ಪುಟ:ನೋವು.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೧೩೯

       ದೊಡ್ಡಮ್ಮನಿಗೆ ಅದು ಇಷ್ಟವಾಗಿರಲಿಲ್ಲ. 
       ಆದರೆ ಶ್ರಿನಿವಾಸಯ್ಯ ಅಂದಿದ್ದರು : 
       “ ಇರಲಿ, ಬಿಡಮ್ಮ ಈಗ ಎಲ್ಲಿ ನೋಡಿದರೂ ಕ್ರಾಪೇ.”
       “ ಕಾಲಕ್ಕೆ ತಕ್ಕಂತೆ ವೇಷ,” ಎಂದು ಹೇಳಿ ದೊಡ್ಡಮ್ಮ ಸುಮ್ಮನಾಗಿದ್ದರು.
       ಆ ಬೇಸಗೆಯಲ್ಲಿ ಗೋವಿಂದನೂ ಪದ್ಮನಾಭನೂ ಗೋಪಾಲನನ್ನು ಪೀಡಿಸಿ ಛೇಡಿಸಿ 

ಹಣ್ಣು ಮಾಡಿದ್ದರು, ಹೊಸಳ್ಳಿಯಿಂದ ಕ್ಷೌರಿಕ ಬಂದಾಗ.

       “ ನಿನಗೇನಾದರೂ ಕೊಡ್ತೀವಿ. ಗೋಪಾಲಣ್ಣನ ಜುಟ್ಟು ಕತ್ತರಿಸಿ ಬಿಡಪ್ಪ.”

ಎ೦ದಿದ್ದರು.

       ಗೋಪಾಲ ತನ್ನೆದುರು ಕುಳಿತು ತಲೆ ಬಗ್ಗಿಸಿದಾಗ ಕ್ಷೌರಿಕ, “ ಚಿಕ್ಕೋರ ಕ್ರಾಪು 

ಚೆಂದಾಗೈತೆ. ನಿಮ್ಮದನ್ನ ಅದಕ್ಕಿಂತ ವೈನಾಗಿ ಮಾಡ್ಬುಡ್ಲ ಬುದ್ಧಿ?” ಎಂದ.

       ತಲೆಯೆತ್ತದೆಯೇ ಗೋಪಾಲ, “ ಹೂಂ,” ಅಂದಿದ್ದ. 
       ಗೋವಿಂದನೂ ಪದ್ಮನಾಭನೂ ಮರೆಯಲ್ಲಿದ್ದರು. 
       ಕರಕ್ ಕರಕ್. ಗೋಪಾಲನ ಚಂಡಿಕೆ ಗತಪ್ರಾಣವಾಗಿ ಉರುಳಿ ಬಿತ್ತು.
       ಅವನ ತಮ್ಮಂದಿರು ಎದುರಿಗೆ ಬಂದು ಚಪ್ಪಾಳೆ ತಟ್ಟಿದರು.
       ಗೋಪಾಲ ಕ೦ಬನಿ ಸುರಿಸಿದ.
       ದೊಡ್ಡಮ್ಮ ಹೊರಕ್ಕೆ ಬಂದು, ಗೋಪಾಲನತ್ತ ನೋಡಿ ನಿಟ್ಟುಸಿರು ಬಿಟ್ಟು 

“ ಅಯ್ಯೋ ಪಾಪಿಗಳಾ !” ಎಂದು ಉದ್ಗರಿಸಿ, ಒಳಕ್ಕೆ ಹೋದರು.

       ಜುಟ್ಟು ಹೋಯಿತೆಂದು ನಾಗರಿಕನಾದನೆ ಗೋಪಾಲ ? ಕ್ರಾಪು ಬಿಟ್ಟವರೆಲ್ಲ 

ಸುಸಂಸ್ಕೃತರಾಗುವುದಾದರೆ ಲೋಕ ಹೀಗೆ ಯಾಕಿರುತ್ತಿತ್ತು ? ಹೊಲದಲ್ಲಿ ದುಡಿಯುವ ರೈತರಿಗೂ ಇವನಿಗೂ ಏನು ವ್ಯತ್ಯಾಸ ಅಂತ ? ಓದು ಬರಹ ಬಲ್ಲ. ಆದರೆ ಒಂದು ಪುಸ್ತಕ ವನ್ನಾದರೂ ಓದೋಣವೆಂದು ಎತ್ತಿಕೊಂಡುದುಂಟೆ ಈತ ?

        ಪದ್ಮನಾಭನಿಗೆ ಆಶ್ಚರ್ಯವಾಯಿತು : 
        ‘ ಗೋಪಾಲನಿಗೂ ನನಗೂ ಯಾವ ಸಾಮ್ಯವೂ ಇಲ್ಲ : ಗೋವಿಂದನೆ ವಿಷಯದಲ್ಲೂ 

ಅಷ್ಟೆ. ಅವನೊಂದು ರೀತಿ, ನಾನೊಂದು ರೀತಿ. ಇಷ್ಟೊಂದು ವ್ಯತ್ಯಾಸ ಇರುತ್ತದಲ್ಲ ಒಡಹುಟ್ಟಿದವರಲ್ಲಿ !’

        ಕಣಿವೇಹಳ್ಳಿಯಲ್ಲಿ ಹೈಸ್ಕೂಲು ! ಆ ಹೈಸ್ಕೂಲಿಗೆ ತಾನು ಹೆಡ್ಮೇಸ್ಟ್ರು! 
        ಎಂಥೆಂಥ ಯೋಚನೆ ತಂದೆಯದು, ದೊಡ್ಡಮ್ಮನದು. 
        ಈಗ ಮನೆ ಬಿಡುತ್ತಿದ್ದೇನೆ, ಒಂದು ವರ್ಷದ ವ್ಯಾಸ೦ಗಕ್ಕೆ ಅಂತ. ಆ ಮೋಹನರಾಯರು 

ಯಾರೊ ? ಮತ್ತೆರಡು ವರ್ಷ ಓದಿ ವಕೀಲಿ ಪರೀಕ್ಷೆಗೂ ಯಾಕೆ ನಾನು ಕಟ್ಟಬಾರದು ? ಆಗಾಗ್ಗೆ ಈ ಹಳ್ಳಿಗೆ ಬರುತ್ತ ಹೋಗುತ್ತ ಇದ್ದರಾಯಿತು. ಇಲ್ಲಿಯ ಕೇಸುಗಳೆಲ್ಲಾ ಸಿಕ್ಕಿಯೇ ಸಿಗುತ್ತವೆ...

         ತಂದೆ ನೋಡಿ ಬಂದಿರುವ ಆ ಹುಡುಗಿ ಹೇಗಿರುವಳೊ ? ಪ್ರಮದೆಯ ಹಾಗೆ ? 

ಸುಬ್ಬಿಯ ಹಾಗೆ ?

         ಕಿಟಿಕಿಗೆ ಮರದ ಕಂಬಿಗಳನ್ನು ಹಾಕಿದ್ದರು. ಎರಡು ಕಂಬಿಗಳನ್ನು ಅಂಗೈಗಳಲ್ಲಿ ಹಿಡಿದು