ಪುಟ:ನೋವು.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ನೋವು

       " ಅಷ್ಟು ಮಾಡಿದ್ರೆ ದೊಡ್ಡ ಉಪಕಾರವಾಗುತ್ತೆ."
         ತಮ್ಮ ಸಹಾಯ ನಿಜವಾಗಿಯೂ ಅನಗತ್ಯವಲ್ಲವೆ ಎನ್ನುವಂತೆ ಗೌಡರೆಂದರು :
       " ಆಳುಗಳಿಗೇನು, ಅಯ್ನೋರ ಮನೆಯಿಂದಲೂ ಬರ್ತಾರೆ."
         ಮಾತಿನಲ್ಲಿ ವಿಷ್ಣುಮೂರ್ತಿಯವರನ್ನೂ ಮಿಾರಿಸಲೆತ್ನಿಸುತ್ತ ಗಜಾನನ ಅಂದ : 
       "ತಮ್ಮೆಲ್ಲರ ಸಹಕಾರದಿಂದಲೇ ಹೋಟ್ಲು ನಡೀಬೇಕು." 
        ಕುಳಿತಿದ್ದ ಗೌಡರು ಎದ್ದರು. 
  "ಸರಿ. ಶುರುವಾಗುವಾಗ ಬಂದು ತಿಲಿಸಿ."
       ಗಜಾನನನೂ ಎದ್ದು ನಿಂತ : 
  " ಉದ್ಘಾಟನೆ ಮಾಡೋಕೆ ತಾವು ಒಪ್ಪಿದೀರಿ ಅಂತ ವಿಷ್ಣುಮೂರ್ತಿಗಳು ಹೇಳಿದಾರೆ.” 
  ಹಗ್ಗ ಹರಿದು, ತಮ್ಮ ಅಂಕೆ ಮೀರಿ.ಬಾಲವೆತ್ತಿ ಹೋರಿ ಓಡತೊಡಗಿದಂತೆ ಗೌಡರಿಗೆ

ಭಾಸವಾಯಿತು.

     ಅರ್ಥವಾಗದ ದುಗುಡವನ್ನು ಹತ್ತಿಕ್ಕಲೆತ್ನಿಸುತ್ತ ಅವರೆಂದರು : 
    " ಒಳ್ಳೇ ತಮಾಷಿಯಾಯ್ತಲ್ಲಯ್ಯ ಇವನ್ದು, ಹೂಂ. ಆಮ್ಯಾಕೆ ನೋಡಾನ."
     ಗಜಾನನ ಚೀಲವನ್ನೆತ್ತಿಕೊಂಡು, " ಬರ್ತೀನಿ, ನಮಸ್ಕಾರ" ಎಂದು ಹೇಳಿ ಹೊರಟ. 
     ಅಂಗಳದಲ್ಲಿ ಬೀರ, "ಕೃಷ್ಣೇಗೌಡರ ಮನೆಗೆ ಕರಕಂಬಾ ಅಂದವರೆ,” ಎಂದ.
    " ಹೂಂ, ಅಲ್ಲಿಗೇನೇ..."
    ....ಅಲ್ಲಿ ಕೃಷ್ಣೇಗೌಡ ಗೋವಿಂದನೊಡನೆ ಮಾತುಕತೆಯಲ್ಲಿ ನಿರತನಾಗಿದ್ದ.
     ಗೋವಿಂದ ಆಡಿದ ಒಂದು ಮಾತು ಕೃಷ್ಣೇಗೌಡನನ್ನು ಬಹಳವಾಗಿ ಕಲಕಿತು :
    " ಅಬ್ದುಲ್ಲನಿಗೆ ಕ್ಷಮಾದಾನವೋ ಜೀವದಾನವೋ ಏನು ಬೇಕಾದರೂ ಮಾಡ್ಲಿ.
    ಆದರೆ ಪಟೇಲರು ಪಂಚಾಯಿತಿಯವರನ್ನು ಕರೆದು, ಅಲ್ಲೆ ತಮ್ಮ ಅಭಿಪ್ರಾಯ 

ಮುಂದಿಟ್ಟು, ಉಳಿದವರ ಮನಸ್ಸು ಒಲಿಸಿಕೊಳ್ಳಬೇಕಾಗಿತ್ತು. ಇಡೀ ಹಳ್ಳಿಗೆ ತಾವೊಬ್ಬರೇ ಯಜಮಾನ

     ಅನ್ನುವ ಥರ ಮಾಡಿದರೆ ಹಾಗೆ ?"
    ಕೃಷ್ಣೇಗೌಡ ಸಿಗರೇಟು ಸೇದುತ್ತ ಮತ್ತೆ ಮತ್ತೆ ಯೋಚಿಸಿದ:
     ವಯಸ್ಸಿನಲ್ಲಿ ಚಿಕ್ಕವನಾದರೂ ಗೋವಿಂದ ವಿವೇಕಶಾಲಿ. ಇವನಿಗೆ ಹೊಳೆದದ್ದು

ಶಾಮಣ್ಣನವರಿಗೆ ಹೊಳೆಯದೆ ಹೋಯಿತಲ್ಲ!

   ಗೋವಿಂದನ ಮುಂದಿನ ಮಾತಿನಲ್ಲಿ ಸಾಸಿವೆಕಾಳು ಗುಡ್ಡವಾಯಿತು :
   " ನಗರದಲ್ಲಿ ಎಂ.ಎಲ್.ಎ.ಗಳೂ ಅಧಿಕಾರಿಗಳೂ ನನಗೆ ಗುರ್ತು. ಪತ್ರಿಕೆಯವರ
 ಪರಿಚಯವೂ ನನಗಿದೆ. ಕಣಿವೇಹಳ್ಳೀಲಿ ಸರ್ಕಾರೀ ಕಾನೂನು ನಡೀತಿಲ್ಲ ಅಂತ ನಾನು ಅಲ್ಲಿಗೆ 
ಹೋಗಿ ಹೇಳಿದ್ರೆ ಏನಾದಾತು ಗೊತ್ತೊ ? ಆದರೆ ಅಂಥಾ ಕೆಲಸ ನಾನು ಮಾಡೋದಿಲ್ಲ.
ಯಾಕೆ ? ಹಳ್ಳಿಯ ಒಗ್ಗಟ್ಟು ನನಗೆ ಮುಖ್ಯ."
     ಕೃಷ್ಣೇಗೌಡನ ಸಿಗರೇಟಿನ ಹೊಗೆ ಒಂದಾದರೆ, ಅವನ ಒಳಗೆ ಮಸಕು ಮಸಕಾಗಿ 
ಹೆಡೆಯಾಡಿಸುತ್ತಿತ್ತು ಇನ್ನೊಂದು ಹೊಗೆ. ಗೋವಿಂದ ಅದನ್ನು ಬಲ್ಲ. ಅವನ ಮಾತು 
ಗಾಳಿಯಾಗಿ ಹಾಯಬಯಸಿದುದು ಆ ಕೊಳ್ಳಿಯ ಕಡೆಗೆ.
        "ತಗೋ ಗೋವಿಂದಪ್ಪ, ಸೇದು ಸಿಗರೇಟು."