ಪುಟ:ನೋವು.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು 9ణా ಅಂಥ ಸಂದರ್ಭಗಳಲ್ಲಿ ಮಗ ಮನೆಯಲ್ಲಿದ್ದರೆ, "ರಂಗಾ, ಅದೇನೂಂತ ನೋಡ್ಕೊಂಡ್ಬಾ,” ಎಂದು ಅವರು ಹೇಳಬೇಕು. ಎಳೆಗರು 'ಅಂಬಾ' ಎಂದಿದೆ, ಹೋಗಿ ನೋಡಬೇಕಾದುದು ಧರ್ಮ-ಎಂದು ಅವರ ಒಳದನಿ ಕ್ಷೀಣವಾಗಿ ನುಡಿಯುತ್ತಿತು. ಆದರೆ ಅವರನ್ನು ತಟ್ಟಿ ಎಚ್ಚರಿಸುವಷ್ಟು ಆ ಧ್ವನಿ ಬಲವಾಗಿರಲಿಲ್ಲ . ಕರು ಯಾಕೆ ಕೂಗಿತು? ಅಣ್ಣನ ಸದ್ದಿಲ್ಲವಲ್ಲ? ಯಾರ ಮಾತೂ ಕೇಳಿಸುತ್ತಿಲ್ಲವಲ್ಲ? -ಎಂದು ಚಿಂತಿಸುತ್ತ ನಾಗಮ್ಮ ಅಡುಗೆ ಮನೆಯಲ್ಲಿದ್ದವರು ಪಡಸಾಲೆಗೆ ಬಂದರು. ಕಂದೀಲನ್ನೆತ್ತಿಕೊಂಡು ಅಂಗಳಕ್ಕಿಳಿದರು. ಅದರ ಬೆಳಕಿನ ಝರಿಯಲ್ಲಿ ಸೋದರನನ್ನೂ ಅಳಿಯನನ್ನೂ ಕಂಡರು. ಅವರೆಂದರು : - "ಕರ ಅಂಬಾ ಅಂತು. ನೋಡ್ಕಂಬತ್ತಿನಿ." ರಂಗಣ್ಣ ಕೇಳಿದ: " ನಾನೂ ಬರಲಾ ಅತ್ತೆಮ್ಮ?" " ಬ್ಯಾಡ, ಯಾತಕ್ಕೆ?" - ಶಾಮೇಗೌಡರ ದೃಷ್ಟಿ ತಂಗಿಯ ಮೇಲೆ ನೆಟ್ಟಿತು. ಆಕೆಯನ್ನೂ ಕಂದೀಲನ್ನೂ ಅದು ಹಿಂಬಾಲಿಸಿತ್ತು. - - ಕೊಟ್ಟಿಗೆಯಲ್ಲಿ ಏನಾಯಿತೆಂಬುದನ್ನು ತಿಳಿಯಲು ತಂಗಿಯ ಪುನರಾಗಮನವನ್ನು ಇದಿರು ನೋಡುವವರಂತೆ ಗೌಡರು ಮೂಕರಾಗಿ ಕುಳಿತರು. ಕೆಲ ನಿಮಿಷಗಳಲ್ಲೆ ನಾಗಮ್ಮ ಹಿಂತಿರುಗಿದಾಗ ರಂಗಣ್ಣ ಕೇಳಿದ: " ಏನಾಯ್ತು ಅತ್ತೆಮ್ಮ?" . " ಯಾನಿಲ್ಲ ಮೊಗ. ಕಾಲಿಗೆ ಅಗ್ಗ ಸುತ್ಕಂಡಿತ್ತು." ಶಾಮಣ್ಣನ ಮನಸ್ಸೆಂದಿತು: ಏನೂ ಆಗಿರಲಿಲ್ಲ, ಕಾಲಿಗೆ ಹಗ್ಗ ಸುತ್ತಿಕೊಂಡಿತ್ತು. ಅಷ್ಟೆ, అಷ್ಟೆ...... ... " .ರಂಗ ಕಡ್ಡಿಯನ್ನು ಗುಡ್ಡ ಮಾಡಿ ಹೇಳಿದನೋ ಹೇಗೆ? ಕಾಲಿಗೆ ಸುತ್ತಿಕೊಂಡಿದ್ದ ಹಗ್ಗ ವನ್ನು ಹಾವು ಎಂದು ಆತ ಭಾವಿಸಿಲ್ಲವಷ್ಟೆ? ಹಾವೊ ಹಗ್ಗವೊ. ಹಗ್ಗವೇ ಆದರೂ ಏನು ಕಡಮೆಯೆ ? ಅದು ಉರುಳಾಗಬಹುದಲ್ಲ ? - ಅಂಗಳದ ಮಧ್ಯದಲ್ಲಿ ನಾಗಮ್ಮ ನಿಂತರು. ಇದೇನು ತಂದೆ ಮಗ ಇಲ್ಲಿ? ಮುನಿಯ ಸತ್ತ ಅಂತ ಇಷ್ಟೊಂದು ಮೌನವಾಗಿ [ಗುಸುಗುಸು ಮಾತನಾಡುತ್ತಾ.] ಅಂಗಳದ ಮೂಲೆಯಲ್ಲಿ ಇರಬೇಕೆ ಇವರು ? , ". ಸುಬ್ಬಿ. ಸುಬ್ಬಿಯ ಮೈ ಕಾದಿದೆ. ಈಗ ಹೇಗಿದೆಯೊ ? ನಾಗಮ್ಮ ಕೇಳಿದರು : - " ಇಲ್ಯಾಕೆ ಕುಂತಿದೀ ಅಣ್ಣ?” ತಮ್ಮದಲ್ಲದ ಧ್ವనియుల్లి ಗೌಡರೆಂದರು: "ನೀನು ಒಳಕ್ಕೋಗು, ನಾಗೂ."