ಪುಟ:ನೋವು.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ಸೇರಿಕೊಂಡರು. ಅವರೆಲ್ಲರ ದೃಷ್ಟಿ ರಸ್ತೆಯುದ್ದಕ್ಕೂ ರೋದಿಸುತ್ತ ಓಡಿ ಬರುತ್ತಿದ್ದ ನಿಂಗಿಯ ಮೇಲೆ ನೆಟ್ಟಿತು. ಮೈ ಮುಚ್ಚಿದ್ದ ಮಾಸಲು ಚಿಂದಿ ಸೀರೆ, ಕೆದರಿದ ತಲೆಗೂದಲು. ಬೇಟೆಗಾರರ ಬಲೆಯೊಳಗೆ ಬಿದ್ದ ಕಾಡು ಮಿಕದಂತೆ ಅವಳು ತತ್ತರಿಸುತ್ತಿದ್ದಳು.

              ಜನರಿಂದ ದೂರ ನಿಂತು ಕುಕ್ಕರ ಕುಳಿತು ಮೊಣಕಾಲುಗಳಿಗೆ ಹಣೆ ಜಪ್ಪಿಕೊಳ್ಳುತ್ತ,

ಮುಷ್ಟಿಗಳಿಂದ ಎದೆ ಬಡಿದುಕೊಳ್ಳುತ್ತ, ತಲೆಗೂದಲನ್ನು ಕಿತ್ತು ಕಿತ್ತು ಎಳೆಯುತ್ತ ಅವಳು ಕಿವಿಯೊಡೆಯುವ೦ತೆ ಆತ್ತಳು.

             "ದಣಿಗಳೇ, ಅಪ್ಪಗಳೇ, ಅಯ್ಯನವರೇ, ನನ್ನ ಇರಿಯನ್ನ ಉಳಿಸ್ಕೊಡಿ! ಅವನು 

ಸತ್ರಾಕಿಲ್ಲ ! ಕಂಡಿತ ಸತ್ರಾಕಿಲ್ಲ!"

              ಆ ಆಕ್ರಂದನದೆದುರು, ದಿಬ್ಬಕ್ಕೆ ನಾಳೆ ಹೋದರಾಗದೆ ಎಂದು ಯೋಚಿಸಿದ ಕೆಲವರು ಮನಸ್ಸು ಬದಲಾಯಿಸಿದರು.
              ಮುನಿಯನ ಜನರೇ ಆದ ಮಾದ, ಈರ, ಬಸಯ್ಯ ಓಡಿಬಂದರು. ಲಾಟೀನು ಟಾರ್ಚು

ಗಳೂ ಬಡಿಗೆ ದೊಣ್ಣೆಗಳೂ ಸಿದ್ದವಾದವು.

              ಶ್ರೀನಿವಾಸಯ್ಯ ಅಂದರು :
              " ನೀನು ಹಟ್ಟಿಗ್ಹೋಗು.  ನಮ್ಜತೆ ಬರಬೇಡ.” 
               నింగి ರೊದಿಸಿದಳು :
               ಅಂಗನ್ವ್ಯಾಡಿ ಅಯ್ಯನರೇ ! ಅಂಗನ್ವ್ಯಾಡಿ ಅಯ್ಯನರೇ !"
               ಬೇರೆ ಒಬ್ಬಿಬ್ಬರು ಗದರಿಸಿ ನೋಡಿದರು :
              "ಓಗು! ಅಟ್ಟೀಲಿರು!”
               ಆದರೆ ನಿಂಗಿ ಕೇಳಲಿಲ್ಲ, ಆಕೆಯೂ ಮೌನವಾಗಿ ಕಂಬನಿ ಸುರಿಸುತ್ತಿದ್ದ ಹದಿನಾಲ್ಕರ ಹರೆಯದ ಅವಳ ಮಗನೂ ಜನರ ಗುಂಪನ್ನು ಹಿಂಬಾಲಿಸಿದರು.
              ರಂಗಣ್ಣ ಒಬ್ಬನೇ ಬೀದಿಯುದ್ದಕ್ಕೂ ನಡೆದ. ತನ್ನ ಮನೆಯ ಕಡೆಗೆ ಸಾಗಿದ್ದ ಕವಲು ದಾರಿಯನ್ನು ತುಳಿದ ನದಿಯಿಂದ ಬಂದ ಕಾಲಿವೆ ತಮ್ಮ ಹೊಲಗಳನ್ನು ಮುಟ್ಟಿದ ಕಡೆ, ಒಂಟಿಯಾಗಿದ್ದ ಬಂಡೆಕಲ್ಲಿನ ಮೇಲೆ ಕುಳಿತ. 
              ಪಶ್ಚಿಮ ಕೆಂಪಗಾಗಿತ್ತು. ಅದರ ಹಿನ್ನೆಲೆಯಲ್ಲಿ ದೂರದ ಮರಗಳ ಹಸಿರೆಲೆಗಳು ಕಪ್ಪಗೆ ಕಾಣಿಸುತ್ತಿದ್ದುವು. 
              ರಂಗಣ್ಣ ವ್ಯಥಿತನಾಗಿ ತನ್ನೆದುರು ದೃಷ್ಟಿಯನ್ನು ಅಲೆಯ ಬಿಟ್ಟ. ನೆಲ ಒಣಗಿತು.
ಕಾಲಿವೆಯ ತಳದಲ್ಲಿ ನಯವಾದ ಮರಳಿತ್ತು.
               ಹೊಲಗಳಾಚೆಗೆ ಮಂಗಳೂರು ಹೆಂಚಿನ ಮನೆ, ತನ್ನೆದು. (ಇದು ಕಣಿವೇಹಳ್ಳಿಯ 

ಎರಡೇ ಎರಡು ಹೆಂಚಿನ ಮನೆಗಳಲ್ಲಿ ಒಂದು, ಶಾಮೇಗೌಡರೂ ಶ್ರೀನಿವಾಸಯ್ಯನವರೂ ಒಂದೇ ವರ್ಷ ಛಾವಣಿಗೆ ಹೆಂಚುಗೂಡಿಸಿದ್ದರು.)

              ರಂಗಣ್ಣ ನೆನಪಿನ ಆಳದೊಳಕ್ಕೆ ಕೈ ಇಕ್ಕಿ ನೋಡಿದ. ತನಗಾಗ ನಾಲ್ಕೋ ಐದೋ ವರ್ಷ.ಆಗಿನ್ನೂ ಪದ್ಮನಾಭನ ತಾಯಿ ಬದುಕಿದ್ದರು. ಸುಭದ್ರೆ ಹುಟಿరలిಲ್ಲ. ತನ್ನ ತಾಯಿ ಬಸುರಿ.ಪದ್ಮನನ್ನು ಎತ್ತಿಕೊಂಡು ಆತನ ತಾಯಿ ಮನೆಗೆ ಬಂದಿದ್ದರು.

" ಬಾಪ್ಪ, ಬಾ, ನಿನ್ನ ಗೆಳೆಯನನ್ನ ಕರಕೊಂಡು ಬಂದಿದೀನಿ," ಎಂದಿದ್ದರು, ದೂರ