ಪುಟ:ನಾಸ್ತಿಕ ಕೊಟ್ಟ ದೇವರು.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಲ್ನುಡಿ

೧೬೭


ವ್ಯಾಪಾರ ವ್ಯವಹಾರಗಳಿಂದ. ಈ ಇಬ್ಬರೂ ಮತ್ತೆ ಹಳೆಯ ಪಾನ
ಮಂದಿರದಲ್ಲಿಯೇ ಸೇರಿದ್ದಾಗ ಬದರಿ ತನ್ನ ಸ್ಫೂರ್ತಿಯಿಂದ ಹೇಳಿದ ಕಥೆ-
ಸಾವುಕಾರರ ಕಥೆ.
ಆವರಣ ನಿರ್ಮಾಣದಲ್ಲಿ ಈ ಕಥೆಗೆ ಹಿರಿಮೆಯಿದೆ. ಎರಡು ಆವರಣ
ಗಳ ನಿರ್ಮಾಣ, ಪೀಠಿಕೆ, ಕಥೆ. ಆವರಣಕ್ಕೆ ಹೊಂದಿಕೊಳ್ಳುವಂತಿದೆ
ದಯಾನಂದರ ಚಿತ್ರ. ಕಥೆಯ ಸೊಗಸಿರುವುದೂ ಅಲ್ಲಿಯೇ! ಕಥೆ ಚೋದಿ
ಸುವ ಕಲ್ಪನೆಯಲ್ಲಿ ನಾವು ಆನಂದಪಡಬಹುದು.
ಯಾವ ಜನ್ಮದ ಶಾಪ?
ವಿಶ್ವನಾಥಯ್ಯ, ಅವರ ಹೆಂಡತಿ, ಮಕ್ಕಳು ಪ್ರಸಾದ, ಗಿರಿಜಾ
ಇವರಿಂದ ಕೂಡಿದ ಚೊಕ್ಕ ಸಂಸಾರ. ನೋಡುವವರು ಕರುಬುವಂತಿತ್ತು.
ಆದರೆ ಒಳಗಡೆ ಇದ್ದವರಿಗೆ ಗೊತ್ತಿತ್ತು ಅವರ ಧರ್ಮಸಂಕಟ. ಪ್ರಸಾದ
ಓದಿ ಎಂಜಿನಿಯರ್‌ ಆಗಿ ರೂರ್ಕೆಲಾ ಸೇರಿದ. ಗಿರಿಜಾ ಓದಿದ್ದಳು,
ಮನೆಯಲ್ಲೇ ಇದ್ದಳು. ವಿಶ್ವನಾಥಯ್ಯ ಕೆಲಸದಿಂದ ನಿವೃತ್ತಿಹೊಂದಿ
ಮನೆಗೆ ಬಂದಿದ್ದರು. ಇಲ್ಲಿಂದ ಕಥೆ ಪ್ರಾರಂಭ.
ಗಿರಿಜೆಯ ಮದುವೆ ಯೋಚನೆ, ಅದಕ್ಕೆ ತಗಲುವ ವೆಚ್ಚದ
ಯೋಚನೆ. ಮಗನಿಗೆ ವರದಕ್ಷಿಣೆ ತೆಗೆದುಕೊಂಡು ಅದನ್ನೇ ಅಳಿಯ
ನಾಗುವವನಿಗೆ ದಾಟಿಸುವ ಯೋಚನೆ--ಇವೆಲ್ಲ ಒಂದೊಂದಾಗಿ ಗಂಡ
ಹೆಂಡಿರ ಮನಸ್ಸಿನಲ್ಲಿ ಸುಳಿಯತೊಡಗಿತು. ವಿಶ್ವನಾಥಯ್ಯ ಮಗನನ್ನು
ಊರಿಗೇ ಕರೆಸಿಕೊಂಡು, ಮದುವೆ ಮಾಡಿಸಿ, ಇಲ್ಲೇ ಯಾವುದಾದರೂ
ಕೆಲಸಕ್ಕೆ ಹತ್ತಿಸಿದರೆ ತಾನು ನಿವೃತ್ತಿಯಾದ ಮೇಲಿನ ಹಣದ ಅರಕೆ
ಯನ್ನು ಪೂರೈಸಬಹುದು ಎಂದು ಆಲೋಚಿಸಿ ತನ್ನ ದೇಹಸ್ಥಿತಿ ಕೆಟ್ಟಿರುವು
ದಾಗಿ ತಂತಿ ಕೊಟ್ಟು ಮಗನನ್ನು ಊರಿಗೆ ಕರೆಸಿದರು.
ಹಿರಿಯರಿಗೂ ಕಿರಿಯರಿಗೂ ದೃಷ್ಟಿಭೇದ ಎಷ್ಟಿದೆಯೆಂಬುದು ಈಗ
ಸ್ಪಷ್ಟವಾಗುತ್ತದೆ. ತಂದೆಯ ಅಭಿಪ್ರಾಯಕ್ಕೆ ಮಗನ ಒಪ್ಪಿಗೆಯಿಲ್ಲ.
ಅವನು ಇಷ್ಟರಲ್ಲಿಯೇ ಜರ್ಮನಿಗೆ ಹೆಚ್ಚಿನ ಅಭ್ಯಾಸಕ್ಕೆ ಹೋಗುವವನು.
ಅವನ ಸಂಸ್ಥೆಯವರೇ ಕಳುಹಿಸಲಿದ್ದಾರೆ. ಆದರೆ ತಂದೆಗೆ ಇದೆಲ್ಲ
ಯಾವುದೋ ಗಂಡಾಂತರಗಳಿದ್ದಂತೆ ಕಾಣುತ್ತಿದೆ. ತಾಯಿಗೂ ಅಷ್ಟೆ.