ಪುಟ:ನಾಸ್ತಿಕ ಕೊಟ್ಟ ದೇವರು.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಥೆ : ಒ೦ದು
ನಾಸ್ತಿಕ ಕೊಟ್ಟ ದೇವರು



ಯಾಲಕ್ಕಿ ತೋಟದ ಸ್ನೇಹಿತರ ಮನೆಯಲ್ಲಿ, ಎರಡು ತಿಂಗಳ ಕಾಲಎಣಿಕೆಗೆ ಸಿಗದ ಹಾಗೆ ಕಳೆದುಹೋಗಿತ್ತು. ಸಂಚಾರಜೀವಿಯಾದ ಸೀತಾ ಪತಿಯನ್ನು ದೂರದ ಹಾದಿಗಳು ತಿರುತಿರುಗಿ ಕರೆಯುತ್ತಿದ್ದುವು. ಕಲ್ಪನೆಯ ಹಕ್ಕಿ ದೂರ ದೂರಕ್ಕೆ ಹಾರತೊಡಗಿತ್ತು.

ಮನಸ್ಸಿನ ನೆಮ್ಮದಿ ಮರಳಿಬಂದ ಹಾಗಾಯಿತು ಎಂದು ಭಾವಿಸಿದಾಗಲೇ, ಆ ಬೆಳಗ್ಗೆ ನಡೆದ ಘಟನೆಯೊಂದು ಅವನ ಕಲಾಹೃದಯದಮೇಲೆ ಕಾದ ಬರೆ ಎಳೆಯಿತು.

ಆ ಕೆಲಸಗಾರರೋ ! ತುಳು ಮಾತು, ಮಲೆಯಾಳ ಮಾತು, ಕನ್ನಡ ... ದುಡಿದು ಬದುಕುವ ಆಸೆ ಕಟ್ಟಿಕೊಂಡು ಬಯಲು ಭೂಮಿ ಯಿ೦ದ ಮೈಸೂರಿನ ಆ 'ಘಟ್ಟ ಸೀಮೆ'ಗೆ ಬಂದಿದ್ದ ಬಡವರು. ಊರಲ್ಲಾದರೆ ಅವರು ದಿನಗೂಲಿಯ ಕೃಷಿಕೊಲಿಕಾರರು; ಇಲ್ಲವೆ ಒಪ್ಪೊತ್ತು ಊಟವೂದೊರೆಯದಂಥ ಉತ್ಪತ್ತಿ ಇರುವ ಪುಟ್ಟ ಹೊಲಗಳ 'ಒಕ್ಕಲು-ಯಜಮಾನರು.' ಇಲ್ಲಿಯೋ, ಸ್ವಂತದ ಶ್ರಮವನ್ನು ಮಾರಿ ಬದುಕುವ ಸ್ವತಂತ್ರರು ಅವರು.

ಆದರೆ ಆ ಸ್ವಾತಂತ್ರ್ಯ!

ಎರಡು ಬದಿಗಳಲ್ಲೂ ಎತ್ತರದ ಗಿಡಗಳಿದ್ದ ಕಣಿವೆಯಂಥ ಹಾದಿಯ ಲ್ಲಿಆ ಭಾನುವಾರ ಬೆಳಗ್ಗೆ ಸೀತಾಪತಿ ವಾಯುಸೇವನೆಗೆ ಹೊರಟಿದ್ದ. ಅದು ರಜಾ ದಿನ. ಮಾನವರ ಸುಳಿವೇ ಇಲ್ಲದೆ ಗಿಡಮರಗಳಿಗೆಲ್ಲ ಏಕಾಂತದ ಸುಖ ದೊರೆತಿತ್ತು ಆ ಹೊತ್ತು. ಕ್ರಮ ಕ್ರಮವಾಗಿ ಹೆಜ್ಜೆ ಇಡುತ್ತಾನಡೆಗೋಲನ್ನು ಬೀಸುತ್ತಾ ತಂಗಾಳಿಗೆ ಮೈಯೊಡ್ಡಿ ಸೀತಾಪತಿ ಸಾಗಿದ್ದ.

ಹಾಗೆ ಒಂದು ಮೈಲಿ ಸಾಗಿದ ಬಳಿಕ ವಾಪಸು ಹೋಗೋಣವೆಂದುಕೊಂಡ ಸೀತಾಪತಿ.