತಿಳಿದು, ಆಗಬೇಕಾಗಿದ್ದ
ಪಿತೂರಿಗಳನ್ನೆಲ್ಲ ಮಾಡುತ್ತಿದ್ದ-- ಪರಿಣಾಮವಾಗಿ ಸಂಪಾದನೆ, ಸುಖ,
ಜಬರದಸ್ತು ಇಷ್ಟೂ ಇತ್ತು: ಇಂಥವನು ಬಿದ್ದ ಬೇಸ್ತು ಈ ಕಥೆಯಲ್ಲಿ
ಚೆನ್ನಾಗಿ ನಿರೂಪಿತವಾಗಿದೆ. ತನ್ನ ಪ್ರತಿಷ್ಠೆಯನ್ನೂ ಅಧಿಕಾರವನ್ನೂ
ಪ್ರಕಾಶಪಡಿಸುವುದರ ಮೂಲಕವೇ ಅವನು ಹಳ್ಳಕ್ಕೆ ಬಿದ್ದದ್ದು ಸ್ವಾರಸ್ಯ
ವಾಗಿದೆ. ' ಡಿಸ್ಮಿಸ್‌' ಆದಮೇಲೆ ಅವನೇನು ಮಾಡಿದನೊ ! ಊಹಿಸುವು
ದಕ್ಕೆ ಚೆನ್ನು.
ಈ ಕಥೆಯ ಅಧಿಕಾರಿ ಶಕ್ತ, ದಕ್ಷ. ನಮ್ಮಲ್ಲಿ ಇನ್ನಷ್ಟು ಜನ ಇಂಥ
ಅಧಿಕಾರಿಗಳು ಹೆಚ್ಚಿದರೆ ಜನಕ್ಕೂ ಅನುಕೂಲ, ಸರಕಾರಕ್ಕೂ ಬಿಗಿ. ಆದರೆ
ಅನುಕೂಲ ಮಾಡಿಕೊಡುವ, ಬಿಗಿಯಾಗಿರುವ ಆಪೇಕ್ಷೆ ಬೇಕಲ್ಲ! ಅದ
ನ್ನೆಲ್ಲಿಂದ ತರೋಣ?

ಸ್ವಸ್ತಿಪಾನ

ಮದ್ಯಪಾನ ಪ್ರಪಂಚಕ್ಕೆ ಸೇರಿದ ಈ ಕಥೆಗೆ ಪೀಠಿಕೆ ಚಿಕ್ಕಣ್ಣಯ್ಯ
ಬದರಿ ಇವರ ಸ್ನೇಹ. ಪಾನಾವಸರದಲ್ಲಿ ಬಂದ ಕಥೆ ದಯಾನಂದರಿಗೆ
ಸಂಬಂಧಪಟ್ಟದ್ದು. ಮೊದಲ ಪೀಠಿಕೆಯ ಸನ್ನಿವೇಶ ಸಾಧಾರಣವಾದದ್ದು.
ಚಿಕ್ಕಣ್ಣಯ್ಯ ಮದುವೆಯಾದಮೇಲೆ ಪಾನ ಪ್ರಸಂಗಗಳನ್ನು ಕಡಮೆ ಮಾಡಿ
ಮನೆಯ ಕಡೆ ಗಮನ ಕೊಟ್ಟದ್ದು- ಸಂಸಾರದ ಪುಣ್ಯ. ಬದರಿಯ ಕಥೆ
ಸಾಕಷ್ಟು ಸ್ಪಷ್ಟವಿಲ್ಲ. ಹಣವನ್ನೇನೋ ಸಂಪಾದಿಸುತ್ತಿದ್ದ- ವಿವಿ ಧ