ಪುಟ:ನೋವು.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೊವು* ۓث ಜಗಲಿಯಲ್ಲಿ ರಂಗಣ್ಣ ನಿಂತಿದ್ದ. " ಅಪ್ಪ, ಒಸಿ ಈ ಕಡೆ ಬನ್ನಿ" ಎಂದು, ಕೈಸನ್ನೆಮಾಡಿ ತಗ್ಗಿದ ಧ್ವನಿಯಲ್ಲಿ ತಂದೆಯನ್ನು ಅವನು ಕರೆದ. `` - 원 ಮಗ ರಂಗಣ್ಣ ಸನ್ನೆ ಮಾಡಿ ತಮ್ಮನ್ನು ಕರೆದಾಗ ಶಾಮೇಗೌಡರು ಹುಬ್ಬು ಗಂಟಿಕ್ಕಿ, “ ಏನೋ ಅದು?” ಎಂದು ಕೇಳಿದರು. ಆದರೆ, ಹಾಗೆ ಪ್ರಶ್ನಿಸಿದ ಮರುಕ್ಷಣವೆ, ರಂಗಣ್ಣ ಡಾಕ್ಟರ್ ಪರೀಕ್ಷೆಗೆ ಓದುತ್ತಿರುವವನು ಎಂಬುದು ನೆನಪಾಗಿ, ತನ್ನ ತಂಗಿಯ ಅಸ್ವಾಸ್ಥದ ವಿಷಯ ಆತ ಏನನ್ನೋ ಹೇಳಬಯಸು ತ್ತಿರಬಹುದೆನಿಸಿ, ತುಸು ಅಧೀರರಾಗಿಯೇ ಮಗನನ್ನು ಸಮೀಪಿಸಿದರು. ರಂಗಣ್ಣ ಅಂಗಳಕ್ಕಿಳಿದ. ಅಡ್ಡಪಂಚೆಯನ್ನೆಷ್ಟೆ ಉಟ್ಟಿದ್ದ ಗೌಡರು ಅವನನ್ನು ಹಿ೦ಬಾಲಿಸಿದರು. - ಈಗ ಕಾತರ ತುಂಬಿದ ಧ್ವನಿಯಲ್ಲಿ ಗೌಡರು ಕೇಳಿದರು: "ಸುಬ್ಬಿಗೆ ಏನಾಗದೆ?" - ಅಪ್ರಿಯವಾದರೂ ಹೇಳಬೇಕಾದುದು ತನ್ನ ಕರ್ತವ್ಯ ಎಂಬ ನಿರ್ಧಾರಕ್ಕೆ ಬಂದಿದ್ದ ರಂಗಣ್ಣ ತನ್ನ ಉಸಿರೆಳೆದು ಬಿಟ್ಟೂ, ಗಂಟಲು ಸರಿಪಡಿಸಿದ. " ಸುಬ್ಬಿ ಮುನಿಯನ ಹೆಣ ನೋಡಿ ಹೆದರ್ಕೊನ್ದವಳ ಅಪ್ಪ"ಹಾ " ಯೆಲ್ನೊಡೀದ್ಲು?" " ಅಲ್ಲೇ, ದಿಬ್ಬದ ಹೊಂಡದಲ್ಲೇ." " ದಿಬ್ಬದೊಂಡ್ವಲ್ಲಿ ? ಅಲ್ಲಿಗ್ಯಾಕೊದ್ಲು ?"ಅಲ್ಲಿ...ಅಲ್ಲಿ..." - ರಂಗಣ್ಣ ತಡವರಿಸಿದ ಪದಗಳು ಕೈಕೊಟ್ಟುವು. ಶಾಮೇಗೌಡರ ಮೀಸೆ ಅಲುಗಿತು. " ಏನೋ ಅದು?” - - ಮುಚ್ಚಿಕೊಂಡಿದ್ದ ತನ್ನ ತುಟಿಗಳನ್ನು ಪ್ರಯತ್ನಪೂರ್ವಕವಾಗಿ ತೆರೆದು ರಂಗಣ್ಣನೆಂದ: " ಸುಬ್ಬಿ ಪದ್ಮನ ಜತೆ ದಿಬ್ಬದ ತಾವ ಹೋಗಿದ್ಲು." ಡಕ್ ಡಕ್ ಡಕ್ ಎಂದು ವಿಪರೀತ ಸದ್ದು ಮಾಡಿತು ಗೌಡರ ಎದೆಗುಂಡಿಗೆ ತೋಫು ಗುಂಡುಗಳನ್ನು ಉಗುಳುವಂತೆ ಅವರೆಂದರು: : - “ ಯಾಕೆ ? ಯಾವಾಗ?" - - - ಪಡಸಾಲೆಯ ಗೋಡೆ ಗೂಡಿನಲ್ಲಿದ್ದ ಕಂದೀಲು ಬೆಳಕು ಬಾಗಿಲಿನೆಡೆಗೆ ಹರಿದು ಹಿರಿದಾಗುತ್ತ ಅಂಗಳಕ್ಕಿಳಿದು ಮಂದವಾಗಿ ಕೃಷ್ಣ ಪಕ್ಷದ ಇರುಳಲ್ಲಿ ಲೀನವಾಗಿತು, ಆಕಾಶದಲ್ಲಿ ನಕ್ಷತ್ರಗಳು. ಆ ನಸುಬೆಳಕಿನಲ್ಲಿ ತಂದೆ ಮತ್ತು ಮಗ ಪರಸ್ಪರರ ಶರೀರದ ಸ್ಥೂಲ ರೇಖೆಗಳನ್ನಷ್ಟೇ