ಪುಟ:ನಾಸ್ತಿಕ ಕೊಟ್ಟ ದೇವರು.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಯಾವ ಜನ್ಮದ ಶಾಪ?

೭೭

ಅಲ್ಲದೆ, ಅವರಾದರೂ ಸಿಗಬೇಕಲ್ಲ? ಸಿಕ್ಕಿದರೂ ಕಾರ್ಯಗಂಡಾಗುತ್ತದೆನ್ನುವ ಭರವಸೆ ಏನು? ಹೆಣ್ಣು ಹೆತ್ತಮೇಲೆ ತಪ್ಪಿದ್ದಲ್ಲ ಈ ಸಂಕಟ_
ಕತ್ತು ತುರಿಸಲೆಂದು ಕೈ ಎತ್ತಿದ ವಿಶ್ವನಾಥಯ್ಯ ಗಲ್ಲವನ್ನು ಮುಟ್ಟಿ ನೋಡಿದರು. ಕೆನ್ನೆಗಳ ಮೇಲೂ ಕೈಯಾಡಿಸಿದರು. ಮುಖಕ್ಷೌರ ಮಾಡಿಕೊಂಡರಾದೀತೆನಿಸಿತು.
ಇನ್ನು ಬ್ಲೇಡ್ ಎಲ್ಲಿಯದು?– ಕ್ಷೌರಿಕನ ಕತ್ತಿಯೊಂದನ್ನು ಮಾಡಿಸಿ ಇಟ್ಟು ಕೊಳ್ಳುವುದೇ ಯೋಗ್ಯ.
ಮೆಲ್ಲನೆದ್ದು, ಕನ್ನಡಿಯಲ್ಲಿ ಇಣಿಕಿನೋಡಿದಾಗ, ನರೆಗಡ್ಡ ಆವರಿಸಿದ್ದ ಮುಖ ಸೊರಗಿದ್ದಂತೆ ಕಂಡಿತು.
ಒಂದು ವಾರದೊಳಗೇ ಇಷ್ಟೊಂದು ಮುದಿತನ ಅಡರಿತೋ ಹೇಗೆ?
ಬಿಸಿ ನೀರು ತಂದು, ಸೋಪು ಹಚ್ಚಿ, ಗಾಜಿನ ಸಾಣೆಗಲ್ಲಿನ ಮೇಲೆ ಬ್ಲೇಡು ತೀಡಿದ ಬಳಿಕ, ಬಲು ನಿಧಾನವಾಗಿ ಮುಖ ಕ್ಷೌರ. ಅದು ಮುಗಿದಾಗ, ಯೌವನದ ಹುರುಪು ಮರುಕಳಿಸಿದಂತೆ ಅವರಿಗೆ ತೋರಿತು. ಆದರೆ, ತಲೆಗೂದಲ ತುಂಬಾ ನೂರಾರು ಬೆಳ್ಳಿ ಗೆರೆಗಳು, ಬలు ತೆಳು. ಈ ಕೆಲ ವರ್ಷಗಳಿಂದ ಒಂದೇ ಸಮನೆ ಉದುರುತ್ತ ಬಂದಿವೆ. ಇನ್ನು ಹಲ್ಲುಗಳೂ ಉದುರಬಹುದು ಒಂದೊಂದಾಗಿ....
ಬಿಸಿಲೇರಿದ ಬಳಿಕ ಪ್ರಾತರ್ವಿಧಿಗಳು.
"ಎಣ್ಣೆ ಹಚ್ಚಲೇನು?”
"ಬೇಡ ಮಹಾರಾಯಿತಿ.”
ಬಿಸಿನೀರಿನ ಸ್ನಾನ.
ಸ್ನಾನದ ಬಳಿಕ ಪೂಜೆ ... ನಿತ್ಯದ ಗಡಿಬಿಡಿಯಲ್ಲಿ ದೇವರಿಗೆ ಎಷ್ಟೊಂದು ಅನ್ಯಾಯ ಮಾಡಿಲ್ಲ! ಇನ್ನು ಸಾವಕಾಶವಾಗಿ-ಬಲು ಸಾವಕಾಶವಾಗಿ -ಮಂತ್ರ ಜಪಿಸಬಹುದು.
ಪ್ರಸಾದನಿಂದ ಪತ್ರಬಂದು ಹತ್ತು ದಿನಗಳಾದುವು. ಆಗಾಗ್ಗೆ ಬರೆಯ ಬಾರದೆ ಇವನು? ತಂದೆಗೆ ಬರೆದರೆ ನಾಲ್ಕೇ ಸಾಲು. ಬರಿಯ ಒಣ ಕ್ಷೇಮ ಸಮಾಚಾರ. ತಂಗಿಗೆ ಬರೆದರೆ ನಾಲ್ಕಾರು ಪುಟಗಳು. ರೂ ರ್ ಕೆ ಲಾ ಕಾರಖಾನೆ ಯೋಜನೆ ಕಾರ್ಯಗತವಾಗುತ್ತಿರುವುದು