ಪುಟ:ನೋವು.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ನೋವು

    "ಸರಿ. ಪದ್ಮನ್ದು  ?"
    " ಆ ಲಾಯರಿ ದೊಡ್ಡ ಮನುಷ್ಯ, ಮಿತಭಾಷಿ. ನಾವು ಹಳ್ಳಿಯವರು, ಈ ಸಂಬಂಧ ಹೇಗಾಗುತ್ತೊ ಅಂತ ನನಗೆ ಸಂಕೋಚವಾಯ್ತು."
    “ ಜಾತಕ?”
    " ಹೊಂದಾಣಿಕೆ ತೃಪ್ತಿಕರವಾಗಿದೇಂತ ಜ್ಯೋತಿಷ್ಕರು ಅಭಿಪಾಯಪಟ್ರು."
    "ಹುಡುಗಿ ಹ್ಯಾಗಿದಾಳೆ ?”
    " ಪಟ್ಟಣದಲ್ಲಿ ಹುಟ್ಟಿ ಬೆಳೆದೋಳು, ಲಕ್ಷಣವಾಗಿದಾಳೆ, ಏನೂ ಊನ ಇಲ್ಲ, ಹೆಸರು ಆರತೀ೦ತ.
    "ಅರಿಶಿನೆ?"
    "ಈಗಿನ ಕಾಲದ ಹೆಸರು. ನೀನು ಮಾತು ಕೊಟ್ಟು  ಬಂದ್ಯಾ?"
    " ಛೇ ! ಈಗಿನ ಕಾಲಕ್ಕೆ ತಕ್ಕ ಹಾಗೆ ಉತ್ತರ ಕೊಟ್ಟೆ : ಏನಿದ್ದರೂ ಹುಡುಗನ ತೀರ್ಮಾನವೇ ಕೊನೇದು ಅ೦ತ. ಹೌದು, ಹೌದು-ಅಂದ್ರು ಮೋಹನರಾಯರು."
    " ಪದ್ಮ ಒಪ್ಕೋತಾನೆ. ಅದು ದೊಡ್ಡ ವಿಷಯ ಅಲ್ಲ," ಎಂದರು ದೊಡ್ಡಮ್ಮ, ಕ್ಷಣ ಮೌನದ ಬಳಿಕ, "ಲಾಯರು ಶ್ರೀಮಂತನೆ ?” ಎಂದು ಕೇಳಿದರು.
    ತಕ್ಕಮಟ್ಟಿಗೆ ಅನುಕೂಲಸ್ಥರೇ, ವಿಷ್ಟುಮೂರ್ತಿ ಹೇಳಿದ ಪ್ರಕಾರ ಎರಡು ಮೂರು ಮನೆಗಳಿವೆ. ಯಾವುದೋ ಕಂಪನೀಲಿ ಷೇರುಗಳಿವೆ."
    "ಅ೦ದರೆ?"
    "ಅದು ಹೆಚ್ಚಿಗೆ ಇರೋ ದುಡ್ಡನ್ನ ಉದ್ಯಮಗಳಲ್ಲಿ ಹಾಕೋ ವಿಧಾನ.”
    "ಜಮಾನಿಲ್ಲೆ ?”
    "ಇಲ್ವಂತೆ. ವಿಷ‍್ನುಮೂತ್ತಿ ಏನೆಂದ್ರು ಗೊತ್ತೆ ? ಈಗಿನ ಕಾಲ್ದಲ್ಲಿ ಹೊಲದ ತಂಟೆಗೆ ದುಡ್ಡಿಧ‍್ದೋರು  ಬರೋದಿಲ್ಲ ಅಂತ."
    "ಅಲ್ಲ, ಅನುಕೂಲವಾಗಿರೋ ಮನುಷ್ಯ ನಮ್ಮ ಈ ಕೊಂಪೆಗೆ ತನ್ನ ಹುಡುಗೀನ ಕೊಡುತಾನೈ ?"
    " ನಮ್ಮದು ಹಳ್ಳಿಯಾದರೇನಾಯ್ತು ? ಪದ್ಮ ವಿದ್ಯಾವಂತ ಅಲ್ವೆ ? ಅಲ್ದೆಆರತಿ ಅವರ ಎರಡ್ನೇ ಮಗಳು. ಮೊದಲ್ನೇ ಅಳಿಯ ಸರಕಾರೀ ಉದ್ಯೋಗದಲ್ಲಿದ್ದಾನೆ. ಇನ್ನೂ ಇಬ್ಬರು ಹುಡುಗೀರಿದಾರೆ. ಐದನೇದು ಗಂಡು.. ಒಂದೇ.
ಇನ್ನೂ ಮೂರು ಜನ ಅಳಿಯಂದಿರು ಬೇಕಾಗಿರುವಾಗ, ದಿಲ್ಲಿಯೇ ಬೇಕು, ಹಳ್ಳಿ ಬೇಡ –ಅಂತ ಕೂತಿರೋಕಾ

ಗುತ್ಯೆ ?”

   " ನಿಜ, ಅನ್ನು."
   ತನ್ನ ಪೃಥಕ್ಕರಣ ತಾಯಿಗೆ ಸರಿಕಂಡಿತೆಂದು ಶ್ರೀನಿವಾಸಯ್ಯನವರಿಗೆ ಸಂತೋಷ ವಾಯಿತು.
   ಅವರೆಂದರು:
   "ನಿನ್ನೆ ರಾತ್ರೆ ಮೋಹನರಾಯರಲ್ಲೇ ಊಟಕ್ಕಿದ್ದೆ. ಅವರ ಹೆಂಡತೀದೇ ಅಡುಗೆ.”