ಪುಟ:ನೋವು.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೧೧೯

        ದಾರಿ ಕವಲೊಡೆದಿದ್ದಲ್ಲಿಗೆ ಅವರು ತಲಪಿದರು.
       "ಹೋಗ್ತೀರಾ ಹಾಗಾದರೆ?" ಎಂದ ಗೋವಿಂದ.
       "ನೀವೆಲ್ಲಿಗೆ? ಕೃಷ್ಟೇಗೌಡರಲ್ಲಿಗೋ ?” 
       ಸಾಧ್ಯವಿದ್ದರೆ, ತಾನು ಹೊರಟುದು ಎಲ್ಲಿಗೆ ಎಂಬುದನ್ನು ಹೇಳಬಾರದು –ಎಂದಿದ್ದ ಗೋವಿ೦ದ.
       ಈಗ ಅನಿವಾರ್ಯವಾಗಿ, "ಹೌದು," ಎಂದ.
      ಅದು ಸಾಮಾನ್ಯ ವಿಷಯ ಎನ್ನುವಂತೆ, ಅದನ್ನು ಮರೆಸುವುದಕ್ಕಾಗಿ ಗೋವಿಂದ ಕೇಳಿದ: 
      "ಅಬ್ದುಲ್ಲನಿಂದ ದುಡ್ಡು ಬಂತೆ ನಿಮಗೆ ?" 
      "ಶಾಮಣ್ಣೋರು ಆ ಜವಾಬ್ದಾರಿ ವಹಿಸ್ಕೊಂಡವರೆ."
      "ಈ ರಾಜಿ ಗೀಜಿ ಇರದೇ ಇದ್ದಿದ್ರೆ, ನಿಂಗಿ ಹಣ ವಾಪ್ಸು ಕೊಡಲಾರದೆ ಹೊಲಾನೆ ನಿಮಗೆ ಕೊಟ್ಬಿಡ್ತಿದ್ಲು ಅನ್ಸುತ್ತೆ."
      "ಓಗ್ಲಿ, ಬಿಡಿ." 
      "ಅದಷ್ಟೆ, ಅದಷ್ಟೆ. ಲೇವಾದೇವಿ ಮಾಡೋರ್ಗೇನು-ಹೊಲ ಮಾಡೋ ಮನಸ್ಸಿದ್ದರೆ ಸಿಕ್ಕಿಯೇ ಸಿಗುತ್ತೆ."
      "ಅಹ್ಹ ! ಗೋವಿಂದಪ್ಪ, ನಿಮ್ಮ ತಾತ ಹೊಲ ಮಾಡಿದ್ದು ಹೆಂಗೆ ಗೊತ್ತೈತೊ ?" 
      "ಓಹೋ. ಲೇವಾದೇವಿ ಮಾಡುವವರ್ಗೂ ಜಮಿಾನಿಗೂ ನಂಟು ಅಂತ ನಮ್ಮ ಮನೆತನದ ಅನುಭವದಿಂದ್ಲೇ ಹೇಳಿದ್ನೆಪ್ಪಾ."
      "ಏನೇ ಅನ್ನಿ. ನಿಮ್ಮ ತಾತ ರುಸ್ತುಂ ಮನುಷ್ಯ." 
      "ಯಾಕೆ ? ನಾವು ಕಳಪೆ ಅಂತಲೋ ?"
      "ಉಂಟೆ ? ಚಿಕ್ಕ ಉಡುಗ್ನಾಗಿದ್ದಾಗ್ಲಿಂದ ನೋಡ್ತಾ ಬಂದಿಲ್ವೆ ಗೋವಿಂದಪ್ಪ ? ಈಗ ಓಗಿ ಬನ್ನಿ ಅಂತ ನಾನೇ ಮಾತಾಡಿಸ್ತಾ ಇವ್ನಿ."
      "ಅಂತೂ ಪಟೇಲ್ರು ಅಬುಲ್ಲನಿಗೆ ರಕ್ಷಣೆ ಕೊಟ್ಟರೂಂತಾಯು." 
      "ಪಾಪ. ಎಲ್ಲಾದರೂ ಬದುಕ್ಕೊಳ್ತಾನೆ." 
      "ಹೊಲ ಬಿಟ್ಕೊಟ್ನೊ ?" 
      "ಅಳ್ಳೀ ಒರಗಡೆ ಒಂದು ಗುಡ್ಲು ಕಟ್ಟುತಾನೆ, ಇವತು. ನಾಳೆ ಅಲ್ಲಿಗೆ ಒಂಟೋಗ್ತಾನೆ." 
      "ಸರಿ, ಬರ್ಲಾ ?" 
      "ಊ೦ ಗೋವಿಂದಪ್ಪ." 
      ವೆಂಕಟಪ್ಪ ತನ್ನ ಮನೆಯ ದಾರಿ ಹಿಡಿದ. ಬಾಯಲ್ಲಿ ಉಗುಳಿತ್ತು.  ಥೂ ಎಂದು ಅದನ್ನು ಹೊರಕ್ಕೆ ತಳ್ಳಿದ. ಅವನ ಹುಬ್ಬಗಳು ಗಂಟಿಕ್ಕಿಕೊಂಡು, ಹಾದಿಯುದ್ದಕ್ಕೂ ಹಾಗೆಯೇ ಉಳಿದುವು.
       ಗೋವಿಂದ, 'ಎಲ್ಲಾ ಕ್ರಮ ಪ್ರಕಾರ ಆಗ್ತಾ ಇದೆ. ಅಣ್ಣಯ್ಯನಾಗಲೀ ದೊಡ್ಡಮ್ಮನಾಗಲೀ ಅಡ್ಡಿ ಬರದಿದ್ರೆ ಸಾಕು'

ನಾಗಲೀ ಅಡ್ಡಿ ಬರದಿದ್ರೆ ಸಾಕು' ಎಂದುಕೊಳುತ್ತ, ಈ ಜಾತಕ ನೋಡೋದೊಂದು ಗೋಳು, ಏನಿದ್ದರೂ ಕಾಮಾಕ್ಷಿಯೇ ನನಗಿಷ್ಟ ಅಂತ ಹೇಳಿಬಿಡ್ಬೇಕು -ಎಂದು ಯೋಚಿಸುತ್ತ, ಕಾಮಾಕ್ಷಿಯ ಲಾವಣ್ಯವನ್ನೂ ಮಾದಕ ನಗೆಯನ್ನೂ ಕಣ್ಣುಗಳನ್ನು ಆಕೆ ಕಿರಿದುಗೊಳಿಸಿ