ಪುಟ:ನೋವು.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                    ನೋವು                 ೩೭
                        
         ನಶಿಸಿದ್ದ ಚೇತನ ಅಂಗಾಂಗಗಳಲ್ಲಿ ಪುನಃ ಪ್ರಶ್ರವಹಿಸಿದಂತಾಯಿತು.                                         
          -ಸಂಕಟ ಬಂತೆಂದು ಆಧೀರರಾಗುವುದುಂಟೆ?                                    
          -ಆಗಬಾರದ್ದು ಆಗಿ ಹೋಯಿತು. ಇದು ಬದಲಾದ ಪರಿಸ್ಥಿತಿ. ಈ ಪರಿಸ್ಥಿತಿಯನ್ನು       
       ಸ್ಥೈರ್ಯದಿಂದ ಎದುರಿಸಬೇಕು.
           ಚೇತೋಹಾರಿಯಾಗಿದ್ದ ಗಾಳಿಯನ್ನು ಶ್ವಾಸಕೋಶಗಳಲ್ಲಿ ತುಂಬಿಕೊಂಡು ಶಾಮೇ         
       ಗೌಡರು ಗೃಹಾಭಿಮುಖವಾಗಿ ನಡೆದರು.
           ...ಮನೆಯಲ್ಲಿ ರಂಗಣ್ಣನಾಗಲೇ ಎದ್ದಿದ್ದ ಬಿನಾಕಾ ಟೂತ್ಪೇಸ್ಟಿನಿಂದ ದಂತ ಪಂಕ್ತಿ                 
       ಗಳನ್ನು ತಿಕ್ಕಿ ಮುಖ ತೊಳೆದುಕೊಂಡಿದ್ದ.
           ಈ ಕೆಲ ವರ್ಷಗಳಲ್ಲಿ ಮನೆಯಲ್ಲಿ ಕಾಫಿ ರೂಢಿಯಾಗಿತು.  ನಾಗಮ್ಮ ದೋಸೆ          
       ಹುಯ್ಯಬೇಕು.
           ಆದರೆ ಈ ದಿನ ಪ್ರತಿಯೊಂದೂ ಸ್ವಲ್ಪ ನಿಧಾನ.                             
           ರಂಗಣ್ಣ ತಂಗಿಯ ಕೊಠಡಿಗೆ ಹೋದ. ಅಣ್ಣನ ದೃಷ್ಟಿಯನ್ನು ಸಂಧಿಸಿದೊಡನೆಯೇ                 
        ಸುಭದ್ರೆ ಮಗ್ಗುಲಿಗೆ ಮುಖ ತಿರುಗಿಸಿದಳು. 
           ತಂಗಿಯ ಕಣ್ಣುಗಳಲ್ಲಿ ತಿರಸ್ಕಾರದ ನೋಟವನ್ನು ರಂಗಣ್ಣ ಗುರುತಿಸಿದ. ಅವನಿಗೆ          
        ಸಿಟ್ಟು ಬಂತು. ಹಿಡಿದ ಅಡ್ಡ ದಾರಿಯನ್ನೇ ಮುಂದೆಯೂ ತುಳಿಯುವೆ ಎಂದು ಆಕೆ         
        ಭಾವಿಸಿದ್ದರೆ ಅದು ಭ್ರಮೆ, ಅಣ್ಣನಾದವನು ಏನು ತಪ್ಪು ಮಾಡಿದ ಅಂತ ವೈರಿಯ ಹಾಗೆ
        ಅವನನ್ನು ಕಾಣಬೇಕು?
             "ಸುಬ್ಬೀ..."                                                            
             ತಾನಾಗಿಯೇ ರಂಗಣ್ಣನ ಬಾಯಿಯಿಂದ ಆ ಶಬ್ದ ಹೊರಬಿತ್ತು.                             
             ಸುಭದ್ರೆ ಹಾ೦ ಎನ್ನಲಿಲ್ಲ, ಹೂ೦ ಎನ್ನಲಿಲ್ಲ.                             
             ರಂಗಣ್ಣ ಮಂಡಿಯೂರಿ ಆಕೆಯ ಅಂಗೈಯನ್ನು ಮುಟ್ಟಿದ. ಕೊಸರಿಕೊಳ್ಳಲು ಅವಳು 
        ಯತ್ನಿಸಿದಳು. ಆದರೆ ಅವಳ ತೋಳಿಗೆ ಅಷ್ಟು ಶಕ್ತಿ ಇರಲಿಲ್ಲ.ಮಣಿಗಂಟು ಹಿಡಿದು ನಾಡಿ    
        ಬಡಿತವನ್ನು ಪರೀಕ್ಷಿಸಿದ. [ಡಾಕ್ಟರುಗಳು ಮಾಡುವುದು ಹೀಗೆ.] ಮೈಯಂತೂ ಬೆಚ್ಚಗಿತು.    
             ತಂಗಿಯ ಕೈಯನ್ನು ರಂಗಣ್ಣ ಬಿಟ್ಟ. ಅವಳನ್ನು ಮತ್ತೆ ಮಾತನಾಡಿಸುವ ಗೊಡವೆಗೆ   
        ಹೋಗಲಿಲ್ಲ.
             ಕೊಠಡಿ ಬಿಟ್ಟು ಪಡಸಾಲೆಗೆ ಬಂದ.                                              
             ಅಲ್ಲಿ ನಾಗಮ್ಮ ಅವನಿಗೆ ಎದುರಾದರು.                                                       
             "ಕಾಫಿ ಆಯ್ತು. ಕುಡ್ಕೊಂಡು ಅಯ್ನೋರ ಮನೆಗೆ ಓಗ್ಬಾ,ಮೊಗ," ಎಂದರು ಆಕೆ.    
            ಮುಂದಿನ ಅನಿವಾರ್ಯ ಸಂಭಾಷಣೆಗೆ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದ          
        ರಂಗಣ್ಣ ಕೇಳಿದ:
            “ಯಾಕೆ ಅತ್ತೆಮ್ಮ?"                                             
            ಅವರಿಗೆ ಆಶ್ಚರ್ಯವಾಯಿತಾ.                                       
            “ಯಾಕೆ ? ಸುಬ್ಬಿಗೆ ಅವುಸದಿ ತರೋದು ಬೇಡವಾ ?”                      
            "ಔಷಧಿ? ಅಲ್ಲಿಂದ? ಅವರೇನು ಡಾಕ್ಟರಾ ?”