ಪುಟ:ನೋವು.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೧೧೫ " ಪದ್ಮನೆ ಹತ್ತಿರ ಮಾತಾಡಿದಿಯಾ ?" " ಇಲ್ಲ. ಮಾತಾಡಿದರಾಯು. ಕಾಲೇಜ್ನಲ್ಲಿ ಓದಿರೋನು. ವಿದ್ಯಾವಂತೆ ಹುಡುಗೀನೇ ಬೇಕು ಅ೦ದಾನು." " ಹಾಗಾದರೆ ಲಾಯರ್ ಮಗಳೇ ಸರಿ." "ಆದ್ರೆ ಒಂದು ವಿಷಯ, ಶೀನ. ಓದಿದ ಹುಡುಗೀರು ಈ ಹಳ್ಳಿಲಿ ಮನೆಗೆಲಸ ಮಾಡ್ಕೊ೦ಡು ಇರ್ತಾರೆಯೆ ?" . - " ಅದೊಂದೂ ನನಗೆ ಗೊತ್ತಿಲ್ಲಮ್ಮ. ನನಗೇನೋ ಓದೋಕ್ಬಾರದ ಹುಡುಗಿಯನ್ನೇ ತ೦ದು ಗ೦ಟು ಹಾಕಿದ್ರಿ." " ಆಗಿನ ಕಾಲ್ದಲ್ಲಿ ಹುಡುಗಿಗೆ ಓದು ಬರತ್ಯೆ ಅಂತ ಯಾರು ಕೇಳ್ತಿದ್ರು ?" "ನಿಜ, ಅನ್ನು. ಈಗ ಈ ಗೊಂಬೆ ನಿನಗೆ ಒಪ್ಪಿಗೇನಾ ಅಂತ ಹುಡಗರ್ನ ಕೇಳೋ ಸ್ಥಿತಿಗೆ బంದಿದಿವಿ." ಮತ್ತೆ ನೀರವತೆ. " ಪದ್ಮ ಇದಾನಾ ಶೀನ?" " ಮಲಕೊಂಡಿರಬೇಕು. ಇನ್ನೆಲ್ಲಿಗೆ ಹೊಗ್ತಾನೆ ?" [ಈಗಲೇ ಮಾತನಾಡಿಸಬಹುದು ಎಂದುಕೊಂಡರು ದೊಡ್ಡಮ್ಮ. ಆದರೂ ಹಿಂಜರಿದರು. ಆದಷ್ಟು ದಿನ ಕಳೆಯಲಿ, ಅವನ ಮನುಸ್ಸು ಸರಿಹೋಗಲಿ–ಎಂಬ ಅಪೇಕ್ಷೆ ಅವರದು. ಲಾಯರ್ ಮಗಳು ಸುಂದರಿಯೂ ಆಗಿದ್ದರೆ ಪದ್ಮನನ್ನು ಒಪ್ಪಿಸುವುದು ಕಷ್ಟವಾಗದು–ಎಂಬ ವಿಶ್ವಾಸ.] " ಒಂದು ಮಾಡು, ಶೀನ. ಗಂಗಾಧರ ಶಾಸ್ತ್ರಿಗಳಿಗೂ ಜಾತಕಗಳ ಒಮ್ಮೆ ತೋರ್ಸು." " ಆಗಲಮ್ಮ." ಮತ್ತೆ ಬಹಳ ಹೊತ್ತು ಮಾತಿಲ್ಲ.ಶ್ರೀನಿವಾಸಯ್ಯ ಎದ್ದು ಶತಪಥ ತುಳಿದ ಸದ್ದು ಭಾಗೀರಥಿಗೆ ಕೇಳಿಸಿತು. ದೊಡ್ಡಮ್ಮ ಆಗಲೇ ಒಳಮನೆಗೆ ಹೋಗಿರಬೇಕು ಎನಿಸಿತು ಅವಳಿಗೆ. ಅವಳೆ೦ದುಕೊ೦ಡಳು :

ಎಂಥ ತಮಾಷೆ ! ಹೋಟೆಲಿನವರು ಬಯಸಿರುವುದು ಗೋವಿಂದ ಅಳಿಯನಾಗಲಿ ಎಂದು. ಆದರೆ ಜಾತಕಗಳು ಸರಿಹೋಗುವುದಿಲ್ಲ. ಅಂದರೇನು ? ಈ ಸಂಬಂಧ ಕುದುರುವುದಿಲ್ಲ ಎ೦ದೊ ? 

ಭಾಗೀರಥಿಗೆ ಒ೦ದು ಬಗೆಯ ಸಂತೋಷವಾಯಿತು. ತಾನು ಬಡ ಶಾನುಭೋಗರ ಮಗಳು. ಆ ಹೋಟೆಲಿನವನ ಹಾಗೆ ಅತಿ ಮಾತಿಲ್ಲದ ಗತುಗಾರಿಕೆಯಿಲ್ಲದ ಸಾತ್ವಿಕರು ತನ್ನ ತಂದೆ. ಶ್ರೀಮಂತ ಕುಟುಂಬದವಳು ಎಂಬ ಹೆಮ್ಮೆಯಿಂದ ಆ ಹೋಟೆಲಿನ ಹುಡುಗಿ ತನ್ನ ಮೇಲೆ ಸವಾರಿ ಮಾಡತೊಡಗಿದರೆ? ಅಲ್ಲದೆ, ತನಗೆ ತಿಳಿಯದೆ ? ಮೈದುನ ಗೋವಿಂದನೂ ಜೋರಿನವನೇ, ಹೊಲಗಳನ್ನು ನೋಡಿಕೊಂಡು, ದುಡಿದು ಸಂಪಾದಿಸುವುದು ತನ್ನ ಗಂಡ. ಈತ ಸೊಸೈಟಿ–ನಗರ ಅಂತ ಮಾತಿನ ಗುಡ್ಡ ಕಡಿದೇ ದಿನ ತಳ್ಳುವವನು. ಹೋಟೆಲ್ ಮಾವನೂ ಇವನೂ ಜತೆಯಾದರೆ ಏನು ತಾನೇ ಮಾಡಲಾರರು ! ಅಥವಾ, ಲಾಯರ್ ಮಗಳೇ ಗೋವಿಂದನ ಕೈ ಹಿಡಿದರೆ? ಸೋಮಪುರಕ್ಕೊಮ್ಮೆ