ನೋವು ೦೧ ಶ್ರೀ ಪರಮಾತ್ಮನಲ್ಲಿ ನಿತ್ಯವೂ ಬೇಡಿಕೊಳ್ಳುತ್ತಿದ್ದೇನೆ. - ಇಂತಿ, ನಮಸ್ಕಾರಗಳು, ಟಿ. ಎಸ್. ವಿಷ್ಣು ಮೂರ್ತಿ ಗಜಾನನ ತಂದ ಕಾಗದವನ್ನು ಶ್ರೀನಿವಾಸಯ್ಯ ಸಮಾಧಾನಚಿತ್ತರಾಗಿ ಓದಿದರು. ಓದಿ ಆದ ಮೇಲೆ ಲಕೋಟೆಯಲ್ಲಿದ್ದ ಮೂರು ಜಾತಕಗಳನ್ನು ಹೊರತೆಗೆದರು. ಅಷ್ಟರಲ್ಲಿ ಗೋವಿಂದ ಬಂದ. ಮಗನನ್ನು ಕಂಡೊಡನೆ ಶ್ರೀನಿವಾಸಯ್ಯ ಕೈಯಲ್ಲಿ ಇದ್ದುವನ್ನೆಲ್ಲ ಒತ್ತಟ್ಟಿಗಿಟ್ಟು, ಮೂಗಿನ ಮೇಲಿಂದ ಕನ್ನಡಕವನ್ನು ತೆಗೆದು ಮಡಚಿ, ಮಗನೊಡನೆ, “ಈತ ನಗರದಿಂದ ಬಂದಿದಾನೆ ; ವಿಷ್ಣುಮೂರ್ತಿಗಳು ಕಳಿಸಿದಾರೆ,” ಎಂದರು. ಗೋವಿಂದ ಜಮಖಾನದ ಮೇಲೆ ಕುಳಿತಿದ್ದ ಯುವಕನನ್ನು ನೋಡಿ, “ಏನೋ ಗಜಾನನ ? ಯಾವಾಗ್ಧಂದೆ ಊರಿಂದ ?” ಎಂದು ಕೇಳಿದ. “ ನಮಸ್ಕಾರ, ಗೋವಿಂದರಾವ್, ನಿನ್ನೆ ಬಂದೆ,” ಎಂದು ಗಜಾನನ ಉತ್ತರಿಸಿದ ಪ್ರತಿವಂದನೆ ಮಾಡುವ ಗೊಡವೆಗೆ ಹೋಗದೆ ಗೋವಿಂದನೆಂದ: “ ಇವತ್ತು ನೀನು ಬರಬಹುದೂಂತ ಲೆಕ್ಕ ಹಾಕಿದ್ದೆ.” " ಹ್ಯಾಗೆ?” "ವಿಷ್ಣುಮೂರ್ತಿಗಳು ಹೇಳಿದ ಪ್ರಕಾರ ಮೊನ್ನೆ ತಪ್ಪಿದರೆ ನಿನ್ನೆ ನೀನು ಬರಬೇಕಾಗಿತ್ತು. ಬರಲಿಲ್ಲ. ಇವತ್ತು ಬೆಳಗ್ಗೆ ಕಾಗೆ ಒಂದೇ ಸಮ ಕಾ ಕಾ ಅನ್ನು, ನೀನು ಬಂದೇ ಬಿಟ್ಟೆ. ಎಂಟು ಗಂಟೆ ಬಸ್ನಲ್ಲಿ ಹೊರಟಿಯೊ?” "ಹೌದು.” “ ಅದರಲ್ಲೇ ಬರೀಯಾ ಅಂಡ್ಕೊಂಡಿದ್ದೆ.” "ಮೊನ್ನೆನೇ ಬರಿದ್ದೆ. ಆದರೆ, ದಿನ ಚೆನ್ನಾಗಿಲ್ಲ ಅಂತ ಮಾವ ಮನೆಯಲ್ಲಿ ಎರಡು ದಿವಸ ಹೆಚ್ಚಿಗೆ ಉಳಿಸ್ಕೊಂಡು.” “ ಇರಲಿ, ಬಿಡು. (ತಂದೆಯತ್ತ ಹೊರಳಿ) ಇವನ ಹೆಸರು ಗಜಾನನ, ಅಣ್ಣಯ.” “ ಗೊತ್ತಾಯ್ತು. ಹೇಳ,” ಎಂದರು, ಮಗನ ಮಾತಿನ ವೈಖರಿಗೆ ಬೆರಗಾದ ಶ್ರೀನಿವಾಸಯ್ಯ, ಗೋವಿಂದ ಜಾಕೀಟನ್ನೂ ಟೋಪಿಯನ್ನೂ ಗೋಡೆಗೂಟಕ್ಕೆ ತೂಗಹಾಕಿ, ಗಜಾನನಿಗೆ ಸಮಾಪವಾಗಿ ಕುಳಿತುಕೊಂಡು, “ ವಾಪ್ಪು ಯಾವಾಗ ಬರೋಕೆ ಹೇಳಿದಾರೆ ವಿಷ್ಣುಮೂರ್ತಿಗಳು? ” ಎಂದು ಕೇಳಿದ. "ಸಾಧ್ಯವಾದರೆ ಇವತ್ತು ಸಾಯಂಕಾಲ, ಇಲ್ಲವಾದರೆ ನಾಳೆ,” ಎಂದ ಗಜಾನನ. " ಹೋಟೆಲಿನ ಕಟ್ಟಡ ಇತ್ಯಾದಿ ಇತ್ಯರ್ಥ ಮಾಡ್ಕೊಂಡೇ ಹೋಗೀಂತ ಕಾಣುತ್ತೆ.” “ ಹೌದು, ಹೌದು.” “ಸರಿ, ನಾಳೆ ನಾನೂ ಬರೀನಿ. ಪಟೇಲರದೊಂದು ಕೆಲಸ ಇದೆ. ಮಾಡಿಸೊಡೇಕು.” ಪಟೇಲರ ಮಾತು ಬಂದೊಡನೆ ಗೋವಿಂದ ಶಾಮೇಗೌಡರ ಮನೆಗೆ ಹೋಗಿದ್ದ ನೆನಪಾಗಿ,
ಪುಟ:ನೋವು.pdf/೧೧೧
ಗೋಚರ