ಪುಟ:ನೋವು.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ෙජ් - ನೋವು ಕಾಣುತ್ತಿದ್ದರು, ಮುಖಭಾವವನ್ನಲ್ಲ. - - - ಸುಬ್ಬಿ ಪದ್ಮನ ಜತೆ ದಿಬ್ಬದ ತಾವ ಯಾಕೆ ಹೋದಳು ಎಂದು ಕೇಳುವರಲ್ಲ ಅಪ್ಪ? ಆ ಪ್ರಶ್ನೆಗೆ ಉತ್ತರ ಬೇರೆ ಹೇಳಬೇಕೆ ತಾನು ? - ರಂಗಣ್ಣನೆಂದುಕೊಂಡಃ ಯಾವಾಗ? ಎಂಬುದಕ್ಕೆ ಉತ್ತರವಿತ್ತರಾಯಿತು. "ಮಧ್ಯಾಹ್ನ ಅಪ್ಪ.ನಾಲ್ಕು ಐದರ ಸುಮಾರಿಗೆ." ಘಂಟೆ ಮುಖ್ಯವಾಗಿರಲಿಲ್ಲ ಶಾಮೇಗೌಡರಿಗೆ." ఆగలు? ఆಡೇ ఆగలు?"." ಹೂಂ ಅಪ್ಪ." ಮತ್ತೊಮ್ಮೆ "ಯಾಕೆ?” ಎಂದು ಕೇಳಲಿಲ್ಲ ಅವರು. ಕರ್ಕಶವಾಗಿದ್ದ ಅದುರುತ್ತಿದ್ದ ಸ್ವರದಲ್ಲಿ ಅವರೆಂದರು; "ಓಗೋಕೆ ಯಾಕ್ಟಿಟ್ಟೆ ? ನೀನು ಯೆನ್ಮಾಡ್ತಿದ್ದೆ ?" " ಸೀಬೇಕಾಯಿ ಕಿತ್ಕಂಬರ್ತೀನಿ ಅಂತ ಅತ್ತೆಮ್ಮನಿಗೆ ಹೇಳಿ ನಂಗೆ ತಿಲಿಯದ ಹಾಗೇನೇ ఓಗ್ಬುಟ್ಲು . ನಾನು ಹುಡುಕ್ಕೊಂಡೋದೆ. ದಿಬ್ಬದ ಹೊಂಡದತ್ತ ಹೆಣ ನೋಡಿ ಹೆದರಿಕೊಂಡು ಇಬ್ರೂ ಓಡ್ತಿದ್ದಾಗ ನಾನು ಕಂಡೆ." ಒಂದು ನಿಮಿಷ ಶಾಮೇಗೌಡರು ಏನನ್ನೂ ಹೇಳಲಿಲ್ಲ. ತಂಗಾಳಿ ಬೀಸಿತು. ಆದರೆ ಶಾಮೇಗೌಡರ ಪಾಲಿಗೆ ಅದು ಬಿರುಗಾಳಿ,ಅವರು ತರಗೆಲೆ. ಹೆಪ್ಪುಗಟ್ಟುತ್ತಿದ್ದ ನೀರಲ್ಲಿ ಮೈ ಅದ್ದಿ ಎದ್ದವರಂತೆ ಗೌಡರು ನಡುಗಿದರು, ಆ ನಡುಕದಿಂದ ಕಟ ಕಟ ಕಟ ಎಂದುವು ಅವರ ಹಲ್ಲುಗಳು. ಚಿಟ್ ಚಿಟ್ ಚಿಟ್ ಎನ್ನುತ್ತಿತು ತಲೆ. ಸಣ್ಣಗೆ ಕಾಣಿಸಿಕೊಂಡು ಒಮ್ಮೆಲೆ ವ್ಯಾಪಿಸಿದ ಒಳಗಿನ ಯಾತನೆ ನರಳಾಟದ ಸದ್ದನ್ನು ಅವರ ಬಾಯಿಯಿಂದ ಹೊರಡಿಸಿತು. ಕಾಲುಗಳು ಕ್ಷೀಣಗೊಂಡಂತೆ ಕಂಡು, ನಿಂತಿರುವುದಾಗದೆ, ಅಂಗಳದ ದಂಡೆಯ ಮೇಲೆ ಅವರು ಕುಳಿತರು. ಅಲ್ಲಿಂದಲೂ ಆಗೊಮ್ಮೆ ಈಗೊಮ್ಮೆ ಕ್ಷೀಣವಾಗಿ ನರಳಾಟ ಕೇಳಿಸಿತೇ ಹೊರತು ಮಾತಲ್ಲ. - ರಂಗಣ್ಣ ಆತಂಕಗೊಂಡ. ತಂದೆಗೆ ಹೇಳದೇ ಇದ್ದರೂ ಆಗುತ್ತಿತ್ತೇನೊ ಎನಿಸಿತು. ಅವನು ಬಲ್ಲ. ಬೇರೆ ದಿನವಾಗಿದ್ದರೆ, ಸುಭದ್ರೆಯ ಜ್ವರದ ಪ್ರಸ್ತಾಪವೂ ಇಲ್ಲದಿರು ತ್ತಿದ್ದರೆ, ತಂದೆ ಒಳಕ್ಕೆ ಧಾವಿಸಿ ತಂಗಿಯ ಭೂತ ಬಿಡಿಸುತ್ತಿದ್ದರು. ಆದರೆ ಈ ದಿನ ಅವರು ನಿತ್ಯದ ಮನುಷ್ಯನಲ್ಲ. ಗೌಡರು ಕುಳಿತೇ ಇದ್ದರು. ಏನು ಮಾಡಬೇಕೆಂದು ರಂಗಣ್ಣನಿಗೆ ತೋಚಲಿಲ್ಲ. ತಾನು ಒಳಗೆ ಹೋಗುವುದು ಮೇಲು ಎನಿಸಿತು. ತಂದೆಗೆ ಕೇಳಿಸಲಿ ಎಂದು ಬಾಯಿ ತೆರೆದು ಗಟ್ಟಿಯಾಗಿ ఆತ ಉಸಿರು ಬಿಟ್ಟ. ಗೌಡರು ಯಾವ ಪ್ರತಿಕ್ರಿಯೆಯನ್ನೂ ತೋರಿಸಲಿಲ್ಲ. ಆ ಕ್ಷಣ ಕೊಟ್ಟಿಗೆಯಿಂದ ಎಳೆಗರು 'ಅಂಬಾ' ಎಂದಿತು. ಅದರ ತಾಯಿ 'ಹೂ' ಎಂದು ಉತ್ತರವಿತ್ತಿತು. ತುಸು ಮುದುಡಿದ್ದ ಗೌಡರು ನೆಟ್ಟಗೆ ಕುಳಿತರು. ಅವರ ತಲೆ ಯಾಂತ್ರಿಕವಾಗಿ ಕೊಟ್ಟಿಗೆಯಿದ್ದ ದಿಕ್ಕಿಗೆ' ಹೊರಳಿತು.