ಪುಟ:ನಾಸ್ತಿಕ ಕೊಟ್ಟ ದೇವರು.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೮

ಮೇಲ್ನುಡಿ


ಗಿರಿಜೆಗೇನೋ ಸಂತೋಷ, ತನ್ನ ಅಣ್ಣ ಜರ್ಮನಿಗೆ ಹೋಗುವುದು.
ಗಿರಿಜೆಯೂ ಕೆಲಸಕ್ಕೆ ಸೇರಲಿ ಎಂಬುದು ಪ್ರಸಾದನ ಅಭಿಪ್ರಾಯ.
ಹೆಣ್ಣು ಕೊಡಲು ಬಂದ ಚಂದ್ರಶೇಖರಯ್ಯನವರಿಗೆ ವಿವರಗಳು
ಸ್ವಲ್ಪ ಸ್ವಲ್ಪವಾಗಿ ತಿಳಿದು ಅವರು ವಿಫಲ ಪ್ರಯತ್ನರಾಗಿ ಮನೆಗೆ ಹಿಂದಿರುಗು
ತ್ತಾರೆ. ವಿಶ್ವನಾಥಯ್ಯ ತನ್ನ ಸಮಸ್ಯೆಯನ್ನು ಬಗೆಹರಿಸಲಾರದೆ ಆತ್ಮ
ಹತ್ಯೆಯ ಯೋಚನೆಯನ್ನೂ ಮಾಡುತ್ತಾರೆ. ಗಿರಿಜೆ ಶಾನು ಈಗಲೇ
ಮದುವೆ ಮಾಡಿಕೊಳ್ಳುವುದಿಲ್ಲ, ಕೆಲಸಕ್ಕೆ ಸೇರಿಕೊಳ್ಳುವಳೆಂದು ಹೇಳಿ
ದರೂ ತಂದೆ ತಾನು ಬದುಕಿರುವವರೆಗೂ ಗಿರಿಜೆಯನ್ನು ಸಮಾಜಕ್ಕೂ
ಕಳಿಸಲು ಒಪ್ಪುವುದಿಲ್ಲ. ಅವರದು ಒಂದೇ ಮಾತು “ಬಾಗಿಲು ಹಾಕ್ಕೋ."
ಸಂಸಾರದ ಆರ್ಥಿಕ ಅಗತ್ಯಗಳನ್ನು ಪೂರೈಸಲು ವಿಶ್ವನಾಥಯ್ಯ
ಮತ್ತೆ ಯಾವುದೋ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ನಿವೃತ್ತಿಯ ವಿವರಣೆ
ಯಲ್ಲಿ ಮೊದಲ್ಗೊಂಡ ಕಥೆ ಹೊಸ ಕೆಲಸಕ್ಕೆ ಹೊರಟ ವಿವರಣೆಯಿಂದ
ಕೊನೆಯಾಗುತ್ತದೆ.
ಈ ಕಥೆ ಎರಡು ತಲೆಮಾರುಗಳ ನಡುವೆ ಜೀವನದ ಮೌಲ್ಯಗಳನ್ನು
ಕುರಿತು ಭಾವನೆಗಳು ಎಷ್ಟು ವ್ಯತ್ಯಾಸವಾಗಿವೆ ಎಂಬುದನ್ನು ಬಹು ಅರ್ಥ
ವತ್ತಾಗಿ ಚಿತ್ರಿಸುತ್ತದೆ: ಚಿಕ್ಕ ಸಂಸಾರದ ನಾಲ್ಕು ಜನ ಎರಡು ಬಣ
ಗಳಾಗಿ ವಿಭಾಗಗೊಂಡಂತೆ, ಅವರ ನಡುವೆ ಪ್ರಚ್ಛನ್ನ ಸಮರವೇ ಅವ್ಯಕ್ತ
ವಾಗಿ ನಡೆಯುತ್ತಿದ್ದಂತೆ, ಇದರಿಂದ ಇಬ್ಬರಿಗೂ ಸ್ವಾಸ್ಥ್ಯ ಕದಡಿದಂತೆ,
ಸಮಾಜ ಕೈಗೆಟಕುವ ಸುಖವನ್ನು ಸಂಪ್ರದಾಯದ ನೆರಳಿನಲ್ಲಿ ನಿಂತು
ದೂರ ಮಾಡುವಂತೆ ಕಾಣುವ ಚಿತ್ರ ಎಷ್ಟು ವಾಸ್ತವವಾದುದು? ವಿಶ್ವ
ನಾಥಯ್ಯ ತಮ್ಮ ಸ್ಥಿತಿಗತಿಯನ್ನು “ಯಾವ ಜನ್ಮದ ಶಾಪ?” ಎಂದು
ಪ್ರಶ್ನಿಸಿಕೊಳ್ಳುತ್ತಾರೆ. ಇದು ಶಾಪವೋ? ಸ್ವಯಂಕೃತಾಪರಾಧವೋ?
ಈ ಸಮಸ್ಯೆ ಮಧ್ಯಮ ವರ್ಗದ ಎಲ್ಲ ಸಂಸಾರಗಳ ಸಮಸ್ಯೆ. ಇದಕ್ಕೆ
ಉತ್ತರ ಈ ಕಥೆಯಲ್ಲಿಲ್ಲ. ಆದರೆ ಅದು ಓದುಗನಿಗೆ ಬರಬಹುದಾದ ಸ್ಪಷ್ಟ
ಚಿತ್ರದಲ್ಲಿ ತಾನಾಗಿಯೇ ಮೂಡುತ್ತದೆ. ಇದೊಂದು ಉತ್ತಮವಾದ ಕಥೆ.
ಅನ್ನಪೂರ್ಣಾ

ನಾಲ್ಕು ಪುಟಗಳ ಈ ಸಣ್ಣ ಕಥೆ ನಿಜವಾಗಿಯೂ ಬಹು ಅರ್ಥ
ಪೂರ್ಣವಾದ ಕಥೆ.