ಪುಟ:ನೋವು.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ನೋವು

    ಮನಸಿನೊಳಗಿದ್ದುದನ್ನು ಬದಿಗೆ ತಳ್ಳಿ, ತಲೆ ಎತ್ತಿ ಗೌಡರೆಂದರು:
    "ಮನುಷ್ಯ ಮಾಡಿರೋ ಕೆಲಸ ಇದಲ್ಲ." 
    ಗೌಡರ ಧ್ವನಿ ಕೇಳಿದ ನಿಂಗಿ ಮತ್ತಷ್ಟು ಗಟ್ಟಿಯಾಗಿ ಎದೆ ಬಡಿದುಕೊಂಡು ಅಳ ತೊಡಗಿದಳು.
    ಒಬ್ಬನೆಂದ:
    " ಸುಮ್ನಿರು. ಓದ ಜೀವ ಬತ್ತದಾ?"
    నింగి ಪ್ರಲಾಪಿಸಿದಳು:
    " ಒಲ ಒಲ ಅಂತ ಉಚ್ಮುಂಡೆ ಮಾಡ್ಡ. ಬ್ಯಾಡ ಅಂದ್ರೆ ಕೇಳ್ನಿಲ್ಲಪೋ...” 
    ನೆರೆದವರು ಗೌಡರು ಇನ್ನೇನು ಹೇಳುವರೋ ಎಂದು ಅವರ ಕಡೆಗೇ ನೋಡಿದರು. ಶಾಮೇಗೌಡರು ತಲೆಯಾಡಿಸಿ ನಿಟ್ಟುಸಿರು ಬಿಟ್ಟರೇ ಹೊರತು, ಏನನ್ನೂ ಆಡಲಿಲ್ಲ. 
    ಜನಸಂದಣಿಯಿ೦ದ ಮಾತುಗಳು ಬಂದುವು:
    –" ಕೈಚೀಲ ಎಣದತ್ರಾನೇ ಬಿದ್ದಿತ್ತು.”
    –" ಒಂದು ಸಣ್ಣ ಸರ್ಟು, ಎಲೆ ಅಡಿಕೆ, ಒಂದೊಂದು ರೂಪಾಯಿನ ಐದು ನೋಟು ಅಷ್ಟೇ."
    –" ಸರ್ಟು ಐದನಿಗೇಂತ ಕೊಂಡಿರ್‍ಬೇಕು.”
    –" ಕಾಸು ಯಾರೂ ಮುಟ್ಟಿಲ್ಲ."
    ಧ್ವನಿ ಏರಿಸಿ ಗೊಗ್ಗರ ಗಂಟಲಲ್ಲಿ ಗೌಡರೆಂದರು:
    ಯೋಳ್ಲಿಲ್ವ? ಮನಿಷ್ನಾದೋನು ಮಾಡಿರೋ ಕೆಲಸ ಇದಲ್ಲ."
    ಜನರ ಗು೦ಪಿನಿಂದ ಮಾತುಗಳು ಮತ್ತೂ ಕೇಳಿಸಿದುವು:
    –" ವಕೀಲರ್‍ನ ನೋಡೋಕೆ ಅಂತ ನಿನ್ನೆ ಒತ್ತಾರೆ ನಗರಕ್ಕೆ ಓದ್ದಂತೆ."
    –" ನಿನ್ನೆ ರಾತ್ರಿ ವಾಪ್ಸು ಬರುವಾಗ ಇಂಗಾಗಿರ್‍ಬೇಕು."
    –" ಪಾಪ! ಒಳ್ಳೇ ಕೆಲಸಗಾರ!"
    –"ತನ್ನದೇ ಒಲ ಇರಬೇಕೂಂತ ಎರಡೆಕರೆ ಕೊಂಡ. ಅನುಬೋಗಿಸೋ ಅದೃಷ್ಟ
    ఇర్నిల్ల" ಗಟ್ಟಿಯಾಗಿ ಗೌಡರೆಂದರು:
    "ಈರ! ಮಾದ! ಹೆಣ ಇಟ್ಕೂಂಡು ಸುಮ್ಕೆ ಯಾಕ್ನಿಂತಿದೀರಾ? ಮುಂದಿನ ಕೆಲಸ ಮುಗಿಸ್ಬಿಡಿ."
    ಗವಿಯಾಗಿದ್ದ ಗಂಟಲಿನಿಂದ ಮಾದನೆಂದ:
    "ಆಗಲಿ, ಒಡೆಯಾ."
    "ಓಗಿ ನಿಮ್ನಿಮ್ಮನೆಗಳಿಗೆ" ಎಂದರು ಗೌಡರು ನೆರೆದಿದ್ದವರತ್ತ ನೋಡಿ.
    ಊರ ಅಕ್ಕಸಾಲಿಗ ವೀರಾಚಾರಿ ನಿಂತಿದ್ದ, ಜನರ ನಡುವೆ.
    "ಆಚಾರಿ, ಇಲ್ಲಿ ಬಾ,” ಎಂದರು ಗೌಡರು.
    ಆತ ಹತ್ತಿರ ಬಂದಾಗ, ಪಿಸು ಧ್ವನಿಯಲ್ಲಿ, " ಅಬ್ದುಲ್ಲ ಹಟ್ಟೀಲಿದ್ರೆ ಕರಕೊಂಡ್ಬಾ," ಎಂದರು.
    ಒಳಗಿನ ಸಂದೇಹದ ಕೆಂಡಕ್ಕೆ ತಿದಿಯೊತ್ತಿದಂತಾಗಿ ವೀರಾಚಾರಿ, ಅಬುಲ್ಲ ವಾಸವಾಗಿದ್ದ