ಪುಟ:ನೋವು.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ನೋವು

ಪದ್ಧತಿ.ಆ ಕಾಸು ಮುಂದೆ ಸಂದಾಯವಾಗುವುದು ವೆಂಕಟಪ್ಪನಿಗೆ, ಬೀಡಿ ಕೊಳ್ಳುವುದ ಕ್ಕೋಸ್ಕರ.

       ಸೆಖೆ ಎಂದು ಕೋಟು ತೊಡದೆ ಬುಶ್ ಶರಟು ಧರಿಸಿದ್ದ ರಂಗಣ್ಣ. ಪ್ಯಾಂಟಿನ ಜೇಬಿನಿಂದ ಸಿಗರೇಟು ಪ್ಯಾಕೆಟನ್ನೂ ಬೆಂಕಿಪೊಟ್ಟಣವನ್ನೂ ಹೊರತೆಗೆದು ಒಂದನ್ನು ಆತ ಹಚ್ಚಿದ.
    ಕಣಿವೇಹಳ್ಳಿಯಿಂದ ನಡೆದು ಬರುತ್ತಿದ್ದಾಗ ಕರಿಯ ಮುನಿಯನ ಮರಣದ ಬಗೆಗೆ ಮಾತನಾಡಿದ್ದ.ದೆವ್ವ ಬಡಿದು ಮುನಿಯ ಸತ್ತನೆಂಬುದನ್ನು ತೋರಿಕೆಗೆ ಕರಿಯ ఒಪ್ಪಿದ್ದ

ನಾದರೂ ಹೊಲಕ್ಕೆ ಸಂಬಂಧಿಸಿದ ವ್ಯಾಜ್ಯ ಈಸಾವಿಗೆ ಕಾರಣ ಎಂಬ ಶಂಕೆ ಅವನನ್ನು ಬಾಧಿಸಿತ್ತು. ಚಿಕ್ಕ ಗೌಡರ ಅಭಿಪ್ರಾಯ ತಿಳಿಯುವ ತವಕ ಅವನಿಗೆ.

      “ಸತ್ತವನನ್ನ ಮಣ್ಣುಮಾಡಿ ಆದ್ಮೇಲೆ ಇನ್ನು ಯಾಕೆ ಆ ಮಾತು?”       
     -ಎಂಬ ಚುಟುಕು ಉತ್ತರದಿಂದ ಆ ಮಾತುಕತೆಯನ್ನು ಮುಕ್ತಾಯಗೊಳಿಸಿದ್ದ ರಂಗಣ್ಣ. 
     ಮುಂದೆ ಕರಿಯ, ನಗರದ ಬಗೆಗೆ, ರಂಗಣ್ಣನ ವೈದ್ಯಕೀಯ ಅಧ್ಯಯನದ ಬಗೆಗೆ ಅದೂ ಇದೂ ಕೇಳಿದ್ದ.ಹಾ-ಹು-ಸ್ವರಗಳಿಗಿಂತ ಹೆಚ್ಚಿನ ಉತ್ತರವನ್ನು ರಂಗಣ್ಣ ನೀಡಲಿಲ್ಲ. 

ಇವತ್ತು ಚಿಕ್ಕ ಒಡೆಯರ ಮನಸ್ಸು ಸರಿಯಾಗಿಲ್ಲ – ಎಂದು ಕೊನೆಯಲ್ಲಿ ಕರಿಯ ಸುಮ್ಮನಾಗಿದ್ದ.

     ಈಗ ಆತ ಆಲದ ಮರದ ಬಿಳಲಿನಿಂದ ಒಂದು ಚೂರನ್ನು ಕಿತ್ತು ಹಲ್ಲುಗಳ ಮಧ್ಯೆ ಕಚ್ಚಿಕೊಂಡು, ಮರದ ಬುಡದಲ್ಲಿ ಕುಳಿತ.
     ಸಿಗರೇಟು ಸೇದುತ್ತ ರಂಗಣ್ಣ ಯೋಚಿಸಿದ: ಈವರೆಗೂ ಗಾಳಿಯಲ್ಲಿ ತೇಲುತ್ತಿದ್ದೆ;            ಇದೀಗ ನೆಲದ ಮೇಲೆ ನಡೆಯತೊಡಗಿದ್ದೇನೆ. ಚಿಕ್ಕವನೆಂದು ಉಪೇಕ್ಷೆ ಮಾಡಿಲ್ಲ; ನನ್ನ ಮಾತಿಗೆ ಅಪ್ಪ ಬೆಲೆ ಕೊಟ್ಟಿದಾರೆ. 
   –ನೇರವಾಗಿ ಆಸ್ಪತ್ರೆಗೆ ಹೋಗಿ 'ಮೆಡಿಸಿನ್ ಪ್ರೊಫೆಸರ'ನ್ನು ಕಾಣಬೇಕು. ತಂಗಿಯ 

ರೋಗ ಲಕ್ಷಣ ತಿಳಿಸಿ ಸಲಹೆ ಪಡೆಯಬೇಕು. ಸಾಧ್ಯವಾದರೆ ಆಸ್ಪತ್ರೆಯ ಔಷಧ ಭಂಡಾರ ದಿಂದಲೇ ಮಾತ್ರೆ–ಕಾಪ್ಸೂಲ್ ಗಳನ್ನು ಎತ್ತಿಕೊಂಡರಾಯಿತು. ಅಲ್ಲಿ ಸಿಗದಿದ್ದರೆ ಔಷಧ ಅಂಗಡಿಗಳು ಇದ್ದೇ ಇವೆಯಲ್ಲ. ಹೌಸ್ ಸರ್ಜನ್ ಶಟಗೋಪನ್ ತನಗೆ ಪರಿಚಯ. ಎರಡು ಮೂರು ಔಷಧದ ಅಂಗಡಿಗಳ ಒಡೆಯರು ಅವನ ಮಿತ್ರರು. ಜತೆಯಲ್ಲಿ ಕರೆದುಕೊಂಡು ಹೋಗಬೇಕು. ಕಡಮೆ ಬೆಲೆಗೆ ಔಷಧಿಗಳು ಸಿಗುತ್ತವೆ. ಬ್ಯಾಗು? ಇರುವ ಹಣ ಸಾಲದು. ಶಟಗೋಪನ್ ಒಂದು ಮಾತು ಹೇಳಿದರೆ ಸಾಲವಾಗಿ ಬ್ಯಾಗ್ ಪಡೆಯಬಹುದು. ರಜಾ ಮುಗಿದು ಕಾಲೇಜಿಗೆ ವಾಪಸಾದಾಗ ದುಡ್ಡು ಕೊಟ್ಟರಾಯಿತು.

   –ತನ್ನ ಊರವರ ದೃಷ್ಟಿಯಲ್ಲಿ ತಾನಿನ್ನೂ ಹುಡುಗ. ಆದರೆ ಬ್ಯಾಗ್ ನೋಡಿದ ಮೇಲೆ 

ಅವರ ದೃಷ್ಟಿ ಖಂಡಿತ ಬದಲಾಗುತ್ತದೆ. ಒಬ್ಬಿಬ್ಬರಿಗೆ ಗುಣವಾದ ಮೇಲಂತೂ ಹಳ್ಳಿಗೆ ಬಂದಾಗಲೆಲ್ಲ ಜನ ತನ್ನನ್ನ ಮುತ್ತುತ್ತಾರೆ.

  –ಹೀಗೆ ಕೊನೆಗೊಮ್ಮೆ ಪದ್ಮನ ಅಜ್ಜಿಯ ಗಡ್ಡೆ ಬೇರುಗಳ ಗೊಡ್ಡು ಔಷಧೋಪಚಾರ ಕಣಿವೇಹಳ್ಳಿಯಲ್ಲಿ ಕೊನೆಗಾಣುತ್ತದೆ. 
  ಕಿರಿದಾಗಿದ್ದ ಸಿಗರೇಟನ್ನು ತನ್ನ ಹಿಂದಿದ್ದ ತಗ್ಗಿಗೆ ರಂಗಣ್ಣ ಎಸೆದ.
  ಕರಿಯ ಎದ್ದುನಿಂತ. ಆತನಿಗೆ ಆ ತುಣುಕಿನ ಮೇಲೆ ಕಣ್ಣು. ಓಡಿ ಹೋಗಿ ಎತ್ತಿಕೊಂಡು 

ಆರಿಸಿ ಕಿವಿಯ ಹಿಂದಿಟ್ಟುಕೊಳ್ಳುವ ಆಸೆ. ಹಳ್ಳಿಗೊಮ್ಮೆ ರೆವೆನ್ಯೂ ಇನ್ಸ್ ಪೆಕ್ಟರು ಬಂದಿದ್ದಾಗ