ಪುಟ:ನೋವು.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ನಿಂತಿದ್ದ ತನ್ನನ್ನು ಉದ್ದೇಶಿಸಿ.

         ತಾನು ನಾಚಿಕೊಂಡು ತಾಯಿಯ ಸೆರಗಿನ ಹಿಂದೆ ಅವಿತಿದ್ದೆ. ಸಂಜೆಯ ಹೊತ್ತು, ಛಾವಣಿಗೆ_ಹೆಂಚು ಹಾಕುತ್ತಿದ್ದುದರಿಂದ ಮನೆಯೊಳಗೆಲ್ಲಾ ಅವ್ಯವಸ್ಥೆ. ಅಂಗಳದಲ್ಲಿ ತನ್ನ ತಾಯಿ ಪದ್ಮನ ತಾಯಿಗಾಗಿ ಚಾಪೆ ಹಾಸಿದ್ದರು.
         "ಆಲು ಕೊಡ್ಲೇ ?” ಎಂದಿದ್ದರು ತನ್ನ ತಾಯಿ.
        ಪದ್ಮನನ್ನು ನೆಲದ ಮೇಲೆ ಇಳಿಬಿಟ್ಟು ಅವರ ತಾಯಿ ಅಂದಿದ್ದರು :
         " ಏನೂ ಬ್ಯಾಡಿ ; ನನಗೇನೂ ಬ್ಯಾಡಿ, ಸೀತಮ್ಮ."
          ಅವರನ್ನು ಅವರ ಪಾಡಿಗೆ ಬಿಟು ತಾನೂ ಪದ್ಮನೂ  ಮನೆಯ ಹಿಂದೆ ಅಲೆಯಲು ಹೋಗಿದ್ದೆವು. ಪದ್ಮನ ತಾಯಿಗೂ ತನ್ನ ತಾಯಿಗೂ ಮಕ್ಕಳ ನೆನಪಾದುದು ಪದ್ಮನೆ ತಾಯಿ ಹೊರಡಲೆಂದು ಎದ್ದಾಗ. ಅವರಿಬ್ಬರೂ ತಮ್ಮನ್ನು ಹುಡುಕಿದ್ದೇ ಹುಡುಕ್ಕಿದು.
          ತಾವು ಸಿಕ್ಕಾಗ, " ಈ ಹುಡುಗರನ್ನ ನೋಡ್ಕೊಳ್ಳೋದು ಕಷ್ಟವಪ್ಪಾ ಕಷ್ಟ,"
ಎಂದಿದ್ದರು ಪದ್ಮನ ತಾಯಿ.
         ರಂಗಣ್ಣನೆಂದುಕೊಂಡ :
         ಅವರು ಬೇರೆ, ನಾವು ಬೇರೆ. ಒಂದಾಗಬೇಕು ಎಂದರೂ ಅದು ಹೇಗೆ ಸಾಧ್ಯ?
         ಕತ್ತಲು ಕವಿಯತೊಡಗಿದಂತೆ ರಂಗಣ್ಣ ಎದ್ದು ಮನೆಗೆ ನಡೆದ. 
         ಚಪ್ಪಲಿ ಕಳಚಿಟ್ಟು ಬಂದು ಅಂಗಳದ ಮೂಲೆಯಲ್ಲಿ ಕೈಕಾಲು ತೊಳೆದು ಪಡಸಾಲೆ ಯನ್ನು ಪ್ರವೇಶಿಸಿದ. ಅಲ್ಲಿ ದೀಪ ಉರಿಯುತ್ತಿತು. ಗೋಡೆಯಲ್ಲಿ ಚಿತ್ತಾರ. ದೇವರ ಪಠಗಳು ಕಡಮೆ. ಬಾಗಿಲ ಮೇಲ್ಗಡೆ ದೊಡ್ಡದಾದೊಂದು ಬಣ್ಣ ಬಳೆದ ಭಾವಚಿತ್ರ. ರಂಗಣ್ಣನ ತಾತನದು. ಓಬೀರಾಯನ ಕಾಲದಲ್ಲಿ ಭಾಗ್ಯನಗರದಲ್ಲಿ ತೆಗೆದ ಒಂದು ಚಿತ್ರದ ನೆರವಿನಿಂದ ಆದನ್ನು ಮಾಡಿಸಿತು. 
         ಶ್ಯಾಮೇಗೌಡರ ತಂದೆ ದಾವೇಗೌಡರು.....
         ತಮ್ಮ ಮನೆತನದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರು......
          .....ಎಲ್ಲಿಯೂ ಸುಭದ್ರೆಯ ಸುಳಿವಿರಲಿಲ್ಲ. 
           ರಂಗಣ್ಣ ಒಳಗೆ ಹಣಿಕಿ ನೋಡಿ ಕೇಳಿದ: 
         " ಅತ್ತೆಮ್ಮ,  ಸುಬ್ಬಿ  ಎಲ್ಲಿ? "
         "ತಲೆನೋವಂತೆ ಕಣಪ್ಪಾ, ಮಲಕ್ಕೊಂಡವಳೆ, ಒಸಿ ನೋಡು. ಬ್ಯಾಡ ಅಂದ್ರೂ  బిಸಿಲ್ನಾಗೆ          ಅಲೀತೀರಿ........"
          ಒಳಗಿನ ಕೊಠಡಿಗೆ ರಂಗಣ್ಣ ಹೋದ, ಕತ್ತಲಲ್ಲಿ ನೆಲದ ಮೇಲೆ ಹಾಸಿಗೆ ಹಾಸಿ ಸುಭದ್ರಾ ಮಲಗಿದ್ದಳು.
           ರಂಗಣ್ಣ ನಿಂತುಕೊಂಡೇ ಕೇಳಿದ: 
            "ಸುಬ್ಬೀ, ಮುನಿಯ ಸತ್ತ. ನಿನಗೆ ಗೊತ್ತಿಲ್ಲ ತಾನೆ?”
            ಉತ್ತರ బరిలిల్ల.
            ರಂಗಣ್ಣ ಮುಂದುವರಿದ : 
           " ಹೋಗಲಿ. ಅವನು ಯಾಕೆ ಸತ್ತ ಅನ್ನೋದಾದ್ರೂ ಗೊತ್ತೊ ?"
           2