ಪುಟ:ನೋವು.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

છે. ನೋವು ರಂಗಣ್ಣ ಕೈ ಅಡ್ಡ ಹಿಡಿಯಲು ಸಿದ್ಧನಾದ. ಕರಿಯನೆ ನೆನಪಾಗಿ ಪಾಕೀಟಿನಿಂದ ಹತು ಪೈಸೆ ನಾಣ್ಯವೊಂದನ್ನು ತೆಗೆದುಕೊಟ್ಟ ತಲೆಗೆ ಸುತ್ತಿದ್ದ ಅಂಗವಸ್ತ್ರವನ್ನು ಬಿಚ್ಚಿ ಅದರ ಒಂದು ತುದಿಯಲ್ಲಿ ಆ ನಾಣ್ಯವನ್ನು ಬಿಗಿದುಕಟ್ಟಿದ ಕರಿಯ. - ಬಸ್ಸು ಬಂತು. ರಂಗಣ್ಣ, ಕರಿಯ ಇಬ್ಬರೂ ತೋಳುಗಳನ್ನು ಅಡ್ಡ ಹಿಡಿದುದೂ ಆಯಿತು. - ಆ ಕೆಂಪು ವಾಹನ ವೇಗ ಕಡಮೆ ಮಾಡುವ ಲಕ್ಷಣ ಕಾಣಿಸಲಿಲ್ಲ, ಅದು ತೀರಾ ಹತ್ತಿರ ಬಂದಂತೆ ರಂಗಣ್ಣ ಕಿರಿಚಿದ

  • ಹೋಲಾನ್ ! ಓಲಾನ್ ! ವನ್ ಸೀಟ್ !" ಡೆತ್ರೈವರನಿಂದ లుతేరా సిరికిల్ల చి0ు రేస్న్నే, ಅವರಿಬ್ಬರನ್ನೂ ಬಸ್ಸು ದಾಟಿ ಹೋದಂತೆ, ಜನ ಕುಳಿತು ನಿಂತು ತೂಗಾಡಿ ಆ ವಾಹನ ಜೇನುಗೂಡಾಗಿದ್ದುದನ್ನು ರಂಗಣ್ಣ ಕಂಡ. -

ಧೂಳು ಮೇಲಕ್ಕೆ ಏರಿತು. ನಿರಾಶೆಯ ಆ ಘಳಿಗೆಯಲ್ಲಾ ರಂಗಣ್ಣ ಕಣ್ಣ ಮJಾಗು ಗಳನ್ನು ಮುಚ್ಚಿಕೊಂಡ. ಎದ್ದ ಧೂಳು ಮತ್ತೆ ಕೆಳಕ್ಕಿಳಿಯಿತು. ನಿಸ್ಸೇಜ ಮುಖದಿಂದ ಅಂಗೈಯನ್ನು ರಂಗಣ್ಣ ತೆಗೆದ. ಪೆಚ್ಚುಮೋರೆ ಹಾಕಿಕೊಂಡು ಕರಿಯ ಕೇಳಿದ: * ಈಗ ಏನಾಡಾಣಾ?" - " ಮಾಡೋದೇನು, ಇನ್ನೊಂದು ಬಸ್ಸಿಗಾಗಿ ಕಾಯೋದು." - ಸಾಧಾರಣವಾಗಿ ಆ ರೀತಿ ಆಗುತ್ತಿರಲಿಲ್ಲ. ಆದರೆ ಈ ದಿನವೇ ಹೀಗಾಗಬೇಕೆ? ಇನ್ನೊಂದು ಬಸ್ಸು ಬರುವುದು ಸುಮಾರು ಹನ್ನೆರಡು ಘಂಟೆಗೆ ಅದರಲ್ಲಿ ತಾನು ಪ್ರಯಾಣ ಬೆಳೆಸಿದರೆ ಭಾಗ್ಯನಗರ ಸೇರುವುದು ಒಂದೂವರೆ ಘಂಟೆಗೆ ಅಷ್ಟು ಹೊತ್ತಿಗೆ ಪ್ರೊಫೆಸರು ಮನೆಗೆ ಹೋಗಿರುತಾರೆ, ಶಟಗೋಪನ್ ಸಿಗುವನೋ ಇಲ್ಲವೋ... ಕೆಲಸ ಮುಗಿಸಿ ನಾಲ್ಕು ಘಂಟೆಗೆ ತಾನು ಹಳ್ಳಿಗೆ ಮರಳುವುದಂತೂ ಸುಳ್ಳು ಮಾತು.. ಹಳ್ಳಿಯಿಂದ ಹೊರಟು ಬಂದಾಗ ರಂಗಣ್ಣನಿಗಿದ್ದ ಉತ್ಸಾಹ ಮಾಯವಾಗಿ, ಹೀಗೂ ಆಯಿತಲ್ಲ – ಎಂದು ಆತ ಚಡಪಡಿಸಿದ. - ಮುಖ ಬೆವರುತ್ತಿತು, ಕರವಸ್ತ್ಯವನ್ನು ಹೊರಕ್ಕೆ ತೆಗೆದು ಬೆವರು ಒರೆಸಿಕೊಂಡ. ಮೌನದಲ್ಲಿ ಕೆಲ ನಿಮಿಷಗಳು ಕಳೆದ ಮೇಲೆ ಕರಿಯನಿಗೆ ಆತನೆಂದ: " ನೀನು ವಾಪ ಹೋಗು. ಬಸ್ನಲ್ಲಿ ಸೀಟು ಸಿಗಲಿಲ್ಲ, ಇನ್ನೊಂದು ಬಸ್ನಲ್ಲಿ ಹೋಗಾರೆ ఆంē వాున్వేలి జెల్స్లు.” - ಬಿಸಿಲಲ್ಲಿ ಚಿಕ್ಕ ಗೌಡರೊಬ್ಬರನ್ನೇ ಬಿಟು ಹಿಂತಿರುಗಬೇಕೆ ಕರಿಯ? ಮನಸ್ಸು ಒಡಂಬಡದೆ ಅವನೆಂದ: * ಬಸ್ಸು ಬರೋಗಂಟಾ ನಿಂತಿದ್ದೀನಿ ಒಡೆಯಾ." - * ಬ್ಯಾಡ. ನಾ ಹೇಳೋದು ಕೇಳು. ಮನೇಲಿ ಕೆಲಸ ಇರದೆ. ಈಗ್ಲೇ ಹೋಗು. ಸಾಯಂಕಾಲ ಆರು ಘಂಟೆಯೊಳಗೆಲ್ಲಾ ಇಲ್ಲಿಗೆ ಬಂದ್ದಿಡು.” ನಿರುಪಾಯನಾಗಿ ಕರಿಯ, " ಹೂ೦.." ಎ೦ದ.