ಪುಟ:ನೋವು.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು

"ಥುತ್!” ಎಂದಿಷ್ಟೆ ಧ್ವನಿ ಹೊರಡಿಸಿ ರಂಗಣ್ಣ ಬಾಗಿಲನ್ನು ದಾಟಿದ. ಪಡಸಾಲೆಯ ಒಳಬಾಗಿಲಿನಾಚೆಯಿಂದ ದೊಡ್ಡಮ್ಮನ ಧ್ವನಿ ಕೇಳಿಸಿತು.
"ರಂಗ ಹೋದ್ನೇನೊ ಪದ್ಮ?" 
ಪದ್ಮನಾಭ ಉತ್ತರಿಸಲಿಲ್ಲ. ಪಡಸಾಲೆಯ ಎಡಕ್ಕಿದ್ದ ತನ್ನ ಕೊಠಡಿಯನ್ನು ಹೊಕ್ಕ. ಬೆಳಗ್ಗೆ ಮುಖ ಕ್ಷೌರಕ್ಕೆಂದು ಕಿಟಕಿಗೆ ಸಿಲುಕಿಸಿದ್ದ ಕನ್ನಡಿ ಅಲ್ಲೇ ಇತ್ತು. ಆ ಕನ್ನಡಿಯ ಬಳಿ ಸಾರಿ ಅದರಲ್ಲಿ ತನ್ನ ಮುಖ ನೋಡಿಕೊಂಡ. 
ಆ ಕಿಟಕಿಯಿಂದ  ಕಾಣಿಸುತ್ತಿತ್ತು. ಆಂಗಳ ದಾಟಿ, ಹೊಲಗಳ ಏರಿಯ ಮೇಲಿಂದ ಕಣಿವೇಹಳ್ಳಿಯ ಏಕಮಾತ್ರ ರಸ್ತೆಯ ಕಡೆಗೆ ನಡೆದಿದ್ದ ರಂಗಣ್ಣನ ಹಿಮ್ಮೈ.....
 ...ಆ ರಸ್ತೆಯಲ್ಲಿ ರಂಗಣ್ಣ ಹತ್ತು ಹೆಜ್ಜೆ ಹೋಗಿದ್ದನೋ ಇಲ್ಲವೋ ಹಳ್ಳಿಯ ಹತ್ತಾರು ಜನ ಆ ಕಡೆ ಈ ಕಡೆಗಳಿಂದ ಅವನ ಬಳಿಗೆ ಬಂದರು. ಎಲ್ಲರೂ ಅವನನ್ನು ಪ್ರಶ್ನಿಸುವವರೇ.

"ಎಷ್ಟು ಹೊತ್ತಿಗೆ ನೋಡಿದಿರಿ ರಂಗಣ್ಣ?" "ಸಾಯಂಕಾಲ.” "ಎದರ್ಕೆ ಆಗ್ನಿಲ್ವಾ ?" "ಯಾಕಪ್ಪ ಎದರ್ಬೀಕು ?" "ಗಾಯ ಗೀಯ ಇತ್ತಾ?" "ಕಾಣ್ಲೆಲ್ಲ." "ದೆವ್ವ ಬಡಿದಿರ್ಬೇಕು?" "ಹ್ಯಾಗೆ ಹೇಳಾನ?" ಇನ್ನೊಬ್ಬನೆಂದ: " ದೆವ್ವವೂ ಇಲ್ಲ, ಮಣ್ಣೂ ಇಲ್ಲ. ಅವನು ಸಾಯೋಕೆ ಯಾರು ಕಾರಣ ಅಂತ ನನಗೆ ಗೊತ್ತು." ಮತ್ತೊಬ್ಬ ಆಕ್ಷೇಪಿಸಿದ : " ಮಾಡಿದವರ ಪಾಪ ಆಡಿದವರ ಬಾಯಲ್ಲಿ. ನಿನಗ್ಯಾತಕ್ಕಪ್ಪ ಅದೆಲ್ಲ?”

ಹಿಂಬಾಲಿಸುತ್ತ ಬಂದ ಜನರ ಗುಂಪಿನೊಡನೆ ರಂಗಣ್ಣ ಮುಂದುವರಿದ. ಕೃಷ್ಣೇಗೌಡನ ಮನೆಯ ಮುಂದೆ ಜನ ನೆರೆದಿದ್ದರು. ಆ ಜನರ ಮಧ್ಯೆ ಶ್ರಿನಿವಾಸಯ್ಯ ನಿಂತಿದ್ದರು. 

ಮಾತುಗಳು ಕೇಳಿಸುತ್ತಿದ್ದುವು. " ಬನ್ನಿ ಕೃಷ್ಣೇಗೌಡರ, ಮಾದನನ್ನು ಕರೆಯೋಣ. ಕತ್ಲಾದ್ಮೇಲೆ ಶವ ತರೋದು ಕಷ್ಟ.” "ಮುಚ್ಚಂಜೆ ಒತ್ನಲ್ಲಿ ಆ ಹೊಂಡದೊಳಕ್ಕೆ ಜನ ಇಳೀತಾರೋ ಇಲ್ವೋ?" " ಏನಾದ್ರೂ ಮಾಡ್ಬೇಕಪ್ಪ. ಲಾಟೀನು, ಟಾರ್ಚು ಏನೇನಿದೆಯೋ ತಗೊಂಡ್ಹೋ ಗೋಣ". " ನಿಂಗಿಗೆ ಯೋಳ್ಕಳ್ಸಿ, ಅವರ ಐದನನ್ನು ಕರೀರಿ." " ಅಕಾ, ಅವಳೇ ಬರ್ತಾ ಅವ್ಳೆ."

ರಂಗಣ್ಣನೆ ಜತೆಗಿದ್ದವರು ಅವನನ್ನು ಬಿಟ್ಟು ಕೃಷ್ಟೇಗೌಡನ ಮನೆಯ ಮುಂದಿದ್ದವರನ್ನು