ಪುಟ:ನೋವು.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ನೋವು ಒಳಗಿನಿಂದ ದೊಡ್ಡಮ್ಮನ ಸ್ವರ ಕೇಳಿಸಿತು :

" ಭಾಗೀರಥೀ, ಶ್ರಿಪಾದೂನ ಎತ್ಕೋಂಡ್ಬಾ."
ತಾಯಿ ಎದ್ದು ಎತ್ತಿಕೊಂಡೊಡನೆ ಶ್ರಿಪಾದ ಸುಮ್ಮನಾದ. 

ಆಕೆ ಒಳ ಹೋದಾಗ ದೊಡ್ಡಮ್ಮ ಅಂದರು :

" ಗೋವಿಂದನೂ ಅವನ ಸ್ನೇಹಿತನೂ ಬರೋ ಹೊತ್ತಾಯ್ತು, ಒಂದಿಷ್ಟು ಉಪ್ಪಿಟ್ಟು ಕಾ ಮಾಡ್ಬೇಕಮ್ಮ." -

ಭಾಗೀರಥಿ ಶ್ರೀಪಾದನನ್ನ ನೆಲಕ್ಕೆ ಇಳಿಬಿಟ್ಟಳು. ಆತ, ಕೊಬ್ಬರಿ ತುರಿದು ಬದಿಗಿರಿಸಿದ್ದ ಬರಿದು ಕರಟವವೋಂದನ್ನು ಎತ್ತಿಕೊಂಡ,ಆಟಕ್ಕೆ. ಭಾಗೀರಥಿಯ ಮೈ ಬೆವತಿತು, ಆ ಕೆಟ್ಟ ಕನಸು ಮತ್ತೆ ಮತ್ತೆ ಅವಳ ಕಣ್ಣೆದುರು ಕಟ್ಟಿತು. ಅದನ್ನು ಮರೆಯಲೆತ್ನಿಸುತ್ತ ಭಾಗೀರಥಿ, ಆಡುಗೆ ಒಲೆಯ ಸೌದೆ ಚೂರುಗಳನ್ನು ಸರಿಪಡಿಸಿದಳು. ...ಗುಡಿಯ ತನಕ ಹೋಗಿ ಬರೋಣ ಎಂದುಕೊಂಡ ಪದ್ಮನಾಭ.. ಆದರೆ, ಹೊರಗೆ ಹಗಲು ಬಾಡಿತು, ಮಳೆ ಬರುವ ಲಕ್ಷಣ.. ಬಂದರೆ ಬರಲಿ, ಗುಡಿಯ ಕಲ್ಲುಮಂಟಪದಲ್ಲಿ ಕುಳಿತರಾಯಿತು–ಎಂದು ಯೋಚಿಸಿದ, ಆದರೆ ಹಿಂದಿನ ಸಂಜೆಯ ಹಾಗೆ ಧಾರಾಕಾರವಾಗಿ ಮಳೆ ಸುರಿದರೊ? ಕತ್ತಲಾದ ಮೇಲೆ ದಿಬ್ಬ ಇಳಿದು ಬರುವುದು ಕಷ್ಟವಾದೀತು, ಮುನಿಯನ ಆ ಶವ. ಅಲ್ಲೇ ಊಟವಿಲ್ಲದೆ ಮಲಗಿ ನಿದ್ದೆ ಹೋದರೇನಾದೀತು? ಉಂಟು ಮಾಡಿದ ದೇವರು ಊಟ ಕೊಡಲಾರನೆ ? ಕೊಡದಿದ್ದರೆ ಅಷ್ಟೇ ಹೋಯಿತು. ಆದರೆ ಇರಿಚಲನ್ನೂ ಚಳಿಗಾಳಿ ಯನ್ನೂ ಸಹಿಸುವುದು ಹೇಗೆ? ಹೊರಬೀಳುವ ಯೋಚನೆಯನ್ನು ಬಿಟುಕೊಟು, ಒಂದು ಬಾರಿ ಓದಿದ್ದ ಆಂಗ್ಲ ಕಾದಂಬರಿಯೊಂದನ್ನು ಪದ್ಮನಾಭ ಮತ್ತೆ ಎತ್ತಿಕೊಂಡ.

......ಗೋವಿಂದನೂ ಗಜಾನನನೂ ಕೃಷ್ಟೇಗೌಡನ ಮನೆಯಿಂದ ಹೊರಟು, ಹೋಟೆಲಿ ಗಾಗಿ ದೊರೆತ ಕಟ್ಟಡವನ್ನು ನೋಡಿಕೊಂಡು, ನದಿಯ ದರ್ಶನ ಪಡೆದು, ಗೃಹಾಭಿಮುಖಿ ರಾದರು.
    ದಾರಿಯಲ್ಲಿ ಗೋವಿಂದ, ಹಳ್ಳಿಯ ವಿವಿಧ ಕುಟುಂಬಗಳ ಕಥೆಯನ್ನು ಗಜಾನನನಿಗೆ ತಿಳಿಸಿದ. ತಾನು ಕಟ್ಟಿದ ಸಹಕಾರ ಸಂಘದ ಕಾಲ್ಪನಿಕ ಚಟುವಟಿಕೆಗಳನ್ನು ಬಣ್ಣಿಸಿದ. ಮುನಿಯನ ಪ್ರಕರಣವೇನೆಂಬುದನ್ನು ವಿವರಿಸಿ {"ಅಲ್ಲ ಗೋವಿಂದರಾವ್, ಅಬುಲ್ಲನ್ನು ಅದೇನೋ ಹೇಳಿದಿರಲ್ಲ-ಏನದು?"] " ಹೋಗಲಿ ಪಾಪ-ಅಂತ ಆ ಪಟೇಲನ್ನ ಬಿಟ್ಟಿದೀನಿ ಎಂದ.
 ಅವನ ಕನಸುಗಳಾ !
"ಮುಂದಿನ ತಿಂಗಳಿಂದ ಶಾಲೆ ಶುರುವಾಗುತ್ತೆ ಇಲ್ಲಿ, ಇಬ್ಬರು ಮೇಷ್ಟಗಳಿದ್ದಾರೆ. ಒಬ್ಬ ಪಕ್ಕದ ಹಳ್ಳಿಯಿಂದ ದಿನಾ ಬಂದು ಹೋಗಾನೆ. ನಮ್ಮ ಶಾನುಭೋಗರ ಸಂಬಂಧಿಕ. ಶಾನುಭೋಗರು ಹೆಚ್ಚಾಗಿ ಇರೋದು ಆ ಹಳ್ಳಿಲೇ ಎರಡು ಮನೆಗಳ ಮನುಷ್ಯ ! ಇನ್ನೊಬ್ಬ ಮೇಷ್ಟ ಪರವೂರಿನವನು. ಶಾಲೆಗೆ ತಗಲೋಂಡು ಆ ಹಟ್ಟಿ ಇದೆಯಲ್ಲ ?

ಅದರಲ್ಲಿ ತಾನೇ ಅಡುಗೆ ಮಾಡೊಂಡು ವಾಸವಾಗಿದಾನೆ. ಬ್ರಹ್ಮಚಾರಿ, ಆ ಹಟ್ಟಿನ