ಪುಟ:ನೋವು.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು

 ಇವನ ಮೇಲೆ ಬಿದ್ದು ಕತ್ತು ಹಿಸುಕಿಬಿಡಬೇಕು ಎಂದು ಬಂಜೆ ಕ್ರೋಧ ಹೊಗೆ ಯಾಡಿತು.

ನೇರವಾಗಿ ರಂಗಣ್ಣನನ್ನು ನೋಡದೆ ಅಧೀರನಾಗಿ ನಿಂತ ಪದ್ಮನಾಭ, ಈಗೇನು ಮಾಡಲಿ? ಒಳಗೆ ಬಂದ ರೀತಿಯಲ್ಲೇ ತೆಪ್ಪಗೆ ಹೊರಟುಬಿಡಲೆ? ಎಂದು ಯೋಚಿಸಿದ. ಆದರೂ ಧೈರ್ಯ ತಳೆದು, ಕ್ಷೀಣ ಧ್ವನಿಯಲ್ಲ ಅವನೆಂದ: "ಯಾವಾಗ್ಬಂದೆ?" "ಇದೇ ಈಗ್ಬಂದೆ," ಎಂದು ಹೇಳಿ, ನಿಮಿಷ ತಡೆದು, ತುಟಿ ಕೊಂಕಿಸಿ ರಂಗಣ್ಣ ಮತ್ತೊ ಅ೦ದ: " ನೀನೇ ಮೊದಲು ತಲಪಬೇಕಾಗಿತ್ತು. ಬಳಸು ದಾರಿ ಹಿಡಿದೇಂತ ಕಾಣುತ್ತೆ." ಪದ್ಮನಾಭ ಜಗಲಿಯಲ್ಲಿ ನಿಂತಲ್ಲೇ ನಿಂತ. " ಏನು ಹಾಗಂದ್ರೆ ? ಯಾವ ಬಳಸು ದಾರಿ ?" " ಅಡ್ಡದಾರಿ ಕಣಪ್ಪ!" " ವ್ಯಂಗ್ಯ ಮಾತಾಡ್ತಿದೀಯೊ?" " ವ್ಯಂಗ್ಯ ಯಾತಕ್ಕೆ? ದಿಬ್ಬದಿಂದಲ್ವೆ ನೀನೀಗ ಬಂದದ್ದು?" ತಡವರಿಸಿ ಪದ್ಮನಾಭನೆಂದ: " ಅ-ಲ್ಲ..." " ಅಲ್ಲ–ಬಿಸ್ಮಿಲ್ಲ. ನಾಚ್ಕೆ ಆಗೊಲ್ವೇನೊ?" " ನಾಚ್ಕೆ ? ಯಾತಕ್ಕೆ?" " ನೀನು ಹೇಡಿ ! ಆಗ್ಲೇ ನಿನ್ನೆ ಹಿಡಿದ್ಬಿಡ್ತಿದ್ದೆ. ಓಡಿ ತಪ್ಪಿಸ್ಕೊಂಡೆ." " ನಾಲಿಗೆ ಉದ್ದ ಬೆಳೆಸ್ತಿದೀಯಲ್ಲೊ... " " ಒಳಗ್ಹೋಗು, ಕನ್ನಡೀಲಿ ಮುಖ ನೋಡ್ಕೊ. ಹೆಣ ನೋಡಿ ಇಷ್ಟೊಂದು ಹೆದರ್ಕೂಂಡಿದೀಯಲ್ಲೊ...! " " ಯಾವ ಹೆಣ ? ಯಾರ ಹೆಣ ? " " ಮುನಿಯನ್ದು. ನಿನ್ನ ಮುಖ ನೋಡಿದರೆ ಅವನ ಕತ್ತು ಹಿಸುಕಿ ನೀನೇ ಕೊಂದ ಹಾಗಿದೆಯಲ್ಲ!” "ಷಟಪ್ ! ಹೊರಡಿಲ್ಲಿಂದ!" " ನಿನ್ನ ಮನೆ ಅನ್ನೋ ಅಧಿಕಾರದಿಂದ ಹೇಳ್ತಿದೀಯೀನಯ್ಯ? ಇಲ್ಲೇ ಇರೋಕೆ ಬಂದಿದೀನಿ ಅಂದ್ಕೊಂಡಿಯಾ? ಹೊರಡ್ತೀನಿ. ಇನ್ನೊಮ್ಮೆ ಈ ಮನೆಗೆ ಕಾಲಿಡೋದಿಲ್ಲ, ನೆನಪಿರ್ಲಿ !" " ಥಾಂಕ್ಸ್." ರಂಗಣ್ಣ ನಿಂತಲ್ಲಿಂದ ಕದಲಿ ಹೊರ ಬಾಗಿಲಿನತ್ತ ಹೆಜ್ಜೆ ಇರಿಸಿದ. ಪದ್ಮನಾಭನ ಬಳಿ ನಿಂತು, ಕೆಂಗಣ್ಣುಗಳಿಂದ ಅವನನ್ನು ದುರುಗುಟ್ಟಿ ನೋಡಿದ. ರಂಗಣ್ಣನ ಕೈಗಳು ಮುಷ್ಟಿ ಕಟ್ಟಿದ್ದುವು. ಪದ್ಮನಾಭನ ಮುಖಕ್ಕೊಂದು ಗುದ್ದಲೇ ಎನ್ನಿಸಿತು. ಆ ಯೋಚನೆಯಿಂದ ಅವನ ಮೈ ಕಂಪಿಸಿತು.