ಪುಟ:ನೋವು.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೧೧೧

 ಸವಿಯಾದ ಹಾಲನ್ನು ಕುಡಿದು, ಇಂಥ ಭಾಗ್ಯ ಹಳ್ಳಿಗಳಲ್ಲಷ್ಟೇ ಲಭ್ಯ ಎಂದು ಭಾವಿಸುತ್ತ   ಗಜಾನನೆ ಲೋಟ ಕೆಳಗಿಟ್ಟು,ಅಂಗೈಯ ಹಿಂಬದಿಯಿಂದ ತುಟಿಗಳನ್ನ ಒರೆಸಿಕೊಳ್ಳುತ್ತಿದ್ದಾಗ,

ಗೌಡರು ಒದು ಮುಗಿಸಿ ತಲೆ ಎತ್ತಿದರು.

  "ಹಿಂಥಾ ಅರ್ಜಿಯೆಲ್ಲ ಯಾತಕ್ಕೆ ? ಫೀಸುಗೀಸು ಒಂದೂ ಕೊಡ್ಬೇಕಾಗಿಲ್ಲ ಸೋಮಿ, ಈ ರೀತಿ ಯವಾರ ಪಟ್ನದಲ್ಲೇ ಸರಿ. ಕಣಿವೇಹಳ್ಳಿ ಸ್ಥಿತಿ ಅಷ್ಟು ಕೆಟ್ಟಿಲ್ಲ." 
   ಗೌಡರ ಮಾತು ಕೇಳಿ ಸಂತುಷ್ಟನಾದ ಗಜಾನನ ಅಂದ :
   " ತಾವು ಹ್ಯಾಗೆ ಅಪ್ಪಣೆ ಕೊಡಿಸ್ತೀರೋ ಹಾಗೆ. ನನ್ನ ಅರ್ಜಿಗೆ ಉತ್ತರ ಅಂತ ತಾವೇನಾದರೂ-"
   "ಉತ್ತರವೂ ಇಲ್ಲ ಏನೂ ಇಲ್ಲ.ನಮ್ಮ ಮಾತು ಸಾಲ್ದೇನೋ ?"
   "ಸಾಕು."
   " ಈಗಿನ ಕಾಲ ಧರ್ಮ, ಓಟ್ಲು ಬೇಕು ಅಂತಾರೆ. ಇರ‍್ತದೆ. ಕಾಫಿ ಕುಡೀಬ್ಯಾಡಿ, ಶೋಕಿ ಮಾಡ್ಬ್ಯಾಡಿ–ಅಂತ ಅಳ್ಳಿಯೋರಿಗೆ ಯೋಳೋಕಾತದಾ ?"
  ಗೌಡರು ನಕ್ಕರು. ಅವರ  ಮೀಸೆ ಆ ಹಾಸ್ಯವನ್ನು ಸವಿದು ಕುಣಿಯಿತು.
  ಗೌಡರ ತೃಪ್ತಿಯಲ್ಲಿ ತಾನೂ ಭಾಗಿ ಎಂದು ತೋರಿಸಲು ಗಜಾನನ ಮೌನವಾಗಿ ನಕ್ಕ.
  ಉಸಿರೆಳೆದು, ಗಜಾನನನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿ ಗೌಡರು ಕೇಳಿದರು :
  "ಓಟ್ಲಿಗೆ ನೀವೇ ಮಾಲಿಕರೊ ?”
  "ಹೌದು.”
  "ಈ ಮುಂಚೆ ಬಂದಿದ್ರಲ್ಲ, ಆಯಪ್ಪ ನಿಮ್ಮ ಸಂಬಂಧಿಕರೊ ?"
  “ವಿಷ್ಣುಮೂರ್ತಿಗಳು ನನಗೆ ದೂರದ ಸಂಬಂಧ."
  "ನಿಮಗೆಷ್ಟು ಜನ ಮಕ್ಕಳು ?"
  “ಒಂದೇ.ಕೈಗೂಸು."
  “ಗಂಡೋ ?”
  "ಅಲ್ಲ, ಹೆಣ್ಣು."
  [ಗಜಾನನನೆಂದುಕೊಂಡ : ಹೆಸರು ವಿನೋದಾ ಎಂದರೆ ಏನೆನ್ನುವರೊ ಗೌಡರು ?]
  "ಹು೦. ಎಷ್ಟು ವರ್ಷವಾಯ್ತು ಮದುವೆಯಾಗಿ ?"
  "ಹೋದ ವರ್ಷ."
  ಗೌಡರು ಯೋಚನಾಮಗ್ನರಾದರು. ಗಜಾನನ ಬಗೆಗಲ್ಲ. ತಮ್ಮ ಮಕ್ಕಳ ನೆನಪಾಗಿ.
  "ಈಗ ಎಲ್ರೂ ಮದುವೆ ತಡವಾಗೇ ಮಾಡ್ಕೊಂತಾರೆ," ಎಂದರು, ಕ್ಷಣಕಾಲ ನೆಲ ನೋಡಿ.
  ಮತ್ತೆ ಮುಖದ ಮೇಲೆ ಗೆಲುವು ತಂದುಕೊಂಡು ಅವರೆಂದರು :
 "ಎಲ್ಲಾ ಏರ್ಪಾಟು ಮಾಡ್ಕೊಂಡು ಹೋಗೋಕೆ ಬಂದಿದೀರೋ?"
 "ಹ್ಹ, ಹೋಟ್ಟು ಶುರುವಾಗೋಕ್ಮುಂಚೆ ಇನ್ನೊಂದ್ಸಲ ಬಂದು ಹೋಗ್ತೀನಿ,

ಸಾಮಾನು ತರಬೇಕಲ್ಲ. ಟಾರು ರಸ್ತೆಯಿಂದ ಇಲ್ಲಿಗೆ ಬರೋದೆ ಕಷ್ಟದ್ದು.”

 "ಯಾವ ದಿವಸ ಅಂತ ಹೇಳಿ,–ಆಳುಗಳ್ನ ಕಳಿಸಾನ.”