ಪುಟ:ನೋವು.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೧೨೯

       ನೀಳವಾಗಿ ಉಸಿರೆಳೆದುಕೊಂಡು ನಾಗಮ್ಮ ಅಂದರು.
      " ಆ... ಅದು.. ಅಲ್ಲಣ್ಣ, ಸುಬ್ಬೀ ಮದುವೆ ಈ ವರ್ಸಾನೆ ಮಾಡಿದ್ರೆ ಚೆಂದಾ ಕಿರಲ್ಲವಾ ?”
      ಶಾಮೇಗೌಡರು ಒಂದು ಕ್ಷಣ ಏನನ್ನೂ ಹೇಳಲಿಲ್ಲ.
      ಮೌನವಾಗಿದ್ದವರು, ಛಾವಣಿ ನೋಡುತ್ತ ಅಂದರು :
     "ನಾನೂ ಅದೇ ಯೋಚ್ನೆ ಮಾಡೊಂಡು ಮಲಕ್ಕಂಡಿದ್ದೆ. ನಿಜ ನಾಗೂ. ಈ ವರ್ಸಾನೆ ಮಾಡಿದ್ರೆ ಚೆಂದಾಕಿರ್ತದೆ ನಾಳೆಯೋ ನಾಡಿದ್ದೆಯೋ ಓದಿ ಮಾತಾಡ್ಬರ್ತೀನಿ."
      ನಾಗಮ್ಮನವರ ಹೃದಯ ಹಗುರವಾಯಿತು.
                                ೧೭

     ಗೋವಿಂದ, ಪಟೇಲರು ಕೊಟ್ಟರಾಜೀಪತ್ರದೊಡನೆ ಗಜಾನನನ ಜತೆಯಲ್ಲಿ ತಂದೆಯನ್ನು ಕರೆದುಕೊಂಡು ನಗರಕ್ಕೆ ಹೋದ ಮಾರನೆಯ ದಿನ ಮಧಾಹ್ನ, ಶ್ರೀನಿವಾಸಯ್ಯನವರೊಬ್ಬರೇ ಕಣಿವೇಹಳ್ಳಿಗೆ ವಾಪಸಾದರು.
    ಜಗಲಿಯಲ್ಲಿ ಚಪ್ಪಲಿ ಕಳಚಿ, ಪಡಸಾಲೆಯ ಗೋಡೆಗೂಟಕ್ಕೆ ರುಮಾಲನ್ನು ಸಿಕ್ಕಿಸಿ, ಇನ್ನೊಂದು ಗೂಟಕ್ಕೆ ಕೋಟನ್ನು ತೂಗಹಾಕಿ, ಅಲ್ಲಿಯೇ ಇದ್ದ ಅಂಗವಸ್ತ್ರದಿಂದ ತಲೆ ಮುಖ ಕತ್ತು ಒರೆಸಿ, "ಅಮ್ಮಾ,"ಎಂದರು ಶ್ರೀನಿವಾಸಯ್ಯ.
    ಹೊರಗಿನ ಹೆಜ್ಜೆ ಸಪ್ಪಳ ಕೇಳಿಯೇ ಮಗ ಬಂದನೆಂದು ಊಹಿಸಿದ ದೊಡಮ್ಮ, ಒಳಮನೆಯಿ೦ದ ಹೊರಬಂದರು.
    ಭಾಗೀರಥಿಯ ಕಿವಿಗಳು ಅವರನ್ನು ಹಿಂಬಾಲಿಸಿದುವು.
    " ಗೋವಿಂದು ಬರಲಿಲ್ವೆ ?" ಎಂದು ದೊಡ್ಡಮ್ಮ ಮಗನನ್ನು ಕೇಳಿದರು.
    " ಇಲ್ಲ. ಒಂದು ಟ್ರಕ್ನಲ್ಲಿ ಸೀಟು ಮಾಡಿಸ್ಕೊಟ್ಟು ನನ್ನ ಕಳಿಸ್ದ. ಶಾಮಣ್ಣನದೊಂದು ಕೆಲಸ ಇದೆಯಲ್ಲ, ಅದನ್ನ ಮುಗಿಸ್ಕೊಂಡು ಸಾಯಂಕಾಲವೋ ನಾಳೆಯೋ ಬರ್ತಾನಂತೆ."
    " ರಾತ್ರೆ ಹೊತ್ನಲ್ಲಿ ಕಾಲುದಾರೀಲಿ ಒಬ್ಬನೇ ಬರೋದಕ್ಕಿಂತ ಅಲ್ಲಿಯೇ ತಂಗಿದ್ದು ಬೆಳಗ್ಗೆ ಬಾ– ಅಂತ ಹೇಳ್ಬೇಕಾಗಿತ್ತು."
    " ಹೌದು, ಮರೆತೆ.'
    " ಹೋದ ಕೆಲಸ ಏನಾಯ್ತು ?"
    " ಆಯ್ತಮ್ಮ."
    " ಜಾತಕಗಳನ್ನ ಯಾರಾದರೂ ನೋಡಿದರೆ?”
    " ಒಬ್ಬರಲ್ಲ, ಇಬ್ಬರು." 
    " ಏನಂದು ?"
    " ವಿಷ್ಟುಮನೂರ್ತಿಗಳ ದೊಡ್ಡ ಮಗಳು ಕಾಮಾಕ್ಷಿಗೂ ಗೋವಿಂದನಿಗೂ ಜೋಡಿ

ಆಗ್ಟಹುದಂತೆ." 9