ಪುಟ:ನೋವು.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೧೩೧

    " ಹೂಂ,” ಎಂದರು ದೊಡ್ಡಮ್ಮ. ಆದರೆ ಅವರು ತಮ್ಮದೇ ಯೋಚನೆಯ

ಜಾಡು ಹಿಡಿದು ಸಾಗಿದ್ದರು.

    ಅಡ್ಡಕ್ಕೆ ತಿರುಗಿ ಮತ್ತೆ ಸರಿದಾರಿಗೆ ಬಂದವರಂತೆ ಅವರೆಂದರು:            
    "ವಿಷ್ಣುಮೂರ್ತಿಯ ಮಗಳ್ನ ನೋಡಿದಿಯಾ ?”                                   
    " ನೋಡಿದೆನಪ್ಪ. ಗೋವಿಂದ ಅಲ್ಲಿ ಮನೆಯವರ ಥರಾನೇ ಓಡಾಡ್ತಾನೆ. ನನ್ನ ಎದುರಿಗೆ

ಆ ಹುಡುಗಿ ಅಷ್ಟಾಗಿ ಕಾಣಿಸ್ಕೊಳ್ಲಿಲ್ಲ. ಆದರೂ. ಗೋವಿಂದ ಈ ಮೊದಲೇ ಅವಳನ್ನ ಒಪ್ಪಿರಬೇಕು ಅನಿಸ್ತು."

    "ಕಲಿಕಾಲ. ಮೊನ್ನೆ ಗೋವಿಂದನೇ ಹೇಳ್ವಿಲ್ವೆ, ಮದುವೆ ಆದರೆ ಅದೇ ಹುಡುಗೀನ

ಅಂತ.”

    " ಏನೋ. ಗೌರವಸ್ಥನಾಗಿ ಗೋವಿಂದ ಬಾಳಿದರೆ ಸಾಕು. "
    " ವಿಷ್ಣುಮೂರ್ತಿಯ  ಹೋಟ್ಲು ವ್ಯವಹಾರವೆಲ್ಲ ಹ್ಯಾಗೆ ?"
    "ಕೈತುಂಬ ಸಂಪಾದ್ನೆ ಇದೆ. ಖರ್ಚೂ ಜೋರಾಗೇ ಇರ‍್ಭೇಕು.”
    " ಅವರ ಮನೆ ಬೇರೆ, ಹೋಟ್ಲು ಬೇರೆ-ತಾನೆ ?”
    “ ಹೌಹೌದು :  ವಿಷ್ಣುಮೂರ್ತಿಗಳ ಹೆಂಡತೀದೇ ರಾಜ್ಯಭಾರ ಮನೇಲಿ.”
    " ಮಕ್ಕಳ್ನ ಸೊಂಪಾಗಿ ಬೆಳೆಸಿದಾರೋ ಅಥವಾ—”
    " ಅಮ್ಮ, ಹಳ್ಳಿ ಹುಡುಗೀರ ಹಾಗೆ ಅವು ದುಡಿತವೆ ಅಂತ ನೀನು ತಿಳ್ಕೊಂಡಿದ್ರೆ—"       
    " ಇಲ್ಲವಪ್ಪ ! ಅಂಥ ಆಸೆ ಇಟ್ಟೊಂಡಿಲ್ಲ !'                                   
    " ಏನೇ ಇರಲಿ, ನೀರಿಗೆ ಇಳಿದಾಯ್ತಲ್ಲ."
    “ ದೈವೇಚ್ಛೆ ಇದ್ದ ಹಾಗೆ ಆಗುತ್ತೆ ಶೀನ...ನೀನು ಸ್ನಾನಕ್ಕೇಳು, ಅಡುಗೆ ಆಗ್ತಾ ಬಂತು."
    " ಹೂನಮ್ಮ," ಎಂದು ನುಡಿದು, ಶ್ರೀನಿವಾಸಯ್ಯ ಎದ್ದರು.                       
    " ಪದ್ಮ ಮನೇಲಿಲ್ವೆ ?" ಎಂದು ಕೇಳಿದರು. ಕಿರಿಯ ಮಗನ ಬಗೆಗೆ ಅವರು ಆತ್ಮೀಯ 
ವಾಗಿ ವಿಚಾರಿಸಿ ಎಷ್ಟೋ ದಿನಗಳಾಗಿದ್ದುವು.                                         
    " ಗೋಪೂ ಜತೆ ಹೊಲದ ಕಡೆಗೆ ಹೋದವನು ಇನ್ನೂ ಬಂದಿಲ್ಲ.”                           
    " ಹೊಲದ ಕಡೆಗೆ !? ಇದೇನು ಇಂಥಾ బుದ್ದಿ ?"                        
    " ಯಾಕೋ ಬೇಸರ; ಹೋಗ್ಬರ್ತೀನಿ–ಅಂದ."                                  
    " ಸರಿ, ಸರಿ !" ಎಂದು ನುಡಿದು, ಶ್ರೀನಿವಾಸಯ್ಯ ಸ್ನಾನದ ಮನೆಗೆ ನಡೆದರು. 
    ಸಾಧಾರಣವಾಗಿ ಇಂತಹ ಪ್ರವಾಸದಿಂದ ಬಳಲಬೇಕಾಗಿದ್ದ ಅವರು ಈ ದಿನ ಲವಲವಿಕೆ

ಯಿಂದಿದ್ದರು. ಸಂಸಾರಕ್ಕೆ ಸಂಬಂಧಿಸಿ ಮಾಡಲಾದ ಮಹತ್ವದ ನಿರ್ಧಾರಗಳು ಅವರಿಗೆ ಮನಶಾಂತಿಯನ್ನು ಒದಗಿಸಿದ್ದುವು.

    ತಂದೆ ಮನೆಯಲ್ಲಿಲ್ಲದ ದಿನ ಮನೆ ದೇವರಿಗೆ ಪೂಜೆ ಸಲ್ಲಿಸುವವನು ಗೋಪಾಲ. ಈ ದಿನ

ಆ ಕೆಲಸವನ್ನು ಬೆಳಗ್ಗೆ ಎದ್ದೋಡನೆಯೇ ಅವನು ಮಾಡಿ ಮುಗಿಸಿದ್ದ...

   ... ಮಾವ ಸ್ನಾನದ ಮನೆಗೆ ಹೋದೊಡನೆಯೇ ಭಾಗೀರಥಿ ಒಂದೆರಡು ಒಗ್ಗರಣೆ

ಗಳನ್ನು ಕೊಟ್ಟು ಬಡಿಸಲು ಅಣಿಯಾದಳು.

   ಕೆಲ ದಿನಗಳಿಂದ ಅವಳೊಳಗೆ ಭೋರ್ಗರೆಯುತ್ತಿದ್ದ ಬಿರುಗಾಳಿ ಈಗ ಶಾಂತವಾಗಿತ್ತು.