ಪುಟ:ನೋವು.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ನೋವು

ಪದ್ಮ ಅಮುಕಿದ.

      ಅವನ   ಸಹಪಾಠಿಗಳಲ್ಲಿ ಕೆಲವರಿದ್ದರು -ಪ್ರಪಂಚ ಸುಖವನ್ನು ಆಗಲೇ ಕಂಡವರು. ಪದ್ಮ   ಅವರನ್ನು  ಸ್ಮರಿಸಿಕೊಂಡ. 
         ಅ‍ವರಲ್ಲೊಬ್ಬ  (ಚಂದು)  ಹೇಳಿದ್ದನಲ್ಲ ?
          "ನೀನೊಬ್ಬ ಗುಗ್ಗು ಕಣೋ.  ಯಾವ ಹುಡುಗೀನೂ ತಾನಾಗಿ ಬಂದು ಕತ್ತಿಗೆ ಆತ್ಕೊಳ್ಳೋಲ್ಲ.  ಮೊದಲು ನೀನು ಕತ್ತು  ಚಾಚಬೇಕು.        Aggressive ಆಗಿ ಎರಡು 

ಹೆಜ್ಜೆ ಮುಂದಿಡಬೇಕು."

        ಪ್ರಮದೆ ಕೈಗೆಟಕಿರಲಿಲ್ಲ.  ಸುಬ್ಬಿ ಅವನಿಗೆ ಸಿಗುತ್ತಿದ್ದಳು. ಆದರೆ ಏನೋ ಆಗಿ
ಹೋಯಿತು.
        ಒಳ್ಳೆಯದಕ್ಕೇ ಆಯಿತು ಎನ್ನಬಹುದಲ್ಲ ? ಮನುಷ್ಯರನ್ನು ಅರ್ಥ ಮಾಡಿಕೊಳ್ಳಲಾರದ ಈ ಹಳ್ಳೀಮುಕ್ಕರ ಮಧ್ಯೆ ಸ್ವಚ್ಛಂದವಾಗಿ ಓಡಾಡುವುದು ಆಗದ ಮಾತು. ಆ ರ೦ಗಣ್ಣ.  ಅವನೊಬ್ಬ ಕಾಡು  ಪ್ರಾಣಿ, ಡಾಕ್ಟರಾಗ್ತಾನಂತೆ, ಡಾಕ್ಟ್ರು.
      ನಗರದಲ್ಲಿ ಹಾಗಲ್ಲ.  ಅಲ್ಲಿ ಇದ್ದಷ್ಟು ದಿವಸ ಸುಖವಾಗಿರಬಹುದು. ಇವಳು ಹೇಗೂ
ಓದಿದ ಹುಡುಗಿ, ರಸಿಕತೆಯ ಪಾಠವನ್ನು ಹೊಸದಾಗಿ ಹೇಳಿಕೊಡುವ ಅಗತ್ಯ ಇರಲಾರದು. ಎ೦ದಿಟ್ಟುಕೊಳ್ಳೋಣ. ಕಣಿವೆಹಳ್ಳಿಯಲ್ಲಿ ವಕೀಲನ ಹೆ೦ಡತಿಯಾಗಿ ಈ ಮನೆಯಲ್ಲಿರಲು ಅವಳು ಒಪ್ಪುತ್ತಾಳೆಯೆ? ಒಪ್ಪಿದರೆ ಇಲ್ಲೇ ಇರಲಿ. ನನ್ನ ಕೋರ್ಟು  ಕಚೇರಿಗಳಿರುವುದು ನಗರದಲ್ಲಿ. ಇಲ್ಲಿಗೆ ಬ೦ದು ಹೋಗಿ ಮಾಡುತ್ತಿದ್ದರಾಯಿತು.
       ...ಗೋಪಾಲ ಬರಿಯ ಚುಕ್ಕೆಯಾಗಿ ಆಗಲೇ ಹಲವು ನಿಮಿಷಗಳಾಗಿದ್ದುವು.
       ಪದ್ಮನಾಭ, ನೆಲದ ಮೇಲೆ ತಾನು ಹರಡಿದ್ದ ಸಾಮಾನುಗಳತ್ತ ಮತ್ತೆ ಹೊರಳಿದ.
       .. ಶ್ರೀನಿವಾಸಯ್ಯ ಎದ್ದರು. ಕಣ್ಣುಗಳು ಉರಿಯುತ್ತಿದ್ದುವು. ರಾತ್ರಿಯ ನಿದ್ದೆ
ಸಾಲದು–ಎಂದುಕೊಂಡರು. ಹೊಸ ಜಾಗದಲ್ಲಿ ಅವರು ಮಲಗಬೇಕಾದ ಪ್ರಸಂಗ ಬಂದಾಗಲೆಲ್ಲ ಹೀಗೆಯೇ, ನಿದ್ದೆ ಹತ್ತುತ್ತಿರಲಿಲ್ಲ, ಎರಡು ಸಲ ಆಕಳಿಸಿದರು. ಕ್ರಮೇಣ ಕಣ್ಣುಗಳ ಉರಿ ಕಡಮೆಯಾಯಿತು. ಎದ್ದು ನಡುವಿನ ನೆಟಿಕೆ ಮುರಿದು, ತಾಯಿಯನ್ನು ಹುಡುಕಿಕೊಂಡು ಒಳಗೆ ಹೋದರು.
         ಮಗ ಹತ್ತಿರ ಬಂದೊಡನೆ, ಮೊಮ್ಮಗನ ಕೋರಿಕೆಯನ್ನು ಈಡೇರಿಸಿದರು ದೊಡ್ಡಮ್ಮ,                
ಶ್ರೀನಿವಾಸಯ್ಯ ಅಂದರು : 
" ಕನ್ಯೆ ನೋಡೊಲ್ವಂತೊ ? ಮೋಹನರಾಯರಿಗೆ, ಪದ್ಮನನ್ನ ಕರಕೊಂಡ್ಬರ‍್ತೀನಿ ಅಂತ
ಹೇಳಿದೀನಲ್ಲ ನಾನು."

" ನೋಡ್ತಾನೆ, ಶೀನ. ಅಲ್ಲೇ ಇರ‍್ತಾನಲ್ಲ. ನೀನು ಹೋಗಿ,ಬಾ ಅ೦ತ ಕರೆದರಾಯ್ತು."

ಎಂದರು, ದೊಡ್ಡಮ್ಮ.
      ಪದ್ಮ ಸ್ವಲ್ಪ ಜಾಸ್ತಿ ದುಡ್ಡು ಕೇಳಿದಾನೆ ಎಂದು ತಾಯಿ ತಿಳಿಸಿದಾಗ ಶ್ರೀನಿವಾಸಯ್ಯ,"ವಿಷ್ಣುಮೂರ್ತಿ ಸೂಚ್ಯವಾಗಿ ನಿನ್ನೆ ಅಂದು – ನಗರದಲ್ಲಿ ಒಂದಿಷ್ಟು ಆಸ್ತಿ ಮಾಡ್ಕೊಳ್ಳಿ,  ಅಂತ. ನಮಗಾ ಕಪ್ಪ? ಅಂದೆ. ಮಕ್ಕಳು ಮೊಮ್ಮಕ್ಕಳಿಗಾಗುತ್ತೆ;  ಸಿಕ್ದಾಗ ಮೂರು ನಾಲ್ಕು ಸೈಟು ಖರೀದಿ ಮಾಡ್ಬಿಡ್ಬೇಕು- ಅಂದ್ರು. ಇಲ್ಲೇ ಬ್ಯಾಂಕ್ನಲ್ಲಿ ಒಂದು ಲೆಕ್ಕ ಇಡೀಂತಲೂ