ಪುಟ:ನಾಸ್ತಿಕ ಕೊಟ್ಟ ದೇವರು.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೭೪

ನಾಸ್ತಿಕ ಕೊಟ್ಟ ದೇವರು

ಕೊಂಡಿಗಳು. ತುಕ್ಕು ಹಿಡಿದ ಕಬ್ಬಿಣ. ವಿಶ್ವನಾಥಯ್ಯ ಆ ಪುಟ್ಟ ಮನೆಯನ್ನು ಕಟ್ಟಿಸಿ ಹತ್ತು ವರ್ಷಗಳಾಗಿದ್ದುವು.
ಹಣ ಎಲ್ಲಿ೦ದ ಬ೦ತು? ಹೇಗೆ ಬಂತು? ಎಂದು ತನಿಖೆ ನಡೆಸಿರಲಿಲ್ಲ ಸದ್ಯಃ. ಆ ಹತ್ತು ವರ್ಷಗಳಲ್ಲಿ ಒಮ್ಮೆಯೂ ಕೊಂಡಿಗೆ ಸುತ್ತಿಕೊಂಡಿರಲಿಲ್ಲ ತೊಟ್ಟಿಲು ಹಗ್ಗ.
ಮುಗುಳು ನಗೆ ಮೂಡಿಸಿತು ಆ ನೆನಪು. ಮುಖದ ಸುಕ್ಕುಗಳು ತುಸು ಮಿಸುಕಿದುವು. ಹಿಂದೆ, ಸಹೋದ್ಯೋಗಿಗಳ ಮಧ್ಯೆ, ನಗೆ ಮಾತಿನ ರೂಪುತಳೆದು ಆ ಪ್ರಸ್ತಾಪ ಬಂದಿತ್ತು.
"ನೀವು ಪುಣ್ಯವಂತರು ಕಣ್ರೀ... ಚಿಕ್ಕದಾದ ಚೊಕ್ಕ ಸಂಸಾರ.”
"ನಮಗೂ ಸ್ವಲ್ಪ ಹೇಳ್ಕೊಡ್ರೀ ವಿಶ್ವನಾಥಯ್ಯನವರೇ!"
ತಮಗೆ ತಿಳಿದಿದ್ದರೆ! ಅಜ್ಞಾನದ ಕತ್ತಲಲ್ಲಿ ಪರದಾಟ. ಸತ್ತು ಹುಟ್ಟಿದ ಮೊದಲ ಕೂಸು. ವರ್ಷ ವರ್ಷಗಳ ಕಾಹಿಲೆ. ದೇವರ ಪ್ರಸಾದವಾಗಿ ದೊರೆತ ಗಂಡು— 'ಪ್ರಸಾದ.' ಮತ್ತೆ ಕಣ್ಣು ಮುಚ್ಚಾಲೆ. ಐದು ವರ್ಷಗಳ ಅನಂತರ ಹುಟ್ಟಿದ ಹೆಣ್ಣು. ಅಲ್ಲಿಗೆ ಬತ್ತಿ ಹೋಗಿತ್ತು... ಕುಟುಂಬ ಯೋಜನೆಯ ಮಾತೆಲ್ಲ ಈ ಚಿನದು, ಹೊಸದು. ಸಂಸಾರವಂದಿಗರಲ್ಲದ ಯುವಕರಿಗೇ ಅದರಲ್ಲಿ ಆಸಕ್ತಿ. ಅವರ ಮಾತು ಕಿವಿಗೆ ಬಿದ್ದರೆ ಲಜ್ಜೆಯಿಂದ ತಲೆತಗ್ಗಿಸಬೇಕು, ತನ್ನಂಥವರು. ಮೂರ್ಖರು. ನಮ್ಮ ಇಚ್ಛೆಯೆ ಅದೆಲ್ಲ? ಆತ ಕೊಟ್ಟರೆ ಉಂಟು, ಇಲ್ಲದಿದ್ದರೆ ಇಲ್ಲ.
ಆ ಯೋಚನೆಯನ್ನು ಅಲ್ಲಿಗೇ ನಿಲ್ಲಿಸಿದರು, ವಿಶ್ವನಾಥಯ್ಯ. ಕೊಠಡಿಯಲ್ಲಿದ್ದ ಪರಿಚಿತ ವಸ್ತುಗಳ ಮೇಲೆಲ್ಲ ಅವರ ದೃಷ್ಟಿ ಸೋಮಾರಿಯಂತೆ ಅಲೆಯಿತು. ಗೋಡೆಗೆ ಒರಗಿತು ಹೆಂಡತಿಯ ಸುರುಳಿ ಸುತ್ತಿದ ಹಾಸಿಗೆ. ಮಲೆಯಾಳಿ ಬಡಗಿಯೊಬ್ಬನನ್ನು ಹಿಡಿದು ಇಬ್ಬರಿಗೆಂದೇ ಮಂಚ ಮಾಡಿಸಿದ್ದರೂ, ಆಕೆ ಮಲಗುತ್ತಿದ್ದುದು ಕೆಳಗೇ. ಹಿಂಬದಿಯಲ್ಲಿದ್ದ ಮರದ ಬೀರು. ಹರಾಜಿನಲ್ಲಿ ಕಡಮೆ ಬೆಲೆಗೆ ತ೦ದದ್ದು. [ಒಂದು ಭಾನುವಾರವಿಡೀ ವ್ಯಯವಾಗಿತ್ತು ಅದಕ್ಕೋಸ್ಕರ ? ಅದರ ಮಗ್ಗುಲಲ್ಲಿ ಟ್ರಿಂಕುಗಳು, ಒಂದು ಹಳೆಯದು, ಒಂದು ಹೊಸದು. ಗೋಡೆಗೆ ಬಡಿದಿದ್ದ ಕತ್ತರಿಗೂಟ. ಇನ್ನು ಆ ರುಮಾಲನ್ನು ಕಪಾಟದೊಳಗೆ ಇರುಸುವುದೇ ಮೇಲು. ಧಾರವಾಡ