ಪುಟ:ನಾಸ್ತಿಕ ಕೊಟ್ಟ ದೇವರು.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಲ್ನುಡಿ

೧೬೯


ಊರಿನ ದೇವತೆ ಅನ್ನಪೂರ್ಣಾ. ಲೋಕದ ಜನಗಳಿಗೆ ಅನ್ನ
ಹಾಕುವುದು ಆಕೆಯ ಆಶಯ. ಎಲ್ಲರನ್ನೂ ಸುಖವಾಗಿಟ್ಟಿರುವುದು ಆಕೆಯ
ಅಪೇಕ್ಷೆ. ಆದುದರಿಂದಲೇ ಆ ಊರಿನಲ್ಲಿ ಒಂದು ಪದ್ಧತಿ ನಡೆದುಬಂತು.
ದೇವರಿಗೆ ನೈವೇದ್ಯವಾದ ಮೇಲೆ ಅರ್ಚಕ ಕೂಗಿ ಕರೆಯಬೇಕು:
“ಉಣ್ಣಲಿಕ್ಕಿದ್ದಾರೆಯೇ! ಇನ್ನೂ ಉಣ್ಣಲಿಕ್ಕಿದ್ದಾರೆಯೇ ?" ಎಂದು.
ಜನ ದೇವತೆಯು ತಮಗೆ ಕೊಟ್ಟಿರುವ ಸೌಲಭ್ಯವನ್ನು ಗಮನಿಸಿ ಕೃತಜ್ಞತೆ
ಯಿಂದ 'ಹಸಿದವರಿಲ್ಲ, ದೇವಿ' ಎಂದು ಸಂತೃಪ್ತಿಯ ಉತ್ತರವನ್ನೀಯು
ತ್ತಿದ್ದರು.
ದೇಶದಲ್ಲಿ ದಾರಿದ್ರ್ಯ ದೇವಿ ನರ್ತನಮಾಡಿದಾಗ, ಅರ್ಚಕನ ಕೂಗಿಗೆ
ಅನೇಕ ಭೀಕ್ಷುಕರು, ಹೆಸಿದವರು ಬಂದದ್ದುಂಟು. ಅವರಿಗೆ ದೇವಿಯ
ನೈವೇದ್ಯದಲ್ಲಿ ಪಾಲುದೊರೆತದ್ದೂ ಉಂಟು. ಆದರೆ ಈ ಹಸಿದವರ ಸಂಖ್ಯೆ
ಹಿರಿದಾದಾಗ, ಎಲ್ಲರಿಗೂ ಧರ್ಮಸಂಕಟವೊದಗಿತು. ಎಷ್ಟು ದಿನ ಎಷ್ಟು
ಜನರಿಗೆ ಉಚಿತವಾಗಿ ಅನ್ನದಾನಮಾಡಲಾದೀತು?
ಯಾವುದೋ ಪಿಸುಮಾತು ಹೊರಟು “ಈ ಜನರ ನಡವಳಿಕೆಯಿಂದ
ದೇವಿಗೆ ಅತೃಪ್ತಿಯಾಗಿದೆ” ಎಂಬ ವಾರ್ತೆ ಹಬ್ಬಿತು. ಕ್ರಮೇಣ ಜನ
ದೇಗುಲಕ್ಕೆ ಅಶನಾರ್ಥಿಗಳಾಗಿ ಬರುವುದು ನಿಂತುಹೋಯಿತು.
ಆದರೆ ಬರಗಾಲ ನಿಲ್ಲಲಿಲ್ಲ. ಬೇರೆ ಊರುಗಳಿಂದ ಭಿಕ್ಷುಕರು,
ಹಸಿದವರು ಕೆಲವರು ದೇಗುಲದ ಬಳಿ ಬಂದು ನಿಂತರು. ಅರ್ಚಕ
"ಉಣ್ಣಲಿಕ್ಕಿದ್ದಾರೆಯೇ?” ಎಂದರೆ "ಇದ್ದೇವೆ” ಎಂದರು ಈ 'ಪಾಪಿ'
ಗಳು. ಅರ್ಜಕನ ದೃಷ್ಟಿಯಲ್ಲಿ ಸತ್ಯವನ್ನು ನುಡಿದ ಇವರು ಪಾಪಿಗಳಾದರು.
'ಇದ್ದೇವೆ' ಎಂದರೂ ಅರ್ಚಕ ಅವರಿಗೆ ಪ್ರಸಾದ ಕೊಡಲಿಲ್ಲ.
ಮಾತಾಡದೆ ಮನೆಗೆ ನಡೆದ, ನೈವೇದ್ಯದೊಡನೆ. ಮಾರನೆಯ ದಿನವೂ
ಇದೇ ಪ್ರಶ್ನೆ ಎದುರಿಗೆ ನಿಂತಾಗ ಅರ್ಚಕ ಹೇಳಿದ ಮಾತು "ಈಗ ಆ ಪದ್ಧತಿ
ಇಲ್ಲ- ಗೊತ್ತಿಲ್ಲವೆ?” ಅದಕ್ಕೆ ಬಡಪಾಯಿಯ ಪ್ರತಿಪ್ರಶ್ನೆ-“ ಅನ್ನಪೂರ್ಣೆ
ಈಗ ಆನ್ನದಾನ ಮಾಡುವುದಿಲ್ಲವೆ?" ಈ ಪ್ರಶ್ನೆಗೆ ಉತ್ತರವಿಲ್ಲ, ಬೈಗಳು
ಮಾತ್ರ ದೊರೆಯುತ್ತವೆ. ಇದು ದೇಗುಲದ ಈ ಸನ್ನಿವೇಶದಲ್ಲಿ ಮಾತ್ರ
ವಲ್ಲ- ಎಲ್ಲ ಕಡೆ ಎಲ್ಲ ಸನ್ನಿವೇಶಗಳಲ್ಲಿ.

ಹಳೆಯ ಸಂಪ್ರದಾಯಗಳು ಹೇಗೆ ಅರ್ಥವನ್ನೂ ಸತ್ವವನ್ನೂ ಕಳೆದು
ಕೊಂಡು ಸಮಾಜವು ಡಂಭಾಚಾರದ ಗಣೆಗಳಾಗಿವೆ ಎಂಬುದು ಈ ಕಥೆ