ಪುಟ:ನೋವು.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨ ನೋವು

      ಕೊಠಡಿಯಲ್ಲಿ ಮೌನ.
      ಇವರು ಪುನಃ ಮಾತು ಆರಂಭಿಸಬೇಕು ಎನ್ನುವಷ್ಟರಲ್ಲೆ ಅಲ್ಲಿಂದ ಮತ್ತೆ ಧ್ವನಿ :
      " ನನ್ನ ಎಳೆದ್ಹಾಕ್ತೀರಿ ಅಲ್ವೆ? ಟಿಸ್ ಪಿಸ‍್ ಮಾತಾಡ್ಬಿಟ್ರೆ  ಹೆದರ್ತೀನಿ ಅಂದ್ಕೊಂಡ್ರಾ ?"
       ಶ್ರಿನಿವಾಸಯ್ಯಾ ಗಾಬರಿಯಾಗಿ ತಾಯಿಯನ್ನು ಕರೆದಿದ್ದರು :
      " ಅಮ್ಮಾ, ಇಲ್ಬಾ !"
       ಕರೆಯುವ ಅಗತ್ಯವೂ ಇರಲಿಲ್ಲ. ಭಾಗೀರಥಿಯ ಮಾತು ದೊಡ್ಡಮ್ಮನಿಗೆ ಕೇಳಿಸಿತ್ತು.

ಅವರು ತಕ್ಷಣವೇ ಅತ್ತ ಬಂದರು.

      " ಏನೇ ಅದು ಭಾಗೀ? ಏನಾಯ್ತಮ್ಮಾ ?"
   ಬಾಗಿಲಿನ ಚೌಕಟ್ಟಿನಲ್ಲಿ ನಿಂತಿದ್ದ ದೊಡ್ಡಮ್ಮನನ್ನು ಬದಿಗೆ ತಳ್ಳಿ ಭಾಗೀರಥಿ ಪಡಸಾಲೆಗೆ ಧಾವಿಸಿ ಬಂದಿದ್ದಳು, " ಹೊರಡಿ ! ಹೊರಡಿ ಇಲ್ಲಿಂದ !" ಎಂದು ಚೀರುತ್ತ.
    ಕುಳಿತಿದ್ದ ಗಂಡಸರು ಥಟ್ಟನೆ ಎದ್ದು ನಿಂತರು.
    ಭಾಗೀರಥಿ ಕೂಗಾಡುತ್ತ ಕುಸಿದು ಬಿದ್ದಳು. 
    ಅತಿಥಿಗಳು, ಶ್ರಿನಿವಾಸಯ್ಯನವರನ್ನು ಅಲ್ಲಿಯೇ ಬಿಟ್ಟು ಜಗಲಿಯತ್ತ ಸರಿದರು.
ಶ್ರಿಪಾದನನ್ನು ಗೋವಿಂದ ಕರೆದೊಯ್ದ. ದೊಡ್ಡಮ್ಮನ ಸೂಚನೆಯಂತೆ ಬೀರ ಹೋಟೆಲಿಗೆ ಓಡಿದ, ' ಚಿಕ್ಬುದ್ದಿಯೋರನ್ನು' ಕರೆದು ತರಲು.
      ಜಗಲಿಯಲ್ಲಿ ವಿಷ್ಣುಮೂತಿ೯ ಅಂದರು :
      "ఇದೊಳ್ಳೇ ಗ್ರಹಚಾರವಾಯ್ತಲ್ಲ."
      ಮೋಹನರಾಯರೆಂದರು :
      " ಹಿಸ್ಟೀರಿಯಾ."
      " ದೊಡ್ಡದಲ್ಲ ಅಂತೀರಾ ?"
      " ಹಿಸ್ಟೀರಿಯಾ ವಿಷ್ಣುಮೂತಿ೯ಗಳೇ, ಸೋಂಕು ಜಾಡ್ಯ ಅಲ್ಲ."
      " ನಮ್ಮ ಮಕ್ಕಳಿಗೆ-”
      " ಸೋಂಕು ಜಾಡ್ಯವಲ್ಲ ಅಂದೆ."
      " ಹಾಗಾದರೆ ಪರವಾಗಿಲ್ಲ ಅನ್ನಿ."
      " ಗೊತ್ತಾಯ್ತು.   ಮನೆಯಳಿಯ ಮಾಡ್ಕೊಳ್ಳೋಣ ಅಂತ ನಿಮ್ಮ ಯೋಚ್ನೆ. 

ನಗರದಲ್ಲಿ ಅವನೂ ವಕೀಲನಾಗ್ತಾನೆ. ನನ್ನ ಮಗೂನ ಮಾತ್ರ-"

      " ಇಂಥಾದ್ದಕ್ಕೆಲ್ಲ ಯಾರಾದರೂ ಹೆದರ್ತಾರೆಯೆ ವಿಷ್ಣುಮೂರ್ತಿಗಳೇ ?"
      "ಸరి, ಬಿಡಿ."]
     అತಿಥಿಗಳು ಮತ್ತೊಮ್ಮೆ ರತ್ನಗಂಬಳಿಯ ಮೇಲೆ ಆಸೀನರಾದರು.
     ಶ್ರಿನಿವಾಸಯ್ಯ ಅಂಗಳಕ್ಕಿಳಿದು, ಮೂಲೆಯಲ್ಲಿ ಕುಳಿತಿದ್ದ ಬೀರನನ್ನು ನೋಡಿದರೂ ಮಾತನಾಡಿಸದೆ, ತಾವೊಬ್ಬರೇ ಅತ್ತ ಇತ್ತ ನಡೆದರು.
     ಗಿಡಗಳಿಂದ ತಾವು ಆಯ್ದ ಎಲೆಗಳೊಡನೆ ದೊಡ್ಡಮ್ಮ ಒಳಕ್ಕೆ ಬಂದರು. ನೇರವಾಗಿ ದೇವರ ಮನೆಗೆ ಹೋಗಿ ಅಲ್ಲಿ ಆ ಎಲೆಗಳನ್ನು ತೇದು ರಸ ಹಿಂಡಿದರು. ಅದಕ್ಕಿಷ್ಟು ನೀರು