ಪುಟ:ನೋವು.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                            ನೋವು                           ೧೩೩

ಮಗನನ್ನು ಎತ್ತಿಕೊಂಡರೆಂದು ಅವಳಿಗೆ ಸಂತೋಷವಾಯಿತು.

     ದೊಡ್ಡಮ್ಮ ಅಂದರು :  
     " ಬಾ ಶ್ರೀಪಾದೂ, ನಿನ್ನ ತಾತ ಊಟ ಮಾಡ್ಲಿ..." 
     " ಗೋಪಾಲು– ಪದ್ಮ ಬರಲಿ ಆಗದೆ?" ಎಂದರು ಶ್ರೀನಿವಾಸಯ್ಯ.
     " ಅವರು ಆಮೇಲೆ ಊಟ ಮಾಡ್ತಾರೆ. ನೀನು ಕೂತ್ಕೋ." 
     " ಹುo."
     ಶ್ರೀಪಾದ ದೊಡ್ಡಮ್ಮನ ಮಡಿಲಿಗೆ ಹೋದ.
     ಶ್ರೀನಿವಾಸಯ್ಯ ಎಲೆಯ ಮುಂದೆ ಕುಳಿತರು. [ಮನೆಯಲ್ಲಿ ತಟ್ಟೆಗಳಿದ್ದುವು. ಆದರೆ,

ಬೇಕು ಬೇಕೆಂದಾಗ ಎಲೆ ಕತ್ತರಿಸಲು ಬಾಳೆಯ ತೋಟವೇ ಇದ್ದಾಗ ತಟ್ಟೆಗಳನ್ನು ಯಾರು ಮುಟ್ಟುತ್ತಿದ್ದರು ?] ದೊಡ್ಡಮ್ಮ ಶ್ರೀಪಾದನೊಡನೆ ಮಗನ ಎದುರುಗಡೆ ಗೋಡೆಗೊರಗಿ ಕುಳಿತರು.

    ಭಾಗೀರಥಿ ಬಡಿಸಿದಳು.
    " ನಗರಕ್ಕೆ ಹೋದೆ. ನೋಡ್ಕೊಂಡು ಬಂದೆ. ನಿನಗೆ ತೃಪ್ತಿಯಾಯ್ತು ತಾನೆ?” 

ಎಂದರು ದೊಡ್ಡಮ್ಮ.

   " ತೃಪ್ತಿ ಅಂತಲೇ ಅನ್ನೋಣ. ಕಾಲ ಮೊದಲಿದ್ದ ಹಾಗೆ ಈಗ ಇಲ್ಲ. ಹಳ್ಳಿಯ

ಸಂಬಂಧವೇಬೇಕು ಅಂದರೆ ಆಗುತ್ಯೆ?"

   " ನಿಜ, ಅನ್ನು."
   " ಹುಡುಗೀರನ್ನ ನೀನು ನೋಡೋದು ಬೇಡ್ವೆ, ಅಮ್ಮ?"
   " ನಾನು ?  ನಾನು ನೋಡಿ ಆಗ್ವೇಕಾದ್ದೇನು?" 
   "ಹಾಗಲ್ಲ--”
   " ಏನೂ ಬೇಡ.    ಪದ್ಮನನ್ನ ನೀನು ಒಮ್ಮೆ ಮೋಹನರಾಯರಲ್ಲಿಗೆ ಕರಕೊಂಡು 

ಹೋಗು."

    ಉಣ್ಣುತ್ತ ಶ್ರೀನಿವಾಸಯ್ಯ ಅಂದರು : 
   " ಇನ್ನೆರಡು ತಿಂಗಳಾದ ಮೇಲೆ ಮುಹೂರ್ತಗಳಿವೆ. ಆದಷ್ಟು ಬೇಗನೆ ಮದುವೆ

ನಡೀಬೇಕೂಂತ ಅವರ ಅಭಿಪ್ರಾಯ."

   " ಆಗಲಿ. ಅದಕ್ಕೇನಂತೆ ? ತಯಾರಿಗೆ ಎರಡು ತಿಂಗಳು ಸಾಕು.” 
   " ಮದುವೆಗಳು ಒಟ್ಟಿಗೇ, ನಗರದಲ್ಲೇ, ಯಾವುದಾದರೂ ಒಳ್ಳೆಯ ಕಲ್ಯಾಣ

ಮಂಟಪದಲ್ಲಿ ಏರ್ಪಾಟು ಮಾಡ್ತಾರಂತೆ."

   " ಹುಂ."
   ತುತ್ತನ್ನು ಗಂಟಲೊಳಕ್ಕೆ ಇಳಿಸಿ, ಸಣ್ಣಗೆ ನಕ್ಕು, ಶ್ರೀನಿವಾಸಯ್ಯ ಅಂದರು :
   " ಒಂದೇ ದಿವಸದ ಮದುವೆ, ಸಾಂಗೋಪಾಂಗವಾಗಿ ನಡೆಸಿಬಿಡ್ತಾರೆ."
   " ನನಗೆ ಗೊತ್ತಿಲ್ವೆ !" ಎಂದರು ದೊಡ್ಡಮ್ಮ, ಒಣಗಿದ್ದ ತುಟಿಗಳ ಮೇಲೆ ಕಿರುನಗೆ 

ಯೊಂದನ್ನು ಮೂಡಿಸಿ.

  " ಮೋಹನರಾಯರು ಏನೆಂದರು ಗೊತ್ತೆ ಅಮ್ಮ ?”