ಪುಟ:ನೋವು.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ನೋವು

ನೋಡುವ ಭಂಗಿಯನ್ನೂ ಮೆಲುಕು ಹಾಕುತ್ತ, ಕೃಷ್ಟೇಗೌಡರ ಮನೆಗೆ ನಡೆದ........ 
  ...ಮನೆಗೆ ಬಂದ ಅಪರಿಚಿತ ಯುವಕನ ವಂದನೆಯನ್ನು ‌ಶಾಮೇಗೌಡರು ಸ್ವೀಕರಿಸಿ,

"ಏನಾಗ್ಬೇಕು ?" ಎಂದರು.

    ಗಜಾನನ ತನ್ನೆ ಪರಿಚಯವನ್ನು ಹೇಳಿಕೊಂಡ.
    "ಅಯ್ಯನೋರ ಮನೆಗೆ ಇವತ್ತು ಬಂದೋರು ನೀವೇನಾ ?"
    "ಹೌದು."
    “ಹುಂ.”
   ಗಜಾನನ ಚೀಲದಿಂದ ಒಂದು ಪೊಟ್ಟಣವನ್ನು ಹೊರತೆಗೆದು ಮುಂದಿರಿಸಿದ. ಶಾಮೇ ಗೌಡರು ಜಮಖಾನದ ಕಡೆಗೆ ಬೊಟ್ಟು ಮಾಡಿ, "ಕೂತ್ಕೊಳ್ಳಿ. ಇದೆಲ್ಲಾ ಯಾಕ್ತರ‍್ತೀರಿ ?" ಎಂದರು.
   ಕುಳಿತುಕೊಳ್ಳುತ್ತ ಗಜಾನನ ಅಂದ: 
   "ಬದಾಮ್ ಹಲ್ವ, ಪ್ರೀತಿಯಿಂದ ಕೊಡೋ ಅಲ್ಪ ಕಾಣ್ಕೆ, ಸ್ವೀಕರಿಸ್ಬೇಕು." 
   ಅಂಗಳದಲ್ಲಿ ಬೀರನೊಡನೆ ಮಾತನಾಡುತ್ತ ಕರಿಯ ನಿಂತಿದ್ದ.
   "ಕರಿಯ, ಅದನ್ನೆ ತಕೊಂಡೋಗಿ ಒಳಗ್ಕೊಡು," ಎಂದರು ಗೌಡರು, ಪೊಟ್ಟಣದತ್ತ 

ಬೊಟ್ಟು ಮಾಡಿ.

  ಗಜಾನನನ್ನು ದಿಟ್ಟಿಸಿ ಅವರೆಂದರು :
  "ಅಯ್ಯನೋರಲ್ಲಿ ಇಳಕೊಂಡಿದೀರಿ ಆಂದ್ಮ್ಯಾಕೆ ಊಟ ಆಗಿ‌‍ರ‍್ಬೌದು."
  "ಹೌದು.  ಆಗಿದೆ."
  "ಆಸರೆಗೆ ಏನು ತಕೋಂತಿರಿ ? ಆಲು ಗೀಲು---"
  "ಏನೂ ಬೇಡಿ."
  "ಅದೆಂಗಾತದೆ ? [ ಪೊಟ್ಟಣ ಒಯ್ದಿಟ್ಟು ಬಂದ ಕರಿಯನತ್ತ ನೋಡಿ ] ಒಳಗ್ಹೋಗಿ ಸೋಮಿಯೋರಿಗೆ ಕುಡಿಯಾಕೆ ಆಲು ತಕಂಬಾ. ಸಕ್ರೆ ಆಕ್ಬೇಕಂತೆ ಅಂತ ಯೋಳು."
 ಒಳ್ಳೆಯ ಮನುಷ್ಯ ಎನಿಸಿತು ಗಜಾನನನಿಗೆ. ಆದರೆ ಗೋವಿಂದನಿಗೆ ಮಾತ್ರ ಇವರನ್ನು ಕಂಡರಾಗುವುದಿಲ್ಲವಲ್ಲ–ಎಂದು ವಿಸ್ಮಯವಾಯಿತು. ಹಳ್ಳಿಯ ರಾಜಕಾರಣ, ತನಗೆ ಅರ್ಥವಾಗುವುದು ಕಠಿನ–ಎಂದು ಸುಮ್ಮನಾದ. 
  ಗಜಾನನ, ಅಂಗಿಯ ಜೇಬಿನಿಂದ ಲಕೋಟೆಯನ್ನು ತೆಗೆದು ಗೌಡರಿಗೆ ಒಪ್ಪಿಸಿದ. 
  "ಅದೇನು ?" ಎಂದು ಪ್ರಶ್ನಿಸಿದ ಗೌಡರು, ಕಾಗದವನ್ನು ಬಿಡಿಸಿ, ತುಸು ದೂರೆ ಹಿಡಿದು, ಪ್ರಯಾಸಪಡುತ್ತ ನಿಧಾನವಾಗಿ ಓದತೊಡಗಿದರು.
   ಅವರು ಅದನ್ನು ಓದುತ್ತಲಿದ್ದಾಗ ಎತ್ತರದ ಲೋಟದಲ್ಲಿ ಹಾಲು ಬಂತು. ದ್ರವವಲ್ಲ ಎಂಬ ಭ್ರಮೆ ಹುಟ್ಟಿಸುವಷ್ಟು ದಟ್ಟಗಿತ್ತು ಅದು. ಆದರದ ನೋಟದಿಂದ ಗಜಾನನ ಅದನ್ನು ನೋಡಿದ. ಆ ಬಗೆಯ ಅಷ್ಟು ಹಾಲಿನಲ್ಲಿ ಇಪ್ಪತ್ತು ಕಪ್ ಕಾಫಿ ತಯಾರಿಸಬಹುದು– ಎನಿಸಿತು.
  ಓದುವುದನ್ನು ನಡುವೆ ನಿಲ್ಲಿಸಿ ತಲೆಯೆತ್ತಿ, "ಆಲು ತಕಳ್ಳಿ," ಎಂದು ಹೇಳಿ, ಗೌಡರು ಓದುವುದನ್ನು ಮುಂದುವರಿಸಿದರು.