ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥವಿಚಾರ. ಇದು ಒಂದು ಪ್ರಸಿದ್ಧವಾದಿ ಚಂಪೂಗ್ರಂಥ. ಇದಕ್ಕೆ ಅಧ-ನೇಮಿಪುರಾಣ ವೆಂದು ವಾಡಿಕೆಯಾದ ಹೆಸರು. ಇದು ೨೨ ನೆಯ ತೀರ್ಥಂಕರನಾದ ನೇಮಿನಾಥನ ಚರಿತ್ರೆಯಾಗಿದೆ, ಇದನ್ನು ವೀರಬಲ್ಲಾಳನ ಪ್ರಧಾನನಾದ ಸಜ್ಜೆವಳ್ಳ ಪದ್ಮನಾಭನು ಹೇಳಿದಮೇಲೆ ತಾನು ಬರೆದುದಾಗಿ ಕವಿಯು ಹೇಳಿಕೊಂಡಿದ್ದಾನೆ. ಈ ಗ್ರಂಥದ ಪ್ರಥಮಾಶ್ವಾಸದ ೪೦ನೆಯ ಪದ್ಯದಲ್ಲಿ ( ಜಿನಕಥೆಯೊಳ್ ಸಂಧಿಸಿ ವಸುದೇವಾಚ್ಯುತ ಕಂದರ್ಪರ ಕಥೆಗಳನಿತುಮಂ ಎರಚಿಸುವೆಂ ? ಎಂದು ಹೇಳಿದಂತೆ ಜಿನಕಥೆಯನ್ನು ಮೊದಲು ಬರೆದು, ೪ ನೆಯ ಆಶ್ವಾಸದ ಮುಂದಕ್ಕೆ ವಸುದೇವನ ಪ್ರತಾಪವರ್ಣನೆಯನ್ನು ಮೊದಲು ಮಾಡಿ ೮ ನೆಯ ಆಶಾ ಸದಲ್ಲಿ ಕಂಸವಧೆಯಪರಂತ ಕಥೆಯನ್ನು ಹೇಳಿರುತ್ತಾನೆ. ಅಲ್ಲಿಂದ ಮುಂದೆ ಗ್ರಂಥವು ದೊರೆತಿಲ್ಲ. ಹೀಗಿರುವುದರಿಂದಲೂ, ಗ್ರಂಥಕ್ಕೆ ಅರ್ಧನೇಮ ಪುರಾಣವೆಂದು ವಾಡಿಕೆಯಾದ ಹೆಸರಿರುವುದರಿಂದಲೂ ಕವಿಯು ಗ್ರಂಥವನ್ನು ಪೂರ್ತಿಮಾಡದೆ ಕಾಲಾಧೀನನಾಗಿರಬಹುದೆಂದು ಊಹಿಸುವುದಕ್ಕೆ ಅವಕಾಶವಿದೆ. ಈ ಗ್ರಂಥದಲ್ಲಿ ಎರ್ಣನಾಭಾಗಗಳು ಬಹಳ ಹೃದಯಂಗಮವಾಗಿವೆ. ಕನ್ನಡ ಭಾಷೆಯ ಕವಿಗಳಲ್ಲಿರುವ ಅನ್ಯಾದೃಶಸಾಮರ್ಥ್ಯವನ್ನು ದೃಷ್ಟಾಂತಿಸುವುದಕ್ಕೆ ಇದು ಒಳ್ಳೆಯ ಗ್ರಂಥವಾಗಿದೆ. ಇದನ್ನು ಕಂಡೇ ವಾದಿವಿದ್ಯಾನಂದನು ಕಾವ್ಯ ಸಾರವೆಂಬ ಗ್ರಂಥದಲ್ಲಿ ಈ ಗ್ರಂಥದಿಂದಲೂ ಲೀಲಾವತಿಯಿಂದಲೂ ವಿಶೇಷವಾಗಿ ಪದ್ಯಗಳನ್ನು ಆರಿಸಿಕೊಂಡಿರುತ್ತಾನೆ. ಬೆಂಗಳೂರು, 25-7-1914. | ಮಂ.ಆ. ರಾಮಾನುಜಯ್ಯಂಗಾರ್ ಕ, ಕಾವ್ಯ ಕಲಾನಿಧಿ ಪ್ರಸಾರಕ