ಪುಟ:ನೋವು.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೪೩

   ಇಷ್ಟು ಹೇಳಿ ಗೌಡರು ಧಡಧಡನೆ ಹೊರಟು ಹೋದರು.                                    
   ಶಿಲಾ ವಿಗ್ರಹವಾಗಿದ್ದರು ಶ್ರಿನಿವಾಸೆಯ್ಯ.  ದೂರಹೋಗುತ್ತಲಿದ್ದ ಶಾಮೇಗೌಡರನ್ನು

ಎವೆಮುಚ್ಚದೆ ಅವರು ದಿಟ್ಟಿಸಿದರು.

   ಗೌಡರು ಅಂಗಳ ದಾಟುತ್ತಿದ್ದಂತೆ ಶ್ರಿನಿವಾಸಯ್ಯನವರ ಗಂಟಲು ಗೊರಗೊರ ಎಂದಿತು.              
   ಒಡೆದ ಧ್ವನಿಯಲ್ಲಿ ಅವರು ಕೂಗಿ ಕರೆದರು:                                             
   "ಶಾಮಣ್ಣಾ! ಶಾಮಣ್ಣಾ!"
   ಕೇಳಿಯೂ ಕೇಳಿಸದವರಂತೆ ಶಾಮೇಗೌಡರು ಮುಂದಕ್ಕೆ ನಡೆದರು.
   ಅವರ ಆಕೃತಿ ಕಿರಿದಾಗುವವರೆಗೂ ನಿಂತಲ್ಲೆ ನಿಂತಿದ್ದು. ಬಳಿಕ ಒಳದಿಕ್ಕಿಗೆ ಮುಖ ಮಾಡಿ,

ಏರುತ್ತಲಿದ್ದ ಸ್ವರದಲ್ಲಿ ಶ್ರಿನಿವಾಸಯ್ಯ ಕರೆದರು:

   "ಪದ್ಮಾ ! ಏ ಪದ್ಮನಾಭಾ ! "
                           è
   ರಂಗಣ್ಣ ಮೋಟಾರು ರಸ್ತೆಯನ್ನು ತಲಪಿದಾಗ ಘಂಟೆ ಹತ್ತಾಗಿತ್ತು. ಸೋಮಪುರದಿಂದ            ಭಾಗ್ಯನಗರಕ್ಕೆ ಹೋಗುವ ಬಸ್ಸು ಆ ದಾರಿಯಾಗಿ ಬರುವುದು ಹತ್ತೂವರೆ ಗಂಟೆಗೆ. ನಡಿಗೆ             ನಿಧಾನವಾದರೆ ಬಸ್ಸು ತಪ್ಪಿ ಹೋದೀತೆಂದು ಬೇಗಬೇಗನೆ ಹೆಜ್ಜೆ ಇರಿಸಿದ್ದ ರಂಗಣ್ಣ.                     ಚಿಕ್ಕ ಒಡೆಯನ ಭೆಂಗಾವಲಿಗೆಂದು ಬಂದಿದ್ದ ಕರಿಯ, ರಂಗಣ್ಣನೆ ಬೆನ್ನೆ ಹಿಂದಿನಿಂದ ಸ್ವಲ್ಪ ದೂರ          ನಡೆಯುತ್ತ ಸ್ವಲ್ಪ ದೂರ ಓಡುತ್ತ ಬರಬೇಕಾಯಿತು. 
   ಮಾರ್ಗದ ಬದಿಯಲ್ಲೊಂದು ಆಲದ ಮರ. ಅದರ ಕೆಳಗಿತ್ತು ಇಪ್ಪತ್ತೆಂಟನೆಯ                 ಮೈಲಿಕಲ್ಲು. ರಸ್ತೆ ಎತ್ತರಕ್ಕಿತ್ತು. ತಿರುವು ಬೇರೆ. ಅರ್ಧ ಫರ್ಲಾಂಗಿನುದ್ದಕ್ಕೂ ಕಲ್ಲಿನ ಅಂಚು            ಗೂಟಗಳನ್ನು ಹೂತಿದ್ದರು. ಬಸ್ಸಿಗಾಗಿ ಕಾಯಬೇಕಾದ ಪ್ರಸಂಗ ಬಂದಾಗ, ಪ್ರಯಾಣಕ್ಕೆಂದು        ಕಣಿವೇಹಳ್ಳಿಯಿಂದ ಎಂದಾದರೊಮ್ಮೆ ಬರುತ್ತಿದ್ದವರು ಆ ಕಲ್ಲುಗಳ ಮೇಲೆ ಆಸೀನರಾಗಿ                     ವಿಶ್ರಾಂತಿ ಪಡೆದಯುತ್ತಿದ್ದರು.
   ಅಂತಹದೊಂದು ಕಲ್ಲಿನ ಮೇಲೆ ಕುಳಿತು ರಂಗಣ್ಣನೆಂದ:
   "ಇನ್ನು ಹೋಗು, ಕರಿಯ."                                                 
   ಕರಿಯನ ತಲೆಯ ಮೇಲೆ ರುಮಾಲಿನಂತೆ ಸುತ್ತಿದ್ದ ಅಂಗವಸ್ತ್ರವಿತ್ತು. ಹೆಬ್ಬೆರಳನ್ನು              ಅದರೊಳಕ್ಕೆ ತುರುಕಿ ಕರಿಯ ತಲೆ ತುರಿಸಿಕೊಂಡ.
   " ಬಸ್ಸು ಅತ್ತಿಸಿ ಓತೀನಿ," ಎಂದ ಆತ.
   " ಅಂಗೇ ಮಾಡು.” 
    ರಂಗಣ್ಣ ಕೈಗಡಿಯಾರ ನೋಡಿದ. ಇನ್ನು ಇಪ್ಪತ್ತೈದು ನಿಮಿಷ. ಹೆಚ್ಚೆಂದರೆ ಮತ್ತೂ                 

ಹತ್ತು ನಿಮಿಷ.

   ಕರಿಯನಿಗಾದರೋ ಬಸ್ಸು ನೋಡುವ ಆಸೆ. ಅಲ್ಲದೆ ಬಸ್ಸು ಕಾಣಿಸಿದೊಡನೆ ಚಿಕ್ಕ

ಗೌಡರು ಅವನ ಕೈಗೆ ಪುಡಿಕಾಸು ಹಾಕುವುದು ಕಳೆದ ಎರಡು ವರ್ಷಗಳಿಂದ ನಡೆದುಬಂದಿರುವ