ಪುಟ:ನೋವು.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೧೭೩

ಬೆರೆಸಿದರು. ದೇವರಿಗೆ ಕೈ ಜೋಡಿಸಿ ತಮ್ಮ ಮೂಕ ಪ್ರಾರ್ಥನೆಯನ್ನು ಸಲ್ಲಿಸಿದರು. ನಿಟ್ಟುಸಿರು ಬಿಟ್ಟು ಲೋಟದೊಡನೆ ಹೊರಬಂದ, " ಶೀನ, ಗೋಪೂ, బన్ని. ಇದನ್ನು ಕುಡಿಸೋಣ," ಎ೦ದರು.

     ಶ್ರಿನಿವಾಸಯ್ಯ ಒಳಕ್ಕೆ ಬಂದರು. ಭಾಗೀರಥಿಯ ಪ್ರತಿಭಟನೆಯನ್ನು ಮುರಿದು ರಸವನ್ನು ಅವಳಿಗೆ ಕುಡಿಸಿದುದೂ ಆಯಿತು.  
     ಸ್ವಲ್ಪ ಹೊತ್ತಾದ ಮೇಲೆ ಭಾಗೀರಥಿ ಒಂದೆಡೆಗೆ ವಾಲಿದಳು. 
     ದೊಡ್ಡಮ್ಮನೂ ಗೋಪಾಲನೂ ಹಾಸಿಗೆ ಬಿಡಿಸಿ, ಭಾಗೀರಥಿಯನ್ನು ಅದರ ಮೇಲೆ ಮಲಗಿಸಿದರು...
    ...ಮತ್ತೂ ಸ್ವಲ್ಪ ಹೊತ್ತಾದ ಮೇಲೆ ಕಂಬನಿದುಂಬಿದ ಕಣ್ಣುಗಳಿಂದ ಅತಿಥಿಗಳನ್ನು ನೋಡಿ, "ನಿಮಗೆ ತೊಂದರೆಯಾಯ್ತು, ಕ್ಷಮಿಸ್ಬೇಕು. ಏಳಿ, ಊಟಕ್ಕೇಳಿ," ಎಂದರು. ಶ್ರಿನಿವಾಸಯ್ಯ.
     "ಈಗೇನೂ ಹಸಿವಿಲ್ಲವಲ್ಲ," ಎಂದು ರಾಗವೆಳೆದರು ಮೋಹನರಾಯರು. 
     ಶ್ರಿನಿವಾಸಯ್ಯ ಅಂದರು : 
     " ಛೆ !ಇದೇನೂ ಸಾವಿನ ಮನೆ ಅಲ್ಲವಲ್ಲ! ಏಳಿ, ಸ್ವಲ್ಪ ಉಣ್ಣುವಿರಂತೆ, ಏಳಿ !"
                               
                                 ೨೩
      ದೊಡ್ಡಮ್ಮನೆ ಔಷಧಿ ಸೇವಿಸಿ ನಿದ್ದೆ ಹೋದ ಭಾಗೀರಥಿಗೆ ಮಾರನೆಯ ದಿನೆ ತಡವಾಗಿ ಎಚ್ಚರವಾಯಿತಾದರೂ, ಮೊದಲಿನಂತೆ ಓಡಾಡಲು ಕೆಲ ದಿನಗಳೇ ಹಿಡಿದುವು. ಮೊದಲಿನಂತೆ ಎನ್ನುವುದೂ ಸರಿಯಲ್ಲ. ಮನೆಗೆಲಸದಲ್ಲಿ ಆಕೆ ಆಸಕ್ತಿ ವಹಿಸಿದಳು; ನಿತ್ಯದ ಅಕ್ಕರೆಯಿಂದ ಮಗುವನ್ನು ಕಂಡಳು. ಆದರೂ ದಿನದ ನಡುನಡುವೆ ಒಂದು ಬಗೆಯ ಮಂಕು ಆಕೆಯನ್ನು ಕವಿದಿರುತ್ತಿತ್ತು.
     ದೊಡ್ಡಮ್ಮ ಕೇಳುತ್ತಿದ್ದರು:
     "ಭಾಗೀ, ಸ್ನಾನ ಮಾಡಿದಿಯಾ ?"
    ಬೆಚ್ಚಿಬಿದ್ದವಳಂತೆ ಭಾಗೀರೆಥಿ ದೊಡ್ಡಮ್ಮನತ್ತ ನೋಡಿ, " ಹ್ಙ ?" ಎನ್ನುತ್ತಿದ್ದಳು.
     " ಸ್ನಾನ ಮಾಡಿದೆಯಾಂದೆ?"
     " ಇನ್ನೂ ಇಲ್ಲ, ದೊಡ್ಡಮ್ಮ.
     " ಮಾಡು ಹಾಗಾದರೆ."
     "ಮಾಡ್ತೀನಿ."
    ನಿಶ್ಚಿತಾರ್ಥದ ದಿನ ನಡೆದ ಘಟನೆಯನ್ನು ಒಮ್ಮೆಯೂ ದೊಡ್ಡಮ್ಮ ಭಾಗೀರಥಿ ಯೊಡನೆ ಪ್ರಸ್ತಾಪಿಸಲಿಲ್ಲ.
    ಗೋಪಾಲ ಮನಸ್ಸಿನ ದುಗುಡವನ್ನು ದುಡಿಮೆಯ ಮೆದುಮಣ್ಣಿನಲ್ಲಿ ಹೂತುಬಿಟ್ಟ. ಬಿತ್ತನೆಯ ಕಾರ್ಯಕ್ರಮದಲ್ಲಿ ವ್ಯತ್ಯಯವಾಗತೊಡಗಿತು.ಆಳುಗಳನ್ನು ಎರವಲು ತರುವುದು