ಪುಟ:ನೋವು.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ನೋವು

ಗೌಡರ ಕಡೆ ನೋಡಿ, “ಏನ್ಸಮಾಚಾರ? ವಿಶೇಷವೇನೂ ಇಲ್ಲ ತಾನೆ ?” ಎಂದರು.

   “ಅಂಥಾದ್ದೇನೂ ಇಲ್ಲ," ಎಂದರು ಗೌಡರು.                                               
   "ಅಬ್ದುಲ್ಲನ್ನ ಈ ಊರಿಂದ ಕಳಿಸ್ಟಿಟ್ರೆ ವಾಸಿಯೇನೊ?"                                       
   "ಸದ್ಯ ಬ್ಯಾಡಿ."                                                            " 
   "ಮತ್ತೆ  ಹೊಲ?"                                                            
  "ಮುನಿಯನ ಎಂಡತಿಗೆ ಕೊಡಿಸ್ಬಿಡಾನೆ. ಸ್ವಲ್ಪ ಸಮಯ ಇಲ್ಲೆ ಎಲ್ಲಾದರು ಆಬುದಲ್ಲ                   ಕೆಲಸ ಮಾಡ್ತಿರಿಲಿ , ಆಮ್ಯಾಕೆ ಯಾವುದಾದರೂ ಪರವೂರಿಗೆ ಒಂಟೋಗ್ಲಿ."
   "ಸರಿ. ಮುನಿಯ ಸತ್ತ ವಿಷಯದಲ್ಲಿ ಯಾರಿಗೂ ಸಂಶಯ-"                               
   "ಎಲಾ ! ನೀವೂ ಗೋವಿಂದನ ಹಾಗೆ ಮಾತಾಡ್ತಿರಲ್ಲ".                                     
   "ಏನೆಂದ ಗೋವಿಂದ?                                                            
   “ಪೋಲೀಸರಿಗೆ ಕಂಪ್ಲೇಂಟು ಕೊಡೋದು ಒಳ್ಳೇದು ಅಂತ."                               
   "ಛೆ ! ಛೆ ! ಶುದ್ಧ ತಲೆಹರಟೆ."                                                   
   "ಆಗಂತ ಇನ್ನೊಂಧ್ಸಲಿ ಅನ್ನಿ.ನೋಡಿ,ಹದ್ದು ಮಿಾರಿ ಓಗಾತನೆ. ಅಂಕೆ ತಪ್ಪಿದ ಮ್ಯಾಕೆ                   ಕಪಿ ಲಂಕೇನ ಸುಡು, ಅಂಗಾಗ್ಯಾರು."
    ಮಗ ಗೋವಿಂದನನ್ನು ಕುರಿತ ಟೀಕೆಯಿಂದಲ್ಲ, ಆ ಪದಗಳಲ್ಲಿ ಕಂಡುಬಂದ ಉದ್ವೇಗದಿಂದ ಶ್ರೀನಿವಾಸಯ್ಯ ಚಕಿತರಾದರು. ಸಾಲದುಧಕ್ಕೆ ಗೌಡರ ಮನಸ್ಸಿನ ಕಹಿಗೆ ಅವರ ಮುಖ ಕನ್ನಡಿ ಹಿಡಿತ್ತು.
    ಶ್ರೀನಿವಾಸಯ್ಯ ಅಂದರು:

“ನಾನು ಅವನಿಗೆ ಬುದ್ದಿ ಹೇಳ್ತೀನಿ.” ಪದ್ಮನಾಭನ ಬಗೆಗೆ ಹೇಳಲು ಬಂದಿದ್ದ ಗೌಡರು ಗೋವಿಂದನನ್ನು ಕುರಿತು ಆಡಿದ್ದರು. ಶ್ರೀನಿವಾಸಯ್ಯ ಮಗನನ್ನ ಬಯ್ದರೆಂದು ಸಿಟಾಗಿರಲಿಲ್ಲ, ಸಾತ್ವಿಕ ಮನುಷ್ಯ, 'ಬುದ್ದಿ ಹೇಳ್ತೀನಿ' ಎ೦ದಿದ್ದರು. ಗೌಡರು ನಿಟ್ತುಸಿರುಬಿಟ್ಟರು.

ಥಟ್ಟ್ನನೆ. "బర్మిని", ಎ೦ದರು.
ಶ್ರೀನಿವಾಸಯ್ಯನೂ ಎದ್ದರು, 

ಅಷ್ಟರಲ್ಲಿ ಪಡಸಾಲೆಯನ್ನು ಹಾದು ಪದ್ಮನಾಭ ಅಡುಗೆ ಮನೆಗೆ ಹೋದುದು ಗೌಡರಿಗೆ ಕಾಣಿಸಿತು.

      ಅಂಗಳಕ್ಕಿಳಿದು ನಿಂತು, ತಮ್ಮನ್ನು ಹಿಂಬಾಲಿಸಿ ಬಂದು ಮೆಟ್ಟಿಲ ಮೇಲಿದ್ದ ಶ್ರೀನಿವಾಸಯ್ಯ ನವರಿಗೆ ಗೌಡರೆ೦ದರು: 

" ಇನ್ನೊಂದು ಇಸ್ಯ, ನಿಮ್ಮ ಕಿರೇ ಮಗ ಪದ್ಮ ಇನ್ನು ನಮ್ಮಲ್ಲಿಗೆ ಬರಬಾರು. ಪಾಟೇಲಿ ಕಲಿತದ್ದನ್ನೆ ಅಳ್ಳಿಲಿ ಬಿಚೊದೆ?” ಶ್ರೀನಿವಾಸಯ್ಯ ದಂಗಾದರು. "ಶಾಮಣ್ಣ ! ಏನು ಹಂಗಂದ್ರೆ ? ಪದ್ಮ ಏನಾಡ್ಡ ?" "ಏನು ಮಾಡಿದ್ದೋ ಏನು ಬಿಟ್ಟೊ...ದೇವರು ನೋಡ್ಕಂತಾನೆ. ಬೆಳೆದ ಉಡುಗರ ಅದುಬಸ್ಸಿನಲ್ಲಿ ಮಡಗೋದು ಕಸ್ಟ, ಸ್ವಲ್ಪ ಉಸಾಧಾಗಿ ನೋಡ್ಕಳ್ಳಿ."