ಪುಟ:ನೋವು.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨ ನೋವು

      ಮನಸ್ಸು ಪ್ರಶಾಂತವಾಗಲು ಕಾರಣವಿಷ್ಟೆ: ಅಂತೂ ಮೈದುನರಿಗೆ ಮದುವೆ ಖಚಿತ 

ವಾಯಿತಲ್ಲ. ಇನ್ನೂ ಇಬ್ಬರು ಸೊಸೆಯರು ಈ ಮನೆಗೆ ಬಂದೇ ಬರುತ್ತಾರೆ. ಅವರನ್ನು ಒಳಕ್ಕೆ ಬಿಡಲು ತಾನು ಸಿದ್ದಳಾಗಲೇಬೇಕು.

      ಮುಂದೆ ಹಾಗೆ ಆದರೆ ಹೀಗೆ ಆದರೆ ಎಂದು ಚಿ೦ತಿಸುತ್ತ ಸೊರಗುವುದರ ಬದಲು,

ಆಪತ್ತುಗಳನ್ನು ಇದಿರಿಸಲು ಅಣಿಯಾಗುವುದಲ್ಲವೆ ಮೇಲು ?

     ತಾನು ಕನಸಿನಲ್ಲಿ ಕಂಡಂತೆಯೇ.ಹೋಟೆಲ್ ಮಾಲಿಕನ ಮಗಳು ಒಬ್ಬಳು; ಲಾಯರಿಯ

ಮಗಳು ಇನ್ನೊಬ್ಬಳು.

     ಆಕೆ ಕಂಡ ಆಕೃತಿಗಳು : ಧಡೂತಿ ಹುಡುಗಿ ಹಾಗೂ ದೊರೆಸಾನಿ. ಇದೂ ನಿಜವೇನೊ? 
     ನೋಡಬೇಕು. 
     ವಧು ಪರೀಕ್ಷೆ ಎಲ್ಲಿ ನಡೆಯುವುದೊ ? ದೊಡ್ಡಮ್ಮನಂತೂ ಅದಕ್ಕೋಸ್ಕರ ನಗರಕ್ಕೆ

ಹೋಗಲಾರರು. ಹೆಣ್ಣು ಹೆತ್ತವರೇ ಇಲ್ಲಿಗೆ ಕರೆದುಕೊಂಡು ಬರುವರೇನು ? ಯಾಕೆ ಬಂದಾರು? ಎರಡು ಮೈಲು ದೂರ ನಡೆಯಬೇಕು ಬೇರೆ. ಸ್ವತಃ ತನ್ನ ತಂದೆ ಕಣಿವೇ ಹಳ್ಳಿಗೆ ತನ್ನನ್ನು ಕರೆದುಕೊಂಡು ಬಂದಿರಲಿಲ್ಲ, ತೋರಿಸಲು. ಇವರು ಬರುತ್ತಾರೆಯೆ ?

    ನಿಶ್ಚಿತಾರ್ಥ ಯಾವತ್ತು ? ಏನು ? ದೊಡ್ಡಮ್ಮ ಕೇಳಲಿಲ್ಲ, ಮಾವ ಹೇಳಲಿಲ್ಲ.
    ಬಹುಶಃ ಊಟಕ್ಕೆ ಕುಳಿತಾಗ ಆ ಪ್ರಸ್ತಾಪ ಬರಬಹುದು.
    " ತಾತ, ತಾತ..."
    "ಸ್ನಾನ ಮುಗಿಸಿ ಬಂದ ಶ್ರೀನಿವಾಸಯ್ಯನವರ ಗಮನವನ್ನು ಶ್ರೀಪಾದ ಸೆಳೆದ.
    " ಬಂದೆ ಮರೀ," ಎನ್ನುತ್ತ ಶ್ರೀನಿವಾಸಯ್ಯ ದೇವರ ಮನೆಗೆ ನಡೆದರು.
    ದೇವರ ಸನ್ನಿಧಿಯಲ್ಲಿದ್ದ ಎರಡು ನಿಮಿಷಗಳ ಕಾಲ, 'ನಗರಕ್ಕೆ ಹೋದೆ. ಆದರೆ

ಶ್ರೀಪಾದನಿಗೋಸ್ಕರ ಏನೂ ತರಲಿಲ್ಲವೇ' ಎಂದು ಕೆಡುಕೆನಿಸಿತು. ಕೊನೇ ಘಳಿಗೆಯವರೆಗೂ ವಿಷ್ಣುಮೂರ್ತಿ ಜತೆಯಲ್ಲಿದ್ದರು ; ಮಾರ್ಕೆಟಿಗೆ ಹೋಗೋಣವೆ? ಏನಾದರೂ ಕಟ್ಟಿಸಲೆ? ಎಂದರು. ತಾನು ಏನೂ ಬೇಡವೆಂದೆ. ಶ್ರೀಪಾದನಿಗಾಗಿ ಒಂದು ಆಟದ ಸಾಮಾನು ತರ ಬಹುದಿತ್ತು. 'ಸರಿ. ಇನ್ನು ಹೇಗೂ ಬರೋದು ಹೋಗೋದು ಇದ್ದೇ ಇರುತ್ತಲ್ಲ'-ಎಂದರು ವಿಷ್ಣುಮೂರ್ತಿ. ತಾನು ನಕ್ಕುಬಿಟ್ಟಿದ್ದೆ...

   ಶ್ರೀನಿವಾಸಯ್ಯ ಅಂದುಕೊಂಡರು:
   "ಮನೆ ಬಿಟ್ಟು ಹೋಗುವ ಅಭ್ಯಾಸ ಇಲ್ಲದವರ ಗತಿಯೇ ಇಷ್ಟು."
   ಹೊರಗೆ ಬಂದ ಅವರು, " ಬಾ ಶ್ರೀಪಾದ, ಬಾ," ಎನ್ನುತ್ತ ಮೊಮ್ಮಗನನ್ನು ಎತ್ತಿ

ಕೊಂಡರು.

   ಮಾವ ಶ್ರೀಪಾದನನ್ನ ಎತ್ತಿ ಆಡಿಸಿದರೆಂದು ಭಾಗೀರಥಿಗೆ ಸಮಾಧಾನ.  ತನ್ನ

ಮಗನಿಗಾಗಿ ನಗರಕ್ಕೆ ,ಹೋದವರೆಲ್ಲ ಏನನ್ನಾದರೂ ತರುತ್ತಾರೆ-ಎಂದು ಅವಳೆಂದೂ ನಿರೀಕ್ಷಿಸಿದವಳಲ್ಲ. ಇದ್ದ ಒಂದೆರಡು ರಬ್ಬರ್ ಬೊಂಬೆಗಳನ್ನು ತಂದುಕೊಟ್ಟವನು ಪದ್ಮ. ಶ್ರೀಪಾದ ಒಂದನ್ನು ಹೊಸತಾಗಿ ಮೂಡಿದ್ದ ಹಲ್ಲುಗಳಿಂದ ಕಚ್ಚಿ ಹರಿದು ಬಿಟ್ಟಿದ್ದ. ತನಗಾಗಿ ಸೀರೆ ಗೀರೆ... ಅದೆಲ್ಲಾ ಮಾವ ತರುತ್ತಾರೆಯೆ ?

   ಅಂತಹ ಯಾವ ಯೋಚನೆಯನ್ನೂ ಮಾಡಲಿಲ್ಲ ಭಾಗೀರಥಿ. ಆದರೆ ಮಾವ, ತನ್ನ